ಟಿ ಆಕರ್ಷಿಸಿದ ನೃತ್ಯಗಳು, ಆಫ್ರಿಕನ್ ಕಲಾವಿದರ ಕಾರ್ಯಕ್ರಮ ಟಿ ಕುಣಿದು ಕುಪ್ಪಳಿಸಿದ ಯುವ ಸಮೂಹÀ

ಮಡಿಕೇರಿ, ಅ. ೧೧: ಕಾರ್ಮೋಡ ಆವರಿಸಿ, ತಿಳಿ ಗಾಳಿಯ ಸ್ಪರ್ಶದೊಂದಿಗೆ, ಮಂಜು ಮುಸುಕಿ ಚುಮುಚುಮು ಚಳಿಯ ವಾತಾವರಣವಿದ್ದರೂ ಮಡಿಕೇರಿ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ಮೈಮನಗಳನ್ನು ತಣಿಸುವಲ್ಲಿ ಯಶಸ್ವಿಯಾಯಿತು. ಅತ್ಯಾಕರ್ಷಕ ನೃತ್ಯಗಳು ಮೈನವಿರೇಳಿಸಿದರೆ, ಆಫ್ರಿಕನ್ ಕಲಾವಿದರ ತಂಡ ನಡೆಸಿಕೊಟ್ಟ ಡ್ರಮ್ಸ್ ವಾದನ ಪ್ರದರ್ಶನ ಜನರನ್ನು ಹುಚ್ಚೆದು ಕುಣಿಯುವಂತೆ ಮಾಡಿತು. ಖ್ಯಾತ ರ‍್ಯಾಪ್ ಸಿಂಗರ್ ರಾಹುಲ್ ಡಿಟ್ಟೋ ಹಾಡಿದ ಹಾಡುಗಳಂತೂ ಯುವಜನತೆಯ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು. ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿ ಯುವ ಸಮೂಹ ಸಂಭ್ರಮಿಸಿತು.

ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ದಸರಾ ಸಮಿತಿ, ಯುವ ದಸರಾ ಸಮಿತಿ ವತಿಯಿಂದ ನಡೆದ ಯುವ ದಸರಾ ಕಾರ್ಯಕ್ರಮ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ಕಣ್ತುಂಬಿಕೊAಡರು. ವೇದಿಕೆ ಭರ್ತಿಯಾಗಿ ಹೊರ ನಿಂತು ಜನರು ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ಜನಾಕರ್ಷಿಸಿದ ನೃತ್ಯ ಸ್ಪರ್ಧೆ

ಯುವ ದಸರಾ ಅಂಗವಾಗಿ ನಡೆದ ನೃತ್ಯಸ್ಪರ್ಧೆ ಜನಾಕರ್ಷಣೆಗೆ ಕಾರಣವಾಯಿತು. ವೈವಿಧ್ಯಮಯ ನೃತ್ಯ ಪ್ರಾಕಾರಗಳ ಮೂಲಕ ನೃತ್ಯಪಟುಗಳು ಜನರನ್ನು ಮನರಂಜಿಸಿದರು.

‘ಟೀಂ ಗಾಡ್’ ಅವಾತಾರ್ ಸಿನಿಮಾದ ನೃತ್ಯ ರೂಪಕದ ಮೂಲಕ ಮಾಯಲೋಕವನ್ನು ಸೃಷ್ಟಿಸಿತು. ‘ಡ್ಯಾನ್ಸ್ ಲ್ಯಾಬ್’ ತಂಡ ತನ್ನ ಸಾಹಸಮಯ ನೃತ್ಯದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಬಾನೆತ್ತರಕ್ಕೆ ಜಿಗಿಯುತ್ತ, ಹಗ್ಗದ ಮೂಲಕ ಮಾಡಿದ ‘ಸ್ಟಂಟ್’ ಮೈನವಿರೇಳಿಸುವಂತೆ ಮಾಡಿತು. ನಾಟ್ಯಕಲಾ ತಂಡ ಶಿವತಾಂಡವ ಮೂಲಕ ರುದ್ರನರ್ತನ ತೋರಿತು. ದೇಚಮ್ಮ ಮತ್ತು ತಂಡ ಟ್ರೆಂಡಿAಗ್ ಸಿನಿಮಾ ಗೀತೆಗೆ ಹೆಜ್ಜೆ ಹಾಕಿತು. ‘ಕಿಂಗ್ಸ್ ಆಫ್ ಕೂರ್ಗ್’ ತಂಡ ಶ್ರೀಮನ್ನಾರಾಯಣ ಜಪಿಸುತ್ತ ಮಾಡಿದ ನೃತ್ಯ ರೋಮಾಂಚನಕಾರಿಯಾಗಿತ್ತು. ಪುಟಾಣಿಗಳು ಒಂದೆಡೆಯಿAದ ಮತ್ತೊಂದೆಡೆಗೆ ಹಾರುತ್ತ ಪ್ರೇಕ್ಷಕರ ಎದೆಝಲ್ಲೆನೆಸುವಂತೆ ಮಾಡಿದರು.

ನೃತ್ಯ ಸ್ಪರ್ಧೆಯಲ್ಲಿ ಡ್ಯಾನ್ಸ್ ಲ್ಯಾಬ್ ಪ್ರಥಮ, ನಾಟ್ಯಕಲಾ ದ್ವಿತೀಯ, ಕಿಂಗ್ಸ್ ಆಫ್ ಕೂರ್ಗ್ ತೃತೀಯ ಸ್ಥಾನ ಪಡೆದುಕೊಂಡಿತು. ನೃತ್ಯಪಟುಗಳಾದ ಕಾರ್ತಿಕ್, ಶೈಲಜಾ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

(ಮೊದಲ ಪುಟದಿಂದ)

ದೇಹಧಾಡ್ರö್ರ್ಯ ಸ್ಪರ್ಧೆ

ಕಾರ್ಯಕ್ರಮದ ಅಂಗವಾಗಿ ದೇಹಧಾಡ್ರö್ರ್ಯ ಸ್ಪರ್ಧೆ ನಡೆಯಿತು. ೧೧ ಕಟ್ಟುಮಸ್ತು ‘ಬಾಡಿ ಬಿಲ್ಡರ್ಸ್’ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ದೈಹಿಕ ಕ್ಷಮತೆಯ ಬಗ್ಗೆ ಸಂದೇಶ ಸಾರಿದರು. ಪ್ರಕಾಶ್ ಹೆಚ್.ಆರ್. ಪ್ರಥಮ, ಜಯ್ ಸೋಮಯ್ಯ ದ್ವಿತೀಯ, ಅಜಯ್ ಮೂರನೇ ಸ್ಥಾನ ಪಡೆದುಕೊಂಡರು.

ಮಿಂಚು ಹರಿಸಿದ ಆಫ್ರಿಕನ್ ಕಲಾವಿದರು

ಶಾಂ ರಾಕ್ ತಂಡದಿAದ ಆಫ್ರಿಕನ್ ಕಲಾವಿದರು ನಡೆಸಿಕೊಟ್ಟ ವೈವಿಧ್ಯಮಯ ಕಾರ್ಯಕ್ರಮ ಜನಮೆಚ್ಚುಗೆಗೆ ಪಾತ್ರವಾಯಿತು. ಆಫ್ರಿಕಾನ್ ಭಾಷೆಯ ಹಾಡುಗಳನ್ನು ಹಾಡುತ್ತ, ಡ್ರಮ್ಸ್, ಕೊಳಲು ಸೇರಿದಂತೆ ಇನ್ನಿತರ ಸಂಗೀತ ಪರಿಕಗಳನ್ನು ಬಾರಿಸುತ್ತ ಮನರಂಜನೆ ನೀಡಿದರು. ತಂಡದ ನಾಯಕ ಶಾಂ ಅವರು ಅತ್ಯಾಧುನಿಕ ಡ್ರಮ್ಸ್ ಮೂಲಕ ವಿನೂತನ ಶಬ್ದಗಳನ್ನು ಹೊರತಂದು ಸಂಗೀತ ಲೋಕ ಸೃಷ್ಟಿಸಿದರು.

ರಾಹುಲ್ ರ‍್ಯಾಪ್ ರಂಗು - ಡಿಜೆ ಅಬ್ಬರ

ಕನ್ನಡ ಸಂಗೀತ ಲೋಕದ ಪ್ರಖ್ಯಾತ ರ‍್ಯಾಪರ್ ರಾಹುಲ್ ಡಿಟ್ಟೋ ಹಾಡಿದ ಹಾಡುಗಳು ಯುವ ದಸರಾದ ರಂಗು ಹೆಚ್ಚಿಸಿತು. ೧ ಗಂಟೆಗಳ ಕಾಲ ನಿರಂತರವಾಗಿ ತಮ್ಮ ಜನಮೆಚ್ಚಿನ ಗೀತೆಗಳನ್ನು ಪ್ರಸ್ತುತಗೊಳಿಸಿ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇವರಿಗೆ ಹಿಂದಿ ರ‍್ಯಾಪರ್ ಗ್ರೇನೈಡ್ ಸಾಥ್ ನೀಡಿದರು.

ಮಡಿಕೇರಿಯ ಡಿಜೆ ಸೋಮ್ ಹಾಗೂ ಸ್ಪೇನ್ ಮೂಲದ ಡಿಜೆ ಸ್ಟೆಲ್ಲಾ ಅವರಿಂದ ಮೂಡಿಬಂದ ಡಿಜೆ ಕಾರ್ಯಕ್ರಮ ಯುವ ಜನತೆಯಲ್ಲಿ ಕಿಚ್ಚು