ಭಾರತದಲ್ಲಿ ಸಾವಿರಾರು ಘಟಾನುಘಟಿ ಉದ್ಯಮಿಗಳಿದ್ದಾರೆ. ಅವರಲ್ಲೂ ಕೆಲವರು ಉದ್ಯಮ ದೈತ್ಯರು. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದವರು. ಅವರೆಲ್ಲರ ನಡುವೆ ದೇಶದ ಜನರ ಪ್ರೀತಿಗೆ ಅತ್ಯಂತ ಹೆಚ್ಚು ಪಾತ್ರರಾಗಿದ್ದವರು ಟಾಟಾ ಸನ್ಸ್ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ. ಉದ್ಯಮದಲ್ಲಿ ಗಳಿಸಿದ ಹಣದಲ್ಲಿ ಜನಸೇವೆಗೆ ಸಾಕಷ್ಟನ್ನು ಮುಡಿಪಾಗಿಟ್ಟದ್ದು ಮಾತ್ರವಲ್ಲ, ಸಮಾಜದ ಹಿತಚಿಂತನೆಗೆ ಮಿಡಿಯುತ್ತಿದ್ದ ಉದ್ಯಮಿಯಾಗಿ, ಭಾರತದ ಜನರಿಗೆ ಯಾವುದು ಅಗತ್ಯ ಎಂದು ಸ್ಪಷ್ಟವಾಗಿ ತಿಳಿದುಕೊಂಡು ಅಂತಹ ಉತ್ಪನ್ನಗಳನ್ನೇ ಉತ್ಪಾದಿಸುತ್ತಾ, ಜನರ ಜೀವನ ಮಿಡಿತಕ್ಕೆ ಸ್ಪಂದಿಸಿದ ಉದ್ಯಮಿಯಾಗಿದ್ದ ರತನ್ ಟಾಟಾ ೮ ದಶಕಗಳ ಸಾರ್ಥಕ ಜೀವನಕ್ಕೆ ಟಾಟಾ ಹೇಳಿದ್ದಾರೆ.

ಉಳಿದೆಲ್ಲ ಉದ್ಯಮಗಳಿಗಿಂತ ರತನ್ ಟಾಟಾ ಭಿನ್ನ. ಲಾಭದಾಯಕ ಉದ್ಯಮಗಳ ಜತೆ ದೇಶ, ಸಮಾಜ ಹಾಗೂ ಇಡೀ ಉದ್ಯಮ ಕ್ಷೇತ್ರವನ್ನು ಕಟ್ಟುವ ಕೆಲಸವನ್ನು ಮಾಡಿದವರು. ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಸರಿಸಾಟಿಯಿಲ್ಲದ ಕೆಲಸ ಮಾಡಿದವರು. ಉದ್ಯಮಿಗಳು ದೇಶದಲ್ಲಿ ಸಾಕಷ್ಟಿದ್ದಾರೆ. ಆದರೆ ಸಮಾಜಮುಖಿ ಉದ್ಯಮಿಗಳ ಸಂಖ್ಯೆ ಕಡಮೆಯಿದೆ. ಇಂತಹ ಸಮಾಜಮುಖಿ ಉದ್ಯಮಿಗಳಲ್ಲಿ ಮುಂಚೂಣಿಯಲ್ಲಿದ್ದವರೇ ರತನ್ ಟಾಟಾ.

೮೬ ವರ್ಷದ ರತನ್ ಟಾಟಾ ಅವರು ಉದ್ಯಮಿಯಾಗಿ ಎಷ್ಟು ಜನಪ್ರಿಯರೋ ಜನೋಪಕಾರಿ ಕೆಲಸದ ಮೂಲಕವೂ ಅಷ್ಟೇ ಪ್ರಖ್ಯಾತಿ ಪಡೆದವರು. ಅವರು ಕಂಡಿರುವ ಯಶಸ್ಸು ಕೇವಲ ಓರ್ವ ಉದ್ಯಮಿಯ ವೃತ್ತಿ ರಂಗದ ಸಫಲತೆ ಎಂಬುದಕ್ಕಿAತ ಅವರ ವೃತ್ತಿರಂಗದ ಯಶಸ್ಸು ಭಾರತದ ಆರ್ಥಿಕತೆಯ ಪ್ರಗತಿಗೂ ದಾರಿದೀಪದಂತಾಯಿತು. ಅರ್ಥಾತ್ ರತನ್ ಟಾಟಾ ಮತ್ತು ಭಾರತದ ಉದ್ಯಮ ರಂಗ ಒಂದಕ್ಕೊAದು ಪೂರಕವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿದ್ದು ಇತಿಹಾಸ.

ಅತ್ಯಂತ ನಾಚಿಕೆ ಸ್ವಭಾವದ ಹಾಗೂ ಏಕಾಂಗಿಯಾಗಿಯೇ ಉಳಿದ ರತನ್ ಟಾಟಾ ಎಲ್ಲಿಯೂ ವಿವಾದಕ್ಕೆ ಹಾಗೂ ಅನಗತ್ಯ ಕಾರಣಕ್ಕೆ ಸುದ್ದಿಗೆ ಗ್ರಾಸವಾದವರಲ್ಲ. ೨೦೧೨ರಲ್ಲಿ ತಮ್ಮ ೭೫ನೇ ವಯಸ್ಸಿನಲ್ಲಿ ನಿವೃತ್ತರಾದಾಗ ಎರಡು ದಶಕಗಳಿಗೂ ಹೆಚ್ಚು ಕಾಲ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೊರ ಬಂದಾಗಲೂ ಅಪಾರ ಜನಪ್ರಿಯತೆ ಗಿಟ್ಟಿಸಿಕೊಂಡವರು.

ರತನ್ ಟಾಟಾ ಬೆಳವಣಿಗೆ

೧೯೩೭ರಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ೧೦ನೇ ವಯಸ್ಸಿನಲ್ಲಿ ಪೋಷಕರಿಂದ ಬೇರ್ಪಟ್ಟು ಅಜ್ಜಿಯ ಪಾಲನೆಯಲ್ಲಿ ಬೆಳೆದಿದ್ದರು. ಕಾರ್ನೆಲ್ ವಿಶ್ವ ವಿದ್ಯಾಲಯದಿಂದ ಆರ್ಕಿಟೆಕ್ಚರಲ್ ಮತ್ತು ಸ್ಟçಕ್ಚರಲ್ ಇಂಜಿನಿಯರಿAಗ್ ಪದವಿ ಮತ್ತು ಹಾರ್ವರ್ಡ್ ಅಡ್ವಾನ್ಸ್÷್ಡ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಪದವಿ ಪಡೆದಿದ್ದರು. ಈ ವೇಳೆ ಅವರಿಗೆ ಐಬಿಎಂನಿAದ ಉದ್ಯೋಗದ ಅವಕಾಶ ಬಂದಿದ್ದರೂ ಅದನ್ನು ತಿರಸ್ಕರಿಸಿದ್ದರು. ಅವರು ೧೯೬೨ರಲ್ಲಿ ಟೆಲ್ಕೊ (ಈಗ ಟಾಟಾ ಮೋಟಾರ್ಸ್) ಶಾಪ್ ಮೂಲಕ ಕೆಲಸ ಆರಂಭಿಸಿದ್ದರು. ಬಳಿಕ ಟಾಟಾ ಗ್ರೂಪ್‌ನ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು. ಅಂತಿಮವಾಗಿ ೧೯೭೧ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟಾçನಿಕ್ಸ್ (ನೆಲ್ಕೊ) ನಿರ್ದೇಶಕರಾದರು. ಅಪ್ರೆಂಟಿಸ್‌ನಿAದ ಆರಂಭಗೊAಡು ನಿರ್ದೇಶಕರಾಗಲು ಅವರು ೯ ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದರು.

ವಿಶ್ವದೆತ್ತರಕ್ಕೇರಿಸಿದ ಧೀಮಂತ

ಟಾಟಾ ಸಮೂಹವನ್ನು ವಿಶ್ವಮಟ್ಟಕ್ಕೆ ಏರಿಸಿದ ಖ್ಯಾತಿ ರತನ್ ಅವರದ್ದು. ಟಾಟಾ ಸಮೂಹವು ವಿದೇಶಿ ಕಂಪೆನಿಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ವೇಳೆ ಅಪಾರ ಧೈರ್ಯ ತೋರಿದ್ದರು. ಟೆಟ್ಲಿ ೪೩೧.೩ ಮಿಲಿಯನ್ ಡಾಲರ್, ಕೋರಸ್ ೧೧.೩ ಬಿಲಿಯನ್ ಡಾಲರ್, ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ೨.೩ ಬಿಲಿಯನ್ ಡಾಲರ್, ಬ್ರನ್ನರ್ ಮಾಂಡ್, ಜನರಲ್ ಕೆಮಿಕಲ್ ಇಂಡಸ್ಟಿçಯಲ್ ಪ್ರಾಡಕ್ಟ್÷್ಸ ಮತ್ತು ಡೇವೂ ಸಂಸ್ಥೆಯನ್ನು ೧೦೨ ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಳ್ಳುವಲ್ಲಿ ಅವರು ಅಪಾರ ಧೈರ್ಯ ತೋರಿದ್ದರು. ಏರ್ ಇಂಡಿಯಾವನ್ನು ಮತ್ತೆ ಟಾಟಾ ಮಡಿಲಿಗೆ ತೆಗೆದುಕೊಂಡಿದ್ದು ದೊಡ್ಡ ಸಾಧನೆ.

ಏರ್ ಇಂಡಿಯಾ ಅವರ ಚಿಕ್ಕಪ್ಪ ಮತ್ತು ಮಾರ್ಗ ದರ್ಶಕ ಜಹಾಂಗೀರ್ ರತನ್‌ಜಿ ದಾದಾಭಾಯ್ ಟಾಟಾ ಅವರು ೧೯೩೨ರಲ್ಲಿ ಸ್ಥಾಪಿಸಿದ ವಿಮಾನಯಾನ ಸಂಸ್ಥೆ.

ಟಾಟಾ ಉದ್ಯಮವಷ್ಟೇ ಅಲ್ಲ, ನಂಬಿಕೆ...

ದೇಶದ ಉದ್ಯಮರಂಗದಲ್ಲಿ ಟಾಟಾ ಕುಟುಂಬಕ್ಕೆ ತನ್ನದೇ ಆದ ಹೆಸರಿದೆ. ಉಪ್ಪಿನಿಂದ ಹಿಡಿದು ಅಟೋಮೊಬೈಲ್, ಸ್ಟೀಲ್, ಸಾಫ್ಟ್ವೇರ್, ದೂರಸಂಪರ್ಕ, ವಿಮಾನಯಾನದ ತನಕ ಟಾಟಾ ಉದ್ಯಮವಿಲ್ಲದ ಕ್ಷೇತ್ರವಿಲ್ಲ. ೧೮೩೯ರಲ್ಲಿ ಜಮಶೆಡ್‌ಜಿ ಟಾಟಾ ಆರಂಭಿಸಿದ ಉದ್ಯಮವನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿ ೧೦೦ಕ್ಕೂ ಹೆಚ್ಚು ಉದ್ಯಮ ಸಮೂಹವಾಗಿ ವಿಸ್ತರಿಸುವುದರಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದರು. ಜಮಶೆಡ್‌ಜಿ ಟಾಟಾ ಅವರು ೧೮೬೮ರಲ್ಲಿ ಹತ್ತಿ ವ್ಯಾಪಾರದೊಂದಿಗೆ ಉದ್ಯಮ ಆರಂಭಿಸಿದ್ದರು. ನಂತರ ತಾಜ್ ಹೊಟೇಲ್‌ಗಳನ್ನು ನಿರ್ಮಿಸಿದ್ದರು. ಇವರ ಬಳಿಕ ದೊರಾಬಜಿ ಟಾಟಾ ಅವರು ಟಾಟಾ ಉದ್ಯಮ ಸಮೂಹವನ್ನು ಗಮನಾರ್ಹವಾಗಿ ವಿಸ್ತರಿಸಿದ್ದರು. ಟಾಟಾ ಪರ್ವ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಅವರ ಕೊಡುಗೆಯಾಗಿತ್ತು. ಇವರ ಬಳಿಕ ಜಮಶೆಡ್‌ಜಿ ಟಾಟಾ ಅವರ ಕಿರಿಯ ಮಗ ರತನ್‌ಜಿ ಟಾಟಾ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕ್ಷೇತ್ರದತ್ತ ಹೆಚ್ಚು ಒತ್ತು ನೀಡಿದರು.

ಅವರ ನಿಧನದ ನಂತರ ಅವರ ಪತ್ನಿ ನವಾಜ್ ಭಾಯ್ ಸೆಟ್ ಕೆಲ ಕಾಲ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಪುತ್ರ ನೇವಲ್ ಟಾಟಾ ಉಕ್ಕು ಮತ್ತು ಟಾಟಾ ಪವರ್ ವ್ಯವಹಾರಗಳನ್ನು ಯಶಸ್ಸಿನತ್ತ ಮುನ್ನಡೆಸಿದ್ದರು. ಇವರ ಮಗನಾಗಿ ಜನಿಸಿದ ರತನ್ ಟಾಟಾ ಅವರ ಅಧಿಕಾರಾವಧಿಯಲ್ಲಿಯೇ ಟಾಟಾ ಗ್ರೂಪ್ ವಿಶ್ವದೆತ್ತರಕ್ಕೆ ಏರಿತು.

ರತನ್ ಟಾಟಾ ಅನುಭವಿ ಉದ್ಯಮಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವ್ಯವಹಾರ ಚತುರತೆ, ದೂರದೃಷ್ಟಿಗಿಂತಲೂ ಉದ್ಯಮ ಕ್ಷೇತ್ರದಲ್ಲಿ ಅವರು ಕೊನೇ ತನಕ ಕಾಪಾಡಿಕೊಂಡು ಬಂದಿರುವ ನೈತಿಕತೆ ಎಲ್ಲದಕ್ಕಿಂತ ದೊಡ್ಡದು. ಈ ಮೂಲಕ ಕುಟುಂಬ ವ್ಯವಹಾರವನ್ನು ಅಂರ‍್ರಾಷ್ಟಿçÃಯ ಉದ್ಯಮ ಸಾಮ್ರಾಜ್ಯವಾಗಿ ಪರಿವರ್ತಿಸಿದ್ದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯ ಅನೇಕ ಪಟ್ಟು ಹೆಚ್ಚಾಗಿತ್ತು. ೨೦೧೧-೧೨ ರಲ್ಲಿ ಒಟ್ಟು ೧೦೦ ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು.

ರತನ್ ಟಾಟಾ ಬೆಳವಣಿಗೆ...

೧೯೩೭ರಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಆರಂಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವರು. ೧೦ನೇ ವಯಸ್ಸಿನಲ್ಲಿ ಪೋಷಕರಿಂದ ಬೇರ್ಪಟ್ಟು ಅಜ್ಜಿಯ ಪಾಲನೆಯಲ್ಲಿ ಬೆಳೆದಿದ್ದರು. ಐಷಾರಾಮಿ ಜೀವನ ಶೈಲಿಯೊಂದಿಗೆ ಅವರು ಬೆಳೆದರು. ಕಾರ್ನೆಲ್ ವಿಶ್ವ ವಿದ್ಯಾಲಯದಿಂದ ಆರ್ಕಿಟೆಕ್ಚರಲ್ ಮತ್ತು ಸ್ಟçಕ್ಚರಲ್ ಇಂಜಿನಿಯರಿAಗ್ ಪದವಿ ಮತ್ತು ಹಾರ್ವರ್ಡ್ ಅಡ್ವಾನ್ಸ್÷್ಡ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಪದವಿ ಪಡೆದಿದ್ದರು. ಈ ವೇಳೆ ಅವರಿಗೆ ಐಬಿಎಂನಿAದ ಉದ್ಯೋಗದ ಅವಕಾಶ ಬಂದಿದ್ದರೂ ಅದನ್ನು ತಿರಸ್ಕರಿಸಿದ್ದರು. ಅವರು ೧೯೬೨ರಲ್ಲಿ ಟೆಲ್ಕೊ (ಈಗ ಟಾಟಾ ಮೋಟಾರ್ಸ್) ಶಾಪ್ ಮೂಲಕ ಕೆಲಸ ಆರಂಭಿಸಿದ್ದರು.

ರತನ್ ಟಾಟಾ ತಮ್ಮ ವೃತ್ತಿ ಜೀವನವನ್ನು ತಳಮಟ್ಟದಿಂದ ಆರಂಭಿಸಿದ್ದರು. ಟಾಟಾ ಗ್ರೂಪ್‌ನ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು. ಅಂತಿಮವಾಗಿ ೧೯೭೧ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟಾçನಿಕ್ಸ್ (ನೆಲ್ಕೊ) ನಿರ್ದೇಶಕರಾದರು. ಅಪ್ರೆಂಟಿಸ್‌ನಿAದ ಆರಂಭಗೊAಡು ನಿರ್ದೇಶಕರಾಗಲು ಅವರು ೯ ವರ್ಷ ಕಷ್ಟಪಟ್ಟು ಕೆಲಸ ಮಾಡಿದರು. ‘ಯಾವುದೇ ಬೆಲೆ ತೆತ್ತಾದರೂ ಘನತೆ ಉಳಿಸಿಕೊಳ್ಳಲು ನನ್ನ ಅಜ್ಜಿ ನಮಗೆ ಕಲಿಸಿದ್ದಾರೆ. ಈ ಮೌಲ್ಯ ಎಂದಿಗೂ ನನ್ನೊಂದಿಗೆ ಉಳಿಯಲಿದೆ’ ಎಂದು ರತನ್ ಟಾಟಾ ಹೇಳುತ್ತಿದ್ದರು.

ಉದ್ಯಮದಲ್ಲಿ ಎದೆಗಾರಿಕೆ...

ಭಾರತದ ಮೂಲೆಮೂಲೆಯಲ್ಲೂ ಸಿಗುವ ಏಕೈಕ ಬ್ರಾಂಡ್ ಟಾಟಾ. ಟಾಟಾ ಉತ್ಪನ್ನ ಅಥವಾ ಸೇವೆಯನ್ನು ಬಳಸದ ವ್ಯಕ್ತಿಗಳನ್ನು ಹುಡುಕುವುದು ಕಷ್ಟ. ಟಾಟಾ ಸಾಲ್ಟ್ನಿಂದ ಟಾಟಾ ಮೋಟಾರ್ಸ್ವರೆಗೆ ಜನರ ಆದ್ಯತೆಗೆ ತಕ್ಕ ಹಾಗೆ ಬಳಸುತ್ತಿದ್ದಾರೆ. ಟಾಟಾ ಬ್ರಾಂಡ್ ಉತ್ಪನ್ನಗಳೇ ಭಾರತದಲ್ಲಿ ಇರಲಿಕ್ಕಿಲ್ಲ, ಟಾಟಾ ಭಾರತದ ಅತ್ಯಂತ ಸರ್ವವ್ಯಾಪಿ ಬ್ರಾಂಡ್.

ಟಾಟಾ ಸಮೂಹವನ್ನು ವಿಶ್ವಮಟ್ಟಕ್ಕೆ ಏರಿಸಿದ ಖ್ಯಾತಿ ರತನ್ ಅವರದ್ದು. ಟಾಟಾ ಸಮೂಹವು ವಿದೇಶಿ ಕಂಪೆನಿಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ವೇಳೆ ಅಪಾರ ಧೈರ್ಯ ತೋರಿದ್ದರು. ಟೆಟ್ಲಿ ೪೩೧.೩ ಮಿಲಿಯನ್ ಡಾಲರ್, ಕೋರಸ್ ೧೧.೩ ಬಿಲಿಯನ್ ಡಾಲರ್, ಜಾಗ್ವಾರ್ ಲ್ಯಾಂಡ್ ರೋವರ್ ೨.೩ ಬಿಲಿಯನ್ ಡಾಲರ್, ಬ್ರನ್ನರ್ ಮಾಂಡ್, ಜನರಲ್ ಕೆಮಿಕಲ್ ಇಂಡಸ್ಟಿçಯಲ್ ಪ್ರಾಡಕ್ಟ್÷್ಸ ಮತ್ತು ಡೇವೂ ಸಂಸ್ಥೆಯನ್ನು ೧೦೨ ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಕೊಳ್ಳುವುದಕ್ಕೆ ಅವರು ಕಾರಣರಾಗಿದ್ದರು.

ಈ ಮೂಲಕ ಟಾಟಾ ಗ್ರೂಪ್ ೧೦೦ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ. ಜತೆಗೆ ಭಾರತೀಯ ಕೈಗಾರಿಕಾ ಕ್ಷೇತ್ರಕ್ಕೆ ಗಮನಾರ್ಹ ಉತ್ತೇಜನ ನೀಡಿತು. ಕಂಪೆನಿಯು ಪ್ರಪಂಚದಾದ್ಯAತದ ಹೊಟೇಲ್‌ಗಳು, ರಾಸಾಯನಿಕ ಕಂಪೆನಿಗಳು, ಸಂವಹನ ಜಾಲಗಳು ಮತ್ತು ಇಂಧನ ಪೂರೈಕೆದಾರ ಕಂಪೆನಿಗಳನ್ನು ತೆಕ್ಕೆಗೆ ತೆಗೆದುಕೊಂಡಿತು. ಅಪಾರ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಮತ್ತೆ ಟಾಟಾ ಮಡಿಲಿಗೆ ತೆಗೆದುಕೊಂಡಿದ್ದು ದೊಡ್ಡ ಸಾಧನೆ. ಏರ್ ಇಂಡಿಯಾ ಅವರ ಚಿಕ್ಕಪ್ಪ ಮತ್ತು ಮಾರ್ಗದರ್ಶಕ ಜಹಾಂಗೀರ್ ರತನ್‌ಜಿ ದಾದಾಭಾಯ್ ಟಾಟಾ ಅವರು ೧೯೩೨ರಲ್ಲಿ ಸ್ಥಾಪಿಸಿದ ವಿಮಾನಯಾನ ಸಂಸ್ಥೆ.

ರತನ್ ಟಾಟಾ ಅನುಭವಿ ಉದ್ಯಮಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವ್ಯವಹಾರ ಚತುರತೆ, ದೂರದೃಷ್ಟಿಗಿಂತಲೂ ಉದ್ಯಮ ಕ್ಷೇತ್ರದಲ್ಲಿ ಅವರು ಕೊನೇ ತನಕ ಕಾಪಾಡಿಕೊಂಡು ಬಂದಿರುವ ನೈತಿಕತೆ ಎಲ್ಲದಕ್ಕಿಂತ ದೊಡ್ಡದು. ಈ ಮೂಲಕ ಕುಟುಂಬ ವ್ಯವಹಾರವನ್ನು ಅಂರ‍್ರಾಷ್ಟಿçÃಯ ಉದ್ಯಮ ಸಾಮ್ರಾಜ್ಯವಾಗಿ ಪರಿವರ್ತಿಸಿದ್ದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯ ರೂ. ೧೦ ಸಾವಿರ ಕೋಟಿಗಳಿಂದ ೩೦ ಲಕ್ಷ ತಿರಸ್ಕೃತರಾದ ಜಾಗದಲ್ಲೇ ಪುರಸ್ಕೃತರಾಗುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಸಾಧ್ಯವಿದೆ ಅಂತಾದವರು ಎಲ್ಲೇ ಇದ್ದರೂ ಅವರು ಯಶಸ್ವಿಗಳಾಗುತ್ತಾರೆ.

ತನಗಾದ ಅಪಮಾನಕ್ಕೆ ಪ್ರತೀಕಾರ ಎಂಬAತೆ ಹತಾಶೆಯ ಭಾವನೆಯಿಂದ ಮತ್ತೆ ಮೇಲೆದ್ದು ನಿಂತು ಜೀವನವನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗುವಂತೆ ಜೀವಿಸಿದ ವ್ಯಕ್ತಿತ್ವವೇ ರತನ್ ಟಾಟಾ.

ಭಾರತದಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದದ್ದು ಜೇಮ್ ಶೇಟ್ ಜೀ ಟಾಟಾ. ಅವರು ಟಾಟಾ ಸಂಸ್ಥೆಯ ಸಂಸ್ಥಾಪಕರು. ೧೮೬೮ ರಲ್ಲೇ ಭಾರತದಲ್ಲಿ ಕಾಟನ್ ಮಿಲ್ ಆರಂಭಿಸಿದ್ದು ಟಾಟಾ. ಮುಂದೆ ಉಕ್ಕಿನ ಕಂಪೆನಿ ಆರಂಭಿಸಲು ಮುಂದಾದಾಗ ಟಾಟಾ ಸಂಸ್ಥೆ ಮೊದಲ ಸಲ ಅವಮಾನ ಎದುರಿಸಿತು.

ಟಾಟಾ ಉತ್ಪಾದನೆ ಮಾಡಿದ ಉಕ್ಕನ್ನು ನಾವು ತಿಂದು ಬಿಡಬಲ್ಲೆವು ಎಂದು ಬ್ರಿಟೀಷ್ ಕಂಪೆನಿ ಆಗ ಗುಣಮಟ್ಟದ ಬಗ್ಗೆ ಪರಿಹಾಸ್ಯ ಮಾಡಿತು! ಈ ಅವಮಾನಕ್ಕೆ ಉತ್ತರ ಎಂಬAತೆ ಟಾಟಾ ಸ್ಟೀಲ್ ಸ್ಥಾಪನೆ ಮಾಡಿ ಜಗತ್ತಿಗೇ ಅದ್ಭುತವಾದ ಉತ್ತರವನ್ನು ಜೇಮ್ ಶೇಟ್ ಜೀ ಟಾಟಾ ನೀಡಿಯೇ ಬಿಟ್ಟಿದ್ದರು. ಅವಮಾನಿಸಿದವರಿಗೆ ಟಾಟಾ ಕೊಟ್ಟ ಗೆಲುವಿನ ಉತ್ತರ ಅದಾಗಿತ್ತು.

ಆ ಕಾಲಕ್ಕೆ ವಿದೇಶಿಯರೇ ತುಂಬಿರುತ್ತಿದ್ದ ಮುಂಬೈನ ಅತ್ಯಂತ ಐಷಾರಾಮಿ ಹೊಟೇಲಲ್ಲೂ ಜಾಗತಿಕ ಮನ್ನಣೆ ಇದ್ದ ವಾಟ್ಸನ್ ಹೊಟೇಲಿಗೆ ಟಾಟಾರಿಗೆ ಒಮ್ಮೆ ಪ್ರವೇಶ ನಿರಾಕರಿಸಲಾಗಿತ್ತು. ಆ ಹೊಟೇಲಿನ ಮುಂದೆ ‘ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಲಾಗಿತ್ತು. ಯಾವಾಗ ತನಗೆ ಹೊಟೇಲ್ ಪ್ರವೇಶ ನಿರಾಕರಿಸಿತ್ತೋ. ಅಂದೇ ಅದೇ ಜಾಗದಲ್ಲೇ ನಿರ್ಣಯ ಮಾಡಿದ್ದರು, ಜಾಗತಿಕ ಮನ್ನಣೆಯ ಹೊಟೇಲ್ ಒಂದನ್ನು ಭಾರತದಲ್ಲೇ ನಿರ್ಮಿಸುತ್ತದೆ ಎಂದು ಟಾಟಾ ಅಂದೇ ನಿರ್ಣಯಿಸಿಬಿಟ್ಟಿದ್ದರು. ಅದೇ ಮುಂಬೈ ನಗರದಲ್ಲಿ ೧೯೦೩ ಡಿಸೆಂಬರ್ ೧೪ ರಂದು ಒಂದು ತಾಜ್ ಮಹಲ್ ಪ್ಯಾಲೇಸ್ ಹೆಸರಿನಲ್ಲಿ ಹೊಟೇಲ್ ಒಂದು ತಲೆಎತ್ತಿ ನಿಂತಿತ್ತು. ಅದು ಕೇವಲ ಕಟ್ಟಡ ಮಾತ್ರವೇ ಆಗಿರಲಿಲ್ಲ. ಭಾರತೀಯರ ಸ್ವಾಭಿಮಾನವನ್ನು ಕೆಣಕಿದ ಕಾರಣಕ್ಕೆ ಹುಟ್ಟಿದ ಮಹಲ್ ಆಗಿತ್ತು. ಅಂದಿನ ಕಾಲಕ್ಕೇ ಕೋಟಿ ರೂಪಾಯಿ ಸುರಿದು ನಿರ್ಮಿಸಿದ ಅರಮನೆಯಂತಹ ಹೊಟೇಲ್ ಅದು. ಪ್ರಪಂಚದ ನಾನಾ ಭಾಗದಿಂದ ಮುಂಬೈಗೆ ಗಣ್ಯಾತಿಗಣ್ಯರು ಬಂದು ತಂಗುವುದು ಅದೇ ತಾಜ್ ಹೊಟೇಲಿನಲ್ಲಿ!

ಇದು ಜೇಮ್ ಶೇಟ್ ಜೀ ಟಾಟ ತನಗಾದ ಅವಮಾನಗಳನ್ನ ಮೀರಿ ಬೆಳೆದು ತೋರಿಸಿದ ಸ್ಯಾಂಪಲ್‌ಗಳಾದರೆ ನಮ್ಮ ರತನ್ ಟಾಟಾ ಬದುಕಿನಲ್ಲಿ ಮತ್ತಷ್ಟು ಸ್ವಾರಸ್ಯಗಳಿದೆ, ಟಾಟಾ ಸಮೂಹಗಳು ಆಟೋಮೊಬೈಲ್ ಇಂಡಸ್ಟಿçಯಲ್ಲಿ ಟಾಟಾ ಇಂಡಿಕಾ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟು ನಷ್ಟವನ್ನು ಅನುಭವಿಸಿದ್ದ ಕಾಲವದು.

ಆಗ ಸಂಸ್ಥೆಯನ್ನು ಅಮೇರಿಕಾದ ಫೋರ್ಡ್ ಸಂಸ್ಥೆಗೆ ಮಾರಾಟ ಮಾಡಲು ರತನ್ ಟಾಟಾ ಅಮೇರಿಕಾಕ್ಕೆ ಹೋದಾಗ ಫೋರ್ಡ್ ಮುಖ್ಯಸ್ಥರು ‘ನಿಮಗೆ ಕಾರ್ ತಯಾರು ಮಾಡೋದು ಹೇಗೆ ಎಂದು ಗೊತ್ತಿಲ್ಲದ ಮೇಲೆ ಆಟಿಕೆಗಳನ್ನು ಮಾಡಿ ಮಾರಬಹುದಿತ್ತು’ ಎಂದು ತಮಾಷೆಯಾಗಿ ಹೇಳಿಬಿಡುತ್ತಾರೆ. ಈ ಮಾತು ಸಹಿಸದ ರತನ್ ಟಾಟಾ, ಅಲ್ಲೇ ಹೇಳುತ್ತಾರೆ, ನಮ್ಮ ಸಂಸ್ಥೆಯನ್ನು ನಾವು ಮಾರಾಟ ಮಾಡುತ್ತಿಲ್ಲ. ಬದಲಿಗೆ, ಆಟಿಕೆ ಕಾರ್‌ಗಳನ್ನೇ ಹೊಸ ವಿನ್ಯಾಸದಲ್ಲಿ ರೂಪಿಸುತ್ತೇವೆ. ನಿಮ್ಮ ಸಲಹೆಗೆ ಸ್ವಾಗತ.

ಆ ಸಭೆಯ ಬಳಿಕ ಕೆಲಹೊತ್ತು ಚಿಂತಾಮಗ್ನರಾದ ರತನ್ ಟಾಟಾ, ತನ್ನ ತಂಡದ ಸದಸ್ಯರಿಗೆ ಹೇಳುತ್ತಾರೆ, ಈ ವ್ಯಂಗ್ಯದ ಮಾತು ನಮಗೆಲ್ಲಾ ಪಾಠವಾಗಬೇಕು. ನಾವೂ ಒಂದು ಪುಟ್ಟ ಕಾರ್ ತಯಾರಿಸಿಯೇ ಇವರಿಗೆ ಉತ್ತರವಾಗಿ ತೋರಿಸಬೇಕು. ರತನ್ ಟಾಟಾ ತನ್ನ ತಂಡದೊAದಿಗೆ ದಿಟ್ಟತನದಿಂದ ರೂಪಿಸಿದ ಕಾರ್ ಟಾಟಾ ಇಂಡಿಕಾ ಕಾರ್ ಎಂದೇ ಪ್ರಸಿದ್ಧಿಯಾಯಿತು. ಕೆಲ ವರ್ಷಗಳ ನಂತರ ಫೋರ್ಡ್ ಸಂಸ್ಥೆ ನಷ್ಟಕ್ಕೊಳಗಾದಾಗ ಆ ಸಂಸ್ಥೆಯನ್ನೇ ಟಾಟಾ ಖರೀದಿ ಮಾಡಲು ಮುಂದಾಗುತ್ತಾರೆ.

ಯಾವ ಸಂಸ್ಥೆಯಿAದ ಅವಮಾನಗೊಂಡಿದ್ದರೋ ಅದೇ ಸಂಸ್ಥೆಯ ಜಾಗತಿಕ ಬ್ರಾಂಡ್ ಆದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಬ್ರಾಂಡ್ ಕಂಪೆನಿಗಳ ಖರೀದಿ ಪತ್ರಕ್ಕೆ ಟಾಟಾ ಸಹಿ ಮಾಡಿಯೇ ಬಿಡುತ್ತಾರೆ! ಆದ ಅವಮಾನಕ್ಕೆ ಕೊಟ್ಟ ಪ್ರತ್ಯುತ್ತರ ಇದಾಗಿತ್ತು.

ರತನ್ ಟಾಟಾ ಜೀವನದಲ್ಲಿ ಸಾಲು ಸಾಲು ಅಪಮಾನಗಳನ್ನು ಕಂಡಿದ್ದಾರೆ. ಪ್ರತೀ ಅವಮಾನಕ್ಕೂ ತಕ್ಕ ಉತ್ತರವನ್ನು ಟಾಟಾ ದಿಟ್ಟತನದಿಂದಲೇ ನೀಡಿದ್ದಾರೆ. ಅಂತಹ ಉತ್ತರಗಳೇ ಭಾರತದ ಉದ್ಯಮರಂಗವನ್ನು ಜಾಗತಿಕ ಮಟ್ಟದಲ್ಲಿ ಮೇಲೆದ್ದು ನಿಲ್ಲುವಂತೆ ಮಾಡಿದ ಹೊಸ ಆವಿಷ್ಕಾರಗಳಾದವು. ಜನರ ಮೆಚ್ಚಿನ ಬ್ರಾಂಡ್ ಆದವು. ಹೀಗೂ ಸಾಧ್ಯವಿದೆಯೇ ಎಂದು ನಿಬ್ಬೆರಗಾಗಿ ನೋಡುವಂಥೆ ಮಾಡಿದವು. ಪ್ರತೀ ಅವಮಾನದ ನಂತರ ಭಾರತದಲ್ಲಿ ಬೃಹತ್ ಉದ್ಯಮವೊಂದು ತಲೆಎತ್ತಿ ನಿಲ್ಲುವಂತೆ ಮಾಡಿದ್ದೇ ಟಾಟಾ ಸಾಧನೆಯಾಗಿದೆ.

ರತನ್ ಟಾಟಾ ಅವರಿಗಿದ್ದ ಛಲ, ಕೆಚ್ಚೆದೆಯ ನಿಲವು, ಸಕಾಲಿಕ ನಿರ್ಧಾರಗಳೇ ಅವರನ್ನು ಜಾಗತಿಕವಾಗಿ ಅತ್ಯಂತ ಮೇಧಾವಿ ಮತ್ತು ಶ್ರೀಮಂತ ಉದ್ಯಮಿಯಾಗಿಸಿತ್ತು. ರತನ್ ಜೀವನಕ್ಕೆ ಟಾಟಾ ಹೇಳಿರಬಹುದು. ಆದರೆ ಉದ್ಯಮಿಯೋರ್ವನಿಗೆ ಇರಬೇಕಾದ ದಿಟ್ಟತನ, ಛಲ, ಕೆಚ್ಚಿನ ಪ್ರತೀಕವಾಗಿ ಅವರು ತೋರಿದ ಮಾರ್ಗದರ್ಶನ, ಹಾಕಿಕೊಟ್ಟ ಸೂತ್ರಗಳು ಭಾರತೀಯ ಉದ್ಯಮ ರಂಗಕ್ಕೆ ಸದಾ ಆದರ್ಶದಂತಿರುತ್ತದೆ.