ಮಡಿಕೇರಿ, ಅ. ೧೦: ಯುವಕರಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಮೂಲಕ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ವಾಗಲಿ ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನಿರ ಮೈನಾ ಆಶಯ ವ್ಯಕ್ತಪಡಿಸಿದರು.

ಮಡಿಕೇರಿ ದಸರಾ ಕ್ರೀಡಾ ಸಮಿತಿ ಆಯೋಜಿಸಿದ್ದ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಸರಾ ಕ್ರೀಡಾ ಸಮಿತಿ ಮಾಜಿ ಅಧ್ಯಕ್ಷರಾದ ಜಗದೀಶ್ ಮಾತನಾಡಿ, ಕ್ರೀಡಾ ಸಮಿತಿ ಯಶಸ್ವಿ ಕ್ರೀಡಾಕೂಟ ಆಯೋಜನೆ ಮಾಡಿದೆ ಎಂದರು.

ಮಡಿಕೇರಿ ನಗರ ಠಾಣಾಧಿಕಾರಿ ಲೋಕೇಶ್ ಅಂಕಣದಲ್ಲಿ ತೆಂಗಿನ ಕಾಯಿಯ ಮೇಲೆ ಕರ್ಪೂರ ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.

ಸುಮಾರು ಇಪ್ಪತ್ತು ಪುರುಷ ತಂಡ ಮತ್ತು ಇದೇ ಪ್ರಥಮ ಬಾರಿಗೆ ಮಹಿಳಾ ತಂಡಗಳು ಪಾಲ್ಗೊಂಡು ಕ್ರೀಡಾಕೂಟಕ್ಕೆ ಮೆರಗು ನೀಡಿದವು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ವಹಿಸಿದ್ದರು. ಮುಡಾ ಮಾಜಿ ಅಧ್ಯಕ್ಷ ಚುಮ್ಮಿದೇವಯ್ಯ, ಕುಂದುರುಮೊಟ್ಟೆ ಮಂಟಪ ಸಮಿತಿ ಅಧ್ಯಕ್ಷ ರವಿ, ಮನು ಮಂಜುನಾಥ್, ಪ್ರಭು ರೈ, ಕವನ್ ಕೊತ್ತೋಳಿ, ದಿನೇಶ್ ಕೆ.ಆರ್. ದೇವರಾಜ್, ಹರೀಶ್, ಮಡ್ಲಂಡ ದರ್ಶನ್, ಕ್ರಿಸ್ಟೋಫರ್, ಪೀಟರ್, ಉಮೇಶ್ ಕುಮಾರ್, ಸುರ್ಜಿತ್, ಸತೀಶ್, ನಿರಂಜನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕ್ರೀಡಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುಗ್ಗಳ ಕಪಿಲ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.