ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮತ್ತೋರ್ವ ಅತಿಥಿ ಸನ್ಮಾನಿತರಾದ ಕಸ್ತೂರಿ ಭೀಮಯ್ಯ ಅವರು ಮಾತನಾಡಿ, ಯುವಪೀಳಿಗೆ ಉತ್ತಮ ಶಿಕ್ಷಣವನ್ನು ಪಡೆದು, ಒಳ್ಳೆಯ ಉದ್ಯೋಗವನ್ನು ಆರಿಸಿಕೊಳ್ಳುವುದರ ಮೂಲಕ ಉತ್ತಮ ಬದುಕನ್ನು ನಡೆಸು ವಂತಾಗಬೇಕು.

ಯಾವುದೇ ಮಾದಕ ಪದಾರ್ಥಗಳ ಸೇವೆನೆಗೆ ಬಲಿಯಾಗಿ ಅಮೂಲ್ಯ ಮನುಷ್ಯ ಜನ್ಮವನ್ನು ಅರ್ಧದಲ್ಲಿಯೇ ಮೊಟಕು ಗೊಳಿಸುವಂತಾಗಬಾರದೆAದು ಸಲಹೆ ನೀಡಿದರು. ಕೈಲ್‌ಪೊಳ್ದ್ ಸಂತೋಷಕೂಟದ ಪ್ರಯುಕ್ತ ಜನಾಂಗ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು.

ಸಭಾಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಜಿಲ್ಲಂಡ ದಾದೂ ಮಾದಪ್ಪ ವಹಿಸಿದ್ದರು. ಹಿಂದಿನ ಸಾಲಿನ ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ವಾಚಿಸಿದರು. ಸಭೆಯಲ್ಲಿ ೧೦ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆ ಹೊಂದಿದ ಮಲ್ಲಂಡ ಇಳಾ ತಂಗಮ್ಮ, ಪುದಿಯೊಕ್ಕಡ ಕೃಷ್ಣ ಪೊನ್ನಣ್ಣ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಕಳ್ಳೀರ ಲಿಸ್ಮಾ ಪೂಣಚ್ಚ, ಮುಕ್ಕಾಟಿರ ಸೋಮಣ್ಣ ಅಶ್ವಿನಿಕುಮಾರ್; ಪದವಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಮೇಚಿರ ರಘುಪತಿ, ಮುಕ್ಕಾಟಿರ ನಿವೇದಿತ ಅಶ್ವಿನಿಕುಮಾರ್ ಅವರನ್ನು ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಮಾಜದ ನಿರ್ದೇಶಕರುಗಳಾದ ಮುಕ್ಕಾಟಿರ ಪೂಣಚ್ಚ, ಸುಳ್ಳೇರ ಸೋಮಯ್ಯ, ಮಲ್ಲಂಡ ಮಹೇಶ್, ಈರಮಂಡ ವಿಜಯ್, ಮೇಚೀರ ಹರೀಶ್, ನೇಂದುಮAಡ ಗೀತಾ ನಾಣಯ್ಯ, ಈರಮಂಡ ದಮಯಂತಿ, ಪುದಿಯೊಕ್ಕಡ ರಮಿತ ಸುಜಯ್, ತೋರೆರ ನಳಿನಿ ಅಯ್ಯಪ್ಪ ಉಪಸ್ಥಿತರಿದ್ದರು.

ಕಸ್ತೂರಿ ಭೀಮಯ್ಯ ಪ್ರಾರ್ಥಿಸಿ, ಅಚ್ಚಪಂಡ ಧರ್ಮವತಿ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಕಳ್ಳಿರ ನಾಣಯ್ಯ ವಂದಿಸಿದರು.ಮಡಿಕೇರಿ, ಅ. ೧೧: ನಾಡಿನಲ್ಲಿ ಸಂಸ್ಕೃತಿಯ ಬೆಳವಣಿಗೆಯೊಂದಿಗೆ ಕೃಷಿಕರು ದೇಶದ ಜನತೆಗೆ ಆಹಾರ ಪೂರೈಸುವ ನಿಟ್ಟಿನಲ್ಲಿ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದರೆ, ಯೋಧರು ದೇಶದ ಭದ್ರತೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಲ್ಲಿ ದೇಶ ರಕ್ಷಣೆಗಾಗಿ ಶಿಸ್ತುಬದ್ಧ ಸೇವೆಯನ್ನು ಸಲ್ಲಿಸುತ್ತಾರೆ. ಇವರಿಬ್ಬರಿಗೂ ನಾಡಿನ ಜನತೆ ಎಂದೆAದಿಗೂ ಚಿರಋಣಿಯಾಗಿರ ಬೇಕೆಂದು ನಿವೃತ್ತ ಐಆರ್‌ಪಿಎಫ್ ಅಧಿಕಾರಿ ಅಮ್ಮಚಳಿಯಂಡ ಮುತ್ತಣ್ಣ ಹೇಳಿದರು. ಮೂರ್ನಾಡಿನ ಎಪಿಸಿ ಎಂಎಸ್ ಕಟ್ಟಡದ ಸಭಾಂಗಣದಲ್ಲಿ ಜರುಗಿದ ಕೊಯವ ಸಮಾಜದ ಕೈಲ್‌ಪೊಳ್ದ್ ಸಂತೋಷಕೂಟ ಹಾಗೂ ವಾರ್ಷಿಕ ಮಹಾಸಭೆಯಲ್ಲಿ