ಮಡಿಕೇರಿ, ಅ. ೧೧: ವೈಭವದ ವಿಜಯದಶಮಿ ಆಚರಣೆಗೆ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ವಾಣಿಜ್ಯನಗರ ಗೋಣಿಕೊಪ್ಪಲು ಸನ್ನದ್ಧಗೊಂಡಿದೆ. ನಾಡಹಬ್ಬ ದಸರಾದ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದ್ದು, ಶನಿವಾರ (ಇಂದು) ರಾತ್ರಿ ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ನಡೆಯಲಿರುವ ಶೋಭಾಯಾತ್ರೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳಲು ಜನತೆ ಕಾತರದಿಂದಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಜನಸಾಗರ ಕಂಡುಬರುತ್ತಿದೆ. ಮಡಿಕೇರಿಯಲ್ಲಿನ ದಶಮಂಟಪಗಳ ಚಲನ-ವಲನಗಳನ್ನು ಒಳಗೊಂಡ ಅದ್ದೂರಿಯ ಹಾಗೂ ಅರ್ಥಪೂರ್ಣವಾದ ಶೋಭಾಯಾತ್ರೆ ರಾಜ್ಯ - ರಾಷ್ಟçದಲ್ಲಿ ಹೆಸರು ಮಾಡಿರುವುದಲ್ಲದೆ, ಐತಿಹಾಸಿಕ ಹಿನ್ನೆಲೆಯನ್ನೊಳಗೊಂಡಿದೆ. ಮಡಿಕೇರಿ ದಸರಾಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಶಾಂತಿ- ಸುವ್ಯವಸ್ಥೆಯ ದಸರಾ ಆಚರಣೆಗೆ ಸಜ್ಜಾಗಿದೆ. ಮಡಿಕೇರಿ ದಸರಾ ಸಮಿತಿಯ ಪದಾಧಿಕಾರಿಗಳೂ ಅಂತಿಮ ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತ ಗೋಣಿಕೊಪ್ಪಲುವಿನಲ್ಲೂ ಎಲ್ಲಾ ಅಗತ್ಯ ಸಿದ್ಧತೆಗಳು ನಡೆದಿದ್ದು, ಇಲ್ಲಿಯೂ ಮಂಟಪಗಳ ಶೋಭಾಯಾತ್ರೆ ವಿಶೇಷ ಗಮನ ಸೆಳೆಯಲಿದೆ. ಎರಡೂ ಪಟ್ಟಣಗಳು ವಿದ್ಯುತ್ ಅಲಂಕಾರದಿAದ ಕಂಗೊಳಿಸುತ್ತಿದ್ದು, ನವವಧುವಿನಂತೆ ಶೃಂಗಾರಗೊAಡಿದೆ. ವಿವಿಧ ಅಂಗಡಿ - ಮಳಿಗೆಗಳು ತಲೆ ಎತ್ತಿದ್ದು, ಜಾತ್ರೆಯ ಸಂಭ್ರಮ ಮನೆ ಮಾಡಿದೆ.

(ಮೊದಲ ಪುಟದಿಂದ) ಈಗಿನ ವಾತಾವರಣದ ಹಿನ್ನೆಲೆಯಲ್ಲಿ ಮಳೆಯ ಆತಂಕ ಒಂದೆಡೆಯಾದರೂ ನಾಡಹಬ್ಬದ ಸಡಗರಕ್ಕೆ ವರುಣದೇವ ಕೃಪೆ ನೀಡುವ ಆಶಾಭಾವನೆ ಎಲ್ಲರಲ್ಲಿದೆ. ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ಗಳು ಭರ್ತಿಯಾಗಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ.

ಆಯಾ ಮಂಟಪ ಸಮಿತಿಯವರು ತಮ್ಮ ತಮ್ಮ ಮಂಟಪಗಳ ಅಂತಿಮ ತಯಾರಿಯಲ್ಲಿದ್ದು, ತಮ್ಮದೇ ಆದ ಸಂಭ್ರಮದೊAದಿಗೆ ನಾಡಹಬ್ಬಕ್ಕೆ ಮೆರುಗು ನೀಡಲು ಶ್ರಮಿಸುತ್ತಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರೊಂದಿಗೆ ನೆರೆಯ ಜಿಲ್ಲೆಗಳಿಂದಲೂ ಹೆಚ್ಚುವರಿ ಅಧಿಕಾರಿಗಳು- ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ. ಪೊಲೀಸರೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿಗಳೂ ಕರ್ತವ್ಯ ನಿಭಾಯಿಸಲಿದ್ದಾರೆ. ಎರಡೂ ಕಡೆಗಳಲ್ಲಿ ಸಿ.ಸಿ. ಟಿವಿಗಳ ಅಳವಡಿಕೆ, ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆ ವಿಶೇಷ ಕ್ರಮ ಕೈಗೊಂಡಿದೆ. ಮಂಟಪಗಳ ಶೋಭಾಯಾತ್ರೆಯೊಂದಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿಯAತಹ ಆಕರ್ಷಣೆಗಳೊಂದಿಗೆ ಈ ಬಾರಿಯ ವಿಜಯದಶಮಿಗೆ ಶನಿವಾರದಂದು ರಾತ್ರಿ ತೆರೆ ಬೀಳಲಿದೆ.