ಮಡಿಕೇರಿ, ಅ. ೧೩: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯುಧ ಪೂಜೆ ಹಾಗೂ ವಿಜಯ ದಶಮಿಯಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನರಂಜಿಸಿದವು.

ಆಯುಧಪೂಜೆಯ ಶುಕ್ರವಾರದಂದು ರಾತ್ರಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೋಡಿ ಮೋಡಿ ಮಾಡಿತು. ತನ್ನ ಜೇನ ಹನಿಯಂತಹ ಸುಮಧುರ ಕಂಠದಿAದ ರಾಜೇಶ್ ಕೃಷ್ಣನ್ ಹಾಡಿದ ಹಾಡುಗಳಿಗೆ ಪ್ರೇಕ್ಷಕರು ತಲೆದೂಗಿದರು. ಅರ್ಜುನ್ ಜನ್ಯ ಕೂಡ ತಮ್ಮ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡಿ ಮನರಂಜಿಸಿದರು. ಇವರೊಂದಿಗೆ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಹಾಡುಗಾರಿಕೆಗೆ ಜನರು ಮನಸೋತರು. ಅರ್ಜುನ್ ಜನ್ಯ ಜೊತೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕುಟುಂಬ ಹೆಜ್ಜೆ ಹಾಕಿತು. ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಕೂಡ ವೇದಿಕೆಯಲ್ಲಿ ಸಾಥ್ ನೀಡಿದರು. ಕಿರುತೆರೆ ಕಲಾವಿದ ರಾಘವೇಂದ್ರ ರಾಗಿಣಿ ನಿರೂಪಣೆ ಮಾಡಿದರು.

ಇದಕ್ಕೂ ಮುನ್ನ ನಾಟ್ಯಕಲಾ ಸ್ಟುಡಿಯೋದಿಂದ ನಾಟ್ಯ ಸಂಗಮ, ವೀರಾಜಪೇಟೆ ಟೀಂ ಇಂಟೋಪಿಸ್ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ವೈವಿಧ್ಯ, ಮೈಸೂರಿನ ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ನೃತ್ಯ, ಕಂಚಿ ಕಾಮಾಕ್ಷಿ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ದಸರಾದ ಕೊನೆದಿನ ವಿಜಯದಶಮಿಯಂದು ಜಿ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್÷ ೧೯ ರನ್ನರ್ ಅಪ್ ತನುಶ್ರೀ ಮಂಗಳೂರು ಮತ್ತು ಸರಿಗಮಪ ಗಾಯಕ ಬಾಳೆಲೆಯ ಅನ್ವಿತ್ ಕುಮಾರ್ ಅವರಿಂದ ಸಂಗೀತ ಸಂಜೆ, ಕನ್ನಡ ಸಿರಿ ಸ್ನೇಹ ಬಳಗದಿಂದ ಗಾನಸುಧೆ, ಮೈಸೂರು ನೃತ್ಯ ವಿದ್ಯಾಪೀಠದಿಂದ ನೃತ್ಯ ವೈವಿಧ್ಯ, ಪೊನ್ನಂಪೇಟೆ ನಾಟ್ಯ ಸಂಕಲ್ಪದಿAದ ನೃತ್ಯ ಕಾರ್ಯಕ್ರಮದೊಂದಿಗೆ ಖ್ಯಾತ ಗಾಯಕಿ ಸಾಧು ಕೋಕಿಲ, ಉಷಾ ಕೋಕಿಲ ತಂಡದಿAದ ಸಂಗೀತ ರಸಮಂಜರಿ ನಡೆಯಿತು. ಟಿವಿ ರಿಯಾಲಿಟಿ ಶೋನ ಹಾಸ್ಯ ಕಲಾವಿದರುಗಳಾದ ವಿನೋದ್ ಗೊಬ್ಬರಗಾಲ, ಸುಶ್ಮಿತಾ, ಚಂದ್ರಪ್ರಭಾ ಆಗಮಿಸಿ ಮನರಂಜನೆ ನೀಡಿದರು.