ಪಾಲಿಬೆಟ್ಟ, ಅ. ೧೧: ಚೆನ್ನಯ್ಯನಕೋಟೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ೩೮ನೇ ವರ್ಷದ ಶ್ರೀ ಗೌರಿ-ಗಣೇಶ ಉತ್ಸವವು ವಿಜೃಂಭಣೆಯಿAದ ನಡೆಯಿತು.

ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಿತು. ಉತ್ಸವಕ್ಕೆ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ ಅವರು ಆಗಮಿಸಿ ಗೌರಿ-ಗಣೇಶ ಉತ್ಸವದಲ್ಲಿ ಎಲ್ಲರೂ ಒಂದೆಡೆ ಸೇರಿ ಸಂತೋಷದಿAದ ಸಂಭ್ರಮಿಸಲು ಅವಕಾಶವಾಗುತ್ತದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ವಾದ್ಯಗೋಷ್ಠಿ, ಡೊಳ್ಳು ಕುಣಿತ, ಬೊಂಬೆಯಾಟ, ಡಿಜೆಯೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಕುಳಿಯಕಂಡ ಕೃಷ್ಣ ರವರ ಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಹೆಚ್ ಆರ್ ಠವಿ, ಉಪಾಧ್ಯಕ್ಷರಾದ ಹೆಚ್ ಆರ್ ಲೋಕೇಶ್, ಪ್ರಧಾನ ಕಾರ್ಯದರ್ಶಿ ಹೆಚ್ ಸಿ ಸಿದ್ದಾರ್ಥ್, ಕಾರ್ಯದರ್ಶಿ ಹೆಚ್ ಕೆ ಮಹೇಂದ್ರ, ಖಜಾಂಚಿ ಹೆಚ್ ಎಸ್ ಶೇಖರ್ ಸಹ ಖಜಾಂಚಿ ಸಿ ಡಿ ಭವನ್, ಸಮಿತಿ ಸದಸ್ಯರುಗಳಾದ ಅವಿನಾಶ್, ಸುನಿಲ್, ರಕ್ಷಿತ್, ಆರ್ಕೇಶ್ ಇವರುಗಳು ಇದ್ದರು.