ಕೂಡಿಗೆ, ಅ. ೧೧: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ಅರೆಮಲೆನಾಡು ಪ್ರದೇಶದಲ್ಲಿ ಮಳೆಯನ್ನೇ ಅವಲಂಭಿಸಿ ಬೆಳೆದ ಬೆಳೆಯಾದ ಮೆಕ್ಕೆಜೋಳದ ಬೆಳೆಯು ಈಗಾಗಲೇ ಕಟಾವಿಗೆ ಬಂದಿದೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಗೆ ಬಾರಿ ತೊಂದರೆಗಳು ಅಗುತ್ತಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವ ಸಂದರ್ಭದಲ್ಲಿ ಅತಿಯಾದ ಮಳೆಯಿಂದಾಗಿ ಬಿತ್ತನೆ ಮಾಡಿದ ಬೆಳೆಯು ಹಾಳಾಗಿತ್ತು, ಅಳಿದುಳಿದ ಮೆಕ್ಕೆಜೋಳದ ಬೆಳೆಯು ಈಗಾಗಲೇ ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಕಟಾವು ಮಾಡಲು ಸಮಸ್ಯೆಯಾಗಿದೆ. ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯು ಜಮೀನಿನಲ್ಲಿ ನೆಲಕ್ಕೆ ಬಿದ್ದು ಮೊಳಕೆ ಬರುವ ಹಂತಕ್ಕೆ ತಲುಪಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಸಿದ್ದಲಿಂಗಪುರ, ಹೆಬ್ಬಾಲೆ, ಅಳುವಾರ, ತೊರೆನೂರು, ಹೊಸಕೋಟೆ ಸೇರಿದಂತೆ ೨೫ಕ್ಕೂ ಅಧಿಕ ಉಪ ಗ್ರಾಮಗಳಲ್ಲಿ ತೊಂದರೆಗಳು ಉಂಟಾಗುತ್ತಿದೆ.