ಮಡಿಕೇರಿ, ಅ. ೧೩: ನಿನ್ನೆ ರಾತ್ರಿ ಮಂಜಿನ ನಗರಿ ಮಡಿಕೇರಿಯಲ್ಲಿ ವಿಜಯದಶಮಿ ಪ್ರಯುಕ್ತ ನಡೆದ ದಶಮಂಟಪಗಳ ಶೋಭಾಯಾತ್ರೆಯಯಿಂದ ಮಡಿಕೇರಿ ನಗರ ದೇವಲೋಕವಾಗಿ ಮಾರ್ಪಾಡಾಗಿತ್ತು. ಮಂಟಪಗಳು ಪ್ರದರ್ಶಿಸಿದ ವಿವಿಧ ದೈವಿಕ ಕಥಾ ಸಾರಾಂಶಗಳಲ್ಲಿ ದೇವಾನುದೇವತೆಗಳಿಂದ ನಡೆದ ಅಸುರರ ಸಂಹಾರ ನೋಡುಗರನ್ನು ಬೆರಗಾಗಿಸಿತು. ಶೋಭಾಯಾತ್ರೆಯಲ್ಲಿ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಪ್ರಥಮ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದ್ವಿತೀಯ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ ತೃತೀಯ ಬಹುಮಾನಕ್ಕೆ ಭಾಜನವಾಯಿತು.

ಶ್ರೀ ಕೋಟೆ ಮಹಾಗಣಪತಿ ಮಂಟಪದ ಶ್ರೀ ಮಹಾಗಣಪತಿಯಿಂದ ಅಜಗರ - ಶಲಭಾಸುರ ದೈತ್ಯರ ಸಂಹಾರ ಕಥಾ ಸಾರಾಂಶ ಮೊದಲ ಬಹುಮಾನ ಪಡೆದರೆ, ಶ್ರೀ ಕೋಟೆ ಮಾರಿಯಮ್ಮ ಮಂಟಪದ ಶ್ರೀ ಕೃಷ್ಣನ ಬಾಲಲೀಲೆ - ಕಂಸವಧೆ ಕಥಾ ಸಾರಾಂಶ ದ್ವಿತೀಯ ಬಹುಮಾನಗಳಿಸಿತು. ಶ್ರೀ ದಂಡಿನ ಮಾರಿಯಮ್ಮ ಮಂಟಪದ ಕೌಶಿಕೆ ಮಹಾತ್ಮೆ ಕಥಾ ಸಾರಾಂಶ ತೃತೀಯ ಬಹುಮಾನಕ್ಕೆ ಭಾಜನವಾಯಿತು. ಮೊದಲ ಬಹುಮಾನ ಪಡೆದ ಮಂಟಪಕ್ಕೆ ೨೪ ಗ್ರಾಂ, ದ್ವಿತೀಯ ಬಹುಮಾನ ಪಡೆದ ಮಂಟಪಕ್ಕೆ ೨೦ ಗ್ರಾಂ., ತೃತೀಯ ಬಹುಮಾನ ಪಡೆದ ಮಂಟಪಕ್ಕೆ ೧೬ ಗ್ರಾಂ. ಚಿನ್ನದ ನಾಣ್ಯ ಒಳಗೊಂಡ ಫಲಕವನ್ನು ಬಹುಮಾನವಾಗಿ ನೀಡಲಾಯಿತು. ಉಳಿದ ಮಂಟಪಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಶ್ರೀ ರಾಮನಿಂದ ರಾವಣನ ಸಂಹಾರ ಕಥಾಸಾರಾಂಶದೊAದಿಗೆ ಶ್ರೀ ಕೋದಂಡರಾಮ ದೇವಾಲಯ, ಕಾಳಿಂಗಮರ್ದನ ಕಥಾ ಸಾರಾಂಶದೊAದಿಗೆ ದೇಚೂರು ಶ್ರೀ ರಾಮಮಂದಿರ ದೇವಾಲಯ, ಸಿಂಧೂರ ಗಣಪತಿ ಕಥಾ ಸಾರಾಂಶದೊAದಿಗೆ ಶ್ರೀ ಕಂಚಿಕಾಮಾಕ್ಷಿ ದೇವಾಲಯ, ಶ್ರೀ ಕೊಲ್ಲೂರು ಮೂಕಾಂಬಿಕೆ ಮಹಿಮೆ ಕಥಾ ಸಾರಾಂಶದೊAದಿಗೆ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ, ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಲೋಕ ಕಲ್ಯಾಣಕ್ಕಾಗಿ ವಿಷ್ಣುವಿನ ಮತ್ಸಾö್ಯವತಾರ ಕಥಾ ಸಾರಾಂಶದೊAದಿಗೆ ಪೇಟೆ ಶ್ರೀ ರಾಮಂದಿರ, ಅರುಣಾಸುರನ ವಧೆ ಕಥಾ ಸಾರಾಂಶದೊAದಿಗೆ ಶ್ರೀ ಚೌಡೇಶ್ವರಿ ದೇವಾಲಯ, ಕದಂಬ ಕೌಶಿಕೆ ಕಥಾ ಸಾರಾಂಶದೊAದಿಗೆ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಸಮಾಧಾನಕಾರ ಬಹುಮಾನವಾಗಿ ಬೆಳ್ಳಿ ಸಾಮಗ್ರಿ, ನಾಲ್ಕು ಕರಗ ದೇವಾಲಯಗಳಿಗೆ ಬೆಳ್ಳಿ ಸಾಮಗ್ರಿಗಳನ್ನು ವಿತರಿಸಲಾಯಿತು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಖಜಾಂಚಿ ಅರುಣ್ ಶೆಟ್ಟಿ, ಉಪಾಧ್ಯಕ್ಷ ಉದಯಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ದಸರಾ ಸಮಿತಿ ಗೌರವಾಧ್ಯಕ್ಷ ಸತೀಶ್ ಪೈ, ನಗರಸಭಾ ಸದಸ್ಯೆ ಸವಿತಾ ರಾಕೇಶ್, ಡಿವೈಎಸ್‌ಪಿ ಮಹೇಶ್‌ಕುಮಾರ್, ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್, ಮಾಜಿ ಅಧ್ಯಕ್ಷರಾದ ಮನು ಮಂಜುನಾಥ್, ಗೌರವಾಧ್ಯಕ್ಷ ಪಿ.ಜಿ. ಮಂಜುನಾಥ್ ಮತ್ತಿತರರು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಹಾಜರಿದ್ದು, ಬಹುಮಾನ ವಿತರಿಸಿದರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಕಾರ್ಯಕ್ರಮ ನಿರ್ವಹಿಸಿದರು.