ಮಡಿಕೇರಿ ನಗರದ ಸುತ್ತಮುತ್ತ ೧೧ ಚೆಕ್‌ಪೋಸ್ಟ್ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುವುದು. ನಗರಕ್ಕೆ ಹೊರಗಿನಿಂದ ಮದ್ಯವನ್ನು ತರದಂತೆಯೂ ತಪಾಸಣೆ ಸಂದರ್ಭ ಕ್ರಮ ವಹಿಸಲಾಗುವುದು ಎಂದು ಎಸ್.ಪಿ ಮಾಹಿತಿ ನೀಡಿದರು. ಕಮಾನ್‌ಗೇಟ್, ಸಂಪಿಗೆಕಟ್ಟೆ ಜಂಕ್ಷನ್, ಸಿದ್ದಾಪುರ ರಸ್ತೆ (ಅಶೋಕಪುರ ಅಂಗನವಾಡಿ ಬಳಿ), ಮೇಕೇರಿ ಜಂಕ್ಷನ್, ಮಂಗಳೂರು ರಸ್ತೆ (ಎಂ.ಆರ್.ಎಫ್ ಟೈರ್ ಅಂಗಡಿ ಬಳಿ), ಮೈತ್ರಿ ಜಂಕ್ಷನ್, ತಾಳತ್‌ಮನೆ ಜಂಕ್ಷನ್, ಕೊಪ್ಪ ಚೆಕ್‌ಪೋಸ್ಟ್, ಗುಡ್ಡೆಹೊಸೂರು ಚೆಕ್‌ಪೋಸ್ಟ್, ಗದ್ದೆಹಳ್ಳ ಚೆಕ್‌ಪೋಸ್ಟ್, ಚೆಟ್ಟಳ್ಳಿ ಜಂಕ್ಷನ್‌ಗಳಲ್ಲಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು.