ವೀರಾಜಪೇಟೆ : ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು. ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ಸ್ವಚ್ಛವಾದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಡಿಯಲ್ಲಿ ಕಾಲೇಜಿನ ಆವರಣದಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಶ್ರಮದಾನವನ್ನು ಮಾಡಿದರು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಈ ಸಂದರ್ಭ ಕಾಲೇಜಿನ ಎನ್. ಎಸ್. ಎಸ್. ಯೋಜನಾಧಿಕಾರಿ ಬಿ. ಎನ್. ಶಾಂತಿಭೂಷಣ್, ಐಕ್ಯೂಎಸಿ ಸಂಚಾಲಕಿ ಹೇಮ, ಉಪನ್ಯಾಸಕರು ಹಾಗೂ ಎನ್. ಎಸ್. ಎಸ್. ಸ್ವಯಂ ಸೇವಾ ವಿದ್ಯಾರ್ಥಿಗಳು ಹಾಜರಿದ್ದರು.

ವೀರಾಜಪೇಟೆ : ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಯAತಿಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಮ್ಮ ಅವರು ದಿನದ ಮಹತ್ವದ ಕುರಿತು ಮತ್ತು ಸ್ವಚ್ಛತೆಯ ಕುರಿತು ಮಾತನಾಡಿದರು. ಗಾಂಧಿ ಜಯಂತಿಯ ಪ್ರಯುಕ್ತ ಶಾಲಾ ಮಕ್ಕಳಿಗೆ ವಿವಿಧ ಮನರಂಜನಾ ಆಟದ ಸ್ಪರ್ಧೆಗಳನ್ನು ನಡೆಸಲಾಯಿತು. ತದನಂತರ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಶಾಲೆಯ ಸುತ್ತ ಶ್ರಮದಾನವನ್ನು ಮಾಡಿದರು.

ಈ ಸಂದರ್ಭ ಬಿ.ಎಸ್.ಎನ್.ಎಲ್.ನ ನಿವೃತ್ತ ನೌಕರರಾದ ಕೋಡಿರ ಟಿ ಗಣಪತಿ, ರೇಷ್ಮಾ ಗಣಪತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಲತಾ. ವೈ. ಎಸ್., ಸಹ ಶಿಕ್ಷಕಿ ಖಮರುನ್ನೀಸ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಮಡಿಕೇರಿ : ಕೊಳಗದಾಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಪಾಕ ಶ್ರೀ ದುರ್ಗಾಪರಮೇಶ್ವರಿ ಸ್ತಿçà ಶಕ್ತಿ ಸಂಘದ ಸದಸ್ಯರು, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಮತ್ತು ಪೋಷಕರ ಶ್ರಮದಾನದ ಮೂಲಕ ಆಚರಿಸಿದರು.ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸ್ತಿçà ಶಕ್ತಿ ಸಂಘದ ಅಧ್ಯಕ್ಷರಾದ ಅನಿತಾ ರಾಜಮಣಿ, ಕಾರ್ಯದರ್ಶಿ ಬೊಪ್ಪಡತಂಡ ನಂಜಮ್ಮ ಮಾದಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮುಕ್ಕಾಟಿ ಸೌಮ್ಯ ಸೇನಾಸುತ, ಸ್ತಿçà ಶಕ್ತಿ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಗೋಣಿಕೊಪ್ಪಲು: ಗ್ರಾಮದ ಜನತೆ ಒಗ್ಗೂಡಿದಲ್ಲಿ ಆ ಗ್ರಾಮವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯಬಹುದು ಎಂಬದಕ್ಕೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಗ್ರಾಮದ ಗ್ರಾಮಸ್ಥರೇ ನಮ್ಮ ಮುಂದಿರುವ ಉದಾಹರಣೆ. ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮದ ಹಿರಿಯರು ಒಟ್ಟಾಗಿ ಸೇರಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಿದ್ದAತೆಯೇ ಗ್ರಾಮದ ಬಹುತೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗ್ರಾಮದ ಮುಖ್ಯ ರಸ್ತೆಯಲ್ಲಿದ್ದ ಕಸಕಡ್ಡಿ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಶುಚಿತ್ವ ಕಾರ್ಯ ನಡೆಸಿದರು.

ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊಲ್ಲಿರ ಗೋಪಿ ಚಿಣ್ಣಪ್ಪ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡ ಗ್ರಾಮಸ್ಥರೊಂದಿಗೆ ಸ್ಥಳೀಯ ರಾಷ್ಟಿçÃಯ ಸ್ವಯಂಸೇವಕ ಸಂಘ, ಗ್ರಾಮದ ಸಂಘ ಸಂಸ್ಥೆಗಳು, ಹೊಸೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಗ್ರಾಮವನ್ನು ಕಸಮುಕ್ತ ಗ್ರಾಮವನ್ನಾಗಿ ಮಾಡಲು ವಿನೂತನ ರೀತಿಯಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಗಾಂಧಿಜಯAತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಳತ್ಮಾಡು ಗ್ರಾಮದ ಗೊಟ್ಟಡ ಶಾಲಾ ಮೈದಾನದಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತಿçಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗ್ರಾಮದಲ್ಲಿ ಮೆರವಣಿಗೆ ಸಾಗಿ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಿದರು. ಗೊಟ್ಟಡ ಗ್ರಾಮದಿಂದ ಆರಂಭವಾದ ಸ್ವಚ್ಛತಾ ಕಾರ್ಯವು ಕಳತ್ಮಾಡು ಗ್ರಾಮ ಸುತ್ತಲಿನ ರಸ್ತೆಗಳಲ್ಲಿ ಸಂಚರಿಸಿ ಹೊಸಕೋಟೆ ಗಡಿಯವರೆಗೂ ಶುಚಿತ್ವ ಕಾರ್ಯ ನಡೆಯಿತು.

ಗ್ರಾಮದ ಹಿರಿಯರಾದ ಕೊಲ್ಲಿರ ಗಯಾ ಕಾವೇರಪ್ಪ, ಸುಬ್ಬಯ್ಯ, ರಾಮಚಂದ್ರ, ಕಂಬೀರAಡ ಬೋಪಣ್ಣ, ಮಾಜಿ ಜಿ.ಪಂ.ಸದಸ್ಯ, ಕೊಲ್ಲೀರ ಧರ್ಮಜ, ಹೊಸೂರು ಗ್ರಾ.ಪಂ.ಸದಸ್ಯರಾದ ಸುಶೀಲ, ಕೊಲ್ಲೀರ ಧನು, ಸೇರಿದಂತೆ ರಾಷ್ಟಿçÃಯ ಸ್ವಯಂ ಸೇವಕ ಸಂಘ, ಗ್ರಾಮದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂಪ್ರೇರಿತರಾಗಿ ಆಗಮಿಸಿ ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಕಾರ್ಯಕ್ರಮದಲ್ಲಿ ಕಳತ್ಮಾಡು ಶಾಲೆ ಮುಖ್ಯೋಪಾಧ್ಯಾಯಿನಿ ಭಾಗ್ಯವತಿ, ಸೇವಾಭಾರತಿ ಗಿರೀಶ್, ಚೇತನ್, ಯತೀಶ್, ಕಳತ್ಮಾಡು ಗ್ರಾಮದ ಪ್ರಮುಖರಾದ ವೇಣು ಮಂದಣ್ಣ, ಚಂದ್ರಶೇಖರ್, ನೇತ್ರಾವತಿ, ಜ್ಯೋತಿ, ಕೀರ್ತನ, ವೀಣಾ, ಮಾಜಿ ಗ್ರಾ.ಪಂ.ಸದಸ್ಯರಾದ ಕಾವೇರಮ್ಮ, ಯಮುನಾ, ವಸಂತಿ ಧರಣಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

ಶನಿವಾರಸಂತೆ: ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್.ವೈ.ಎಸ್.ಕೊಡ್ಲಿಪೇಟೆ ಶಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಸಮೀಪದ ಬ್ಯಾಡಗೊಟ್ಟ ಬಸ್ ತಂಗುದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಬಸ್ ತಂಗುದಾಣದ ಸುತ್ತಮುತ್ತಲ ಗಿಡಗಂಟಿ, ಮುಳ್ಳುಪೊದೆಗಳನ್ನು ಕಡಿದು ಸ್ವಚ್ಛಗೊಳಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಲಘು ಉಪಹಾರ ಹಾಗೂ ತಂಪು ಪಾನೀಯ ವಿತರಿಸಿದರು.

ಎಸ್‌ವೈಎಸ್ ಅಮಿಲಾ, ಕೊಡಗು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಮಾನ್, ಶಾಖಾ ವಿಖಾಯ ಕಾರ್ಯದರ್ಶಿ ಜಿ.ಎಂ. ಶರೀಫ್, ಎಸ್‌ಕೆಎಸ್‌ಎಸ್‌ಎಫ್ ಉಪಾಧ್ಯಕ್ಷ ನೌಫಲ್, ಕೋಶಾಧಿಕಾರಿ ಅಝೀಝ್, ಕಾರ್ಯದರ್ಶಿಗಳಾದ ತೌಫೀಕ್, ಸಬ್ಬಿ ಮುಸ್ತಾಫಾ, ಸನ್ನದ್ಧ ಸೇವಾ ತಂಡದ ಸುಹೈಲ್, ಶಾಕೀರ್, ತ್ವಾಹಾ ಹಾಗೂ ಗ್ರಾಮಸ್ಥರು ಶ್ರಮದಾನದಲ್ಲಿ ಸಹಕರಿಸಿದರು.

ಮಡಿಕೇರಿ : ಮಡಿಕೇರಿಯ ಸಂತ ಮೈಕಲರ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಸಂತ ಮೈಕಲರ ಕಾಲೇಜಿನ ಉಪನ್ಯಾಸಕಿ ಆ್ಯನೆಟ್ ವಿಲ್ಮ ಅವರು ಮಾತನಾಡಿ, ಗಾಂಧೀಜಿಯವರು ಹೇಳಿದ ‘ಮಾಡು ಇಲ್ಲವೆ ಮಡಿ’’ ಎಂಬ ಘೋಷವಾಕ್ಯ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಸತ್ಯ, ಅಹಿಂಸೆ, ನ್ಯಾಯ ನೀತಿಯ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಸ್ವಾತಂತ್ರö್ಯ ಹೋರಾಟಗಾರರಾದ ಲಾಲ್ ಬಹದ್ದೂರ್ ಶಾಸ್ತಿçಯವರ ಬಗ್ಗೆ ಮಾತನಾಡಿ, ದೇಶದ ಎರಡನೆಯ ಪ್ರಧಾನಮಂತ್ರಿಯಾಗಿದ್ದಾಗ ದೇಶದಲ್ಲಿ ಬಡತನ ತಾಂಡವವಾಡುತಿತ್ತು. ಆ ಕಾರಣಕ್ಕಾಗಿ ಪ್ರತಿ ಸೋಮವಾರ ರಾತ್ರಿ ಊಟವನ್ನು ತ್ಯಜಿಸಲು ದೇಶದ ಜನತೆಗೆ ಕರೆಯಿತ್ತರು ಮಾತ್ರವಲ್ಲದೆ ಅದರಂತೆ ನಡೆದರು. ಈ ದಿನವನ್ನು ಜನರು ಶಾಸ್ತಿç ಸೋಮವಾರ ಎಂದು ಕರೆದರು ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಮಂತ್ ಕೆ.ಎಸ್., ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಾನ್ಸನ್ ಕೆ.ಎ., ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಸಿಲಿಯಾ, ಸಿಸ್ಟರ್ ಸರಿತಾ ಉಪಸ್ಥಿತರಿದ್ದರು. ಉಪನ್ಯಾಸಕಿ ಮನಿಷಾ ಮೊರಾಸ್ ಸ್ವಾಗತಿಸಿದರು. ಉಪನ್ಯಾಸಕಿ ಗಾನವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸುAಟಿಕೊಪ್ಪ: ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮ ದಿನದ ಅಂಗವಾಗಿ ಅಂಜನಗೇರಿ ಬೆಟ್ಟಗೇರಿ ನಿವಾಸಿ ಅಣ್ಣು (ಶೇಖರ) ಮತ್ತು ತಂಡದವರಿAದÀ ಸುಂಟಿಕೊಪ್ಪ-ಮಾದಾಪುರ ರಸ್ತೆಯಲ್ಲಿರುವ (ಮುಕ್ತಿದಾಮ) ಹಿಂದೂ ರುದ್ರ ಭೂಮಿಯ ಸುತ್ತ ಮುತ್ತ ಬೆಳೆದು ನಿಂತ್ತಿದ್ದ ಕಾಡುಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ಹಿಂದೂ ರುದ್ರಭೂಮಿ ಕಾರ್ಯದರ್ಶಿ ಪ್ರೀತಂ ಪ್ರಭಾಕರ್, ಪರಿವೀಕ್ಷಕರಾದ ಪ್ರಶಾಂತ್(ಕೋಕ), ಅನಿಲ್, ಪೂವಪ್ಪ ಇತರರು ಹಾಜರಿದ್ದರು.ಕರಿಕೆ, ಅ. ೧೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ೨೦೨೪ ಆಚರಿಸಲಾಯಿತು.

"ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ" ಎಂಬ ಘೋಷ ವಾಕ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಆನಂದ್ ಎನ್. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಬಾರ ಸದಸ್ಯ ಕಾರ್ಯದರ್ಶಿ ಮುನಿರತ್ನಮ್ಮ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲಾ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಡಾ. ರಾಘವ ಬಿ. ಅಧ್ಯಕ್ಷೀಯ ಭಾಷಣದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆಯನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಪ್ರಯುಕ್ತ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಶ್ವಿನಿ ತೃತೀಯ ಬಿ.ಎ. ಪ್ರಥಮ ಬಹುಮಾನ, ಆಶಿಕಾ ಪ್ರಥಮ ಬಿ.ಎಸ್‌ಸಿ ದ್ವಿತೀಯ ಬಹುಮಾನ ಮತ್ತು ವರ್ಷ ಟಿ.ವಿ. ದ್ವಿತೀಯ ಬಿ.ಎ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು.

ರಾಷ್ಟಿçÃಯ ಮಾನಸಿಕ ಆರೋಗ್ಯದ ವತಿಯಿಂದ "ಟೆಲಿ ಮನಸ್ಸು" ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿ ಡಾ. ಡೇವಿನ್ ಕರ್ಕಡ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಬಿ.ಎಸ್. ವಂದಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿ ಡಾ. ಶೈಲಶ್ರೀ ಕೆ. ಹಾಗೂ ಅಲೋಕ್ ಬಿಜೈ ಉಪಸ್ಥಿತರಿದ್ದರು.*ಗೋಣಿಕೊಪ್ಪ, ಅ. ೧೧: ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪತ್ರಕರ್ತರ ಮುಕ್ತ ದಸರಾ ಕ್ರೀಡಾಕೂಟದಲ್ಲಿ ಪತ್ರಕರ್ತರು ಸಂಭ್ರಮಿಸಿದರು.

ಫಲಿತಾAಶ; ಹಗ್ಗಜಗ್ಗಾಟದಲ್ಲಿ ಮನೋಜ್‌ಕುಮಾರ್ ಟಿ.ಆರ್. ತಂಡ ಪ್ರಥಮ, ಅನೀಶ್ ಮಾದಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಾಲ್ ಟು ವಿಕೆಟ್ ಸ್ಪರ್ಧೆಯಲ್ಲಿ ಎನ್.ಎನ್. ದಿನೇಶ್ (ಪ್ರ), ಮಂಡೇಡ ಅಶೋಕ್ (ದ್ವಿ), ಮಚ್ಚಮಾಡ ಅನೀಶ್ ಮಾದಪ್ಪ (ತೃ), ಗೋಣಿಚೀಲ ಓಟದಲ್ಲಿ ಮಂಡೇಡ ಅಶೋಕ್ (ಪ್ರ), ವಿ.ವಿ. ಅರುಣ್ ಕುಮಾರ್ (ದ್ವಿ), ಮಚ್ಚಮಾಡ ಅನೀಶ್ ಮಾದಪ್ಪ (ತೃ), ಒಂಟಿ ಕಾಲು ಓಟದಲ್ಲಿ ಮಂಡೇಡ ಅಶೋಕ್ (ಪ್ರ), ದರ್ಶನ್ ದೇವಯ್ಯ (ದ್ವಿ), ವಿ.ವಿ. ಅರುಣ್‌ಕುಮಾರ್ (ತೃ), ಶಾಟ್‌ಪುಟ್‌ನಲ್ಲಿ ಮಚ್ಚಮಾಡ ಅನೀಶ್ ಮಾದಪ್ಪ (ಪ್ರ), ಮನೋಜ್‌ಕುಮಾರ್ ಟಿ.ಆರ್. (ದ್ವಿ), ಮಂಡೇಡ ಅಶೋಕ್ (ತೃ) ಸ್ಥಾನ ಪಡೆದರು.

ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ, ಪತ್ರಕರ್ತರು ನೇರವಾಗಿ ಬರೆಯುವುದರಿಂದ ಸಮಾಜಕ್ಕೂ ಲಾಭವಾಗುತ್ತಿದೆ.

ಸಂಘದ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ಮಾತನಾಡಿ, ಒತ್ತಡ ಮರೆಯಲು ಕ್ರೀಡಾಕೂಟ ಸಹಕಾರಿಯಾಗುತ್ತದೆ ಎಂದರು.

ಅಧ್ವೆöÊತ್ ಹುಂಡೈ ಶೋರೂಂ ವ್ಯವಸ್ಥಾಪಕ ಕೌಶಿಕ್ ಕಾಳಪ್ಪ, ಸಂಚಾಲಕ ಎನ್.ಎನ್. ದಿನೇಶ್, ಪಾರುವಂಗಡ ದಿಲನ್ ಚಂಗಪ್ಪ, ದಸರಾ ಸ್ವಚ್ಛತಾ ಸಮಿತಿ ಸಂಚಾಲಕ ಎಂ. ಎಸ್. ನೌಷದ್ ಬಹುಮಾನ ವಿತರಣೆ ಮಾಡಿದರು.

ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಸಹ ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ಅರುಣ್ ಕುಮಾರ್, ದರ್ಶನ್ ದೇವಯ್ಯ, ಮನೋಜ್‌ಕುಮಾರ್ ಇದ್ದರು.