(ಅಣ್ಣೀರ ಹರೀಶ್ ಮಾದಪ್ಪ)

ಶ್ರೀಮಂಗಲ, ಅ. ೧೩: ಇದೇ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವ ಮಲ್ಲಮಾಡ ಕುಟುಂಬ, ಕ್ರೀಡಾ ಕೂಟಕ್ಕೆ ಅದ್ದೂರಿಯಾಗಿ ಚಾಲನೆ ನೀಡಿತು.

ಪೊನ್ನಂಪೇಟೆ ತಾಲೂಕು ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಹಬ್ಬದ ಸಂಭ್ರಮ, ಕ್ರೀಡಾ ಉತ್ಸಾಹ, ಕ್ರೀಡಾಭಿಮಾನಿಗಳ ಪ್ರೋತ್ಸಾಹ ಕಾಣುವಾಗ ಕೊಡವ ಕೌಟುಂಬಿಕ ಕ್ರೀಡೆಯಲ್ಲಿ ಜನಪ್ರಿಯವಾದ ಹಾಕಿ, ಕ್ರಿಕೆಟ್, ಹಗ್ಗ ಜಗ್ಗಾಟದಂತೆ ಇದೀಗ ಆರಂಭವಾಗಿರುವ ವಾಲಿಬಾಲ್ ಕ್ರೀಡೆ ಸಹ ಜನಪ್ರಿಯಗೊಳ್ಳುವ ಸಂದೇಶವನ್ನು ನೀಡಿದೆ.

ಇದೇ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ವಾಲಿಬಾಲ್ ಕ್ರೀಡಾಕೂಟವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದರೂ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ:

ಕ್ರೀಡಾಕೂಟಕ್ಕೂ ಮೊದಲು ಮುಖ್ಯ ರಸ್ತೆಯಿಂದ ಮೈದಾನದವರೆಗೆ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು. ಪೊನ್ನಂಪೇಟೆ -ಕುಟ್ಟ ರಸ್ತೆ ಬೆಕ್ಕೆಸೊಡ್ಲೂರು ಮಂದತವ್ವ ದ್ವಾರದಿಂದ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು -ಪುರುಷರು ಸಾಂಪ್ರದಾಯಿಕ ಉಡುಗೆಯೊಂದಿಗೆ ಓಡ್ಡೋಲಗ, ತಳಿಯತಕ್ಕಿ ಬೊಳಕ್, ಕೋವಿ ಹಿಡಿದು ಮೆರವಣಿಗೆಯಲ್ಲಿ ಕುಟುಂಬದವರು, ತಾಮನೆ ಮಹಿಳೆಯರು ಪಾಲ್ಗೊಂಡಿದ್ದರು.

ಗುAಡು ಹಾರಿಸಿ ಉದ್ಘಾಟನೆ

ಆಕಾಶಕ್ಕೆ ಹಲವು ಸುತ್ತು ಗುಂಡು ಹಾರಿಸಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು. ಕುಟುಂಬದ ಬಗ್ಗೆ ಸುಳ್ಳಿಮಾಡ ಶಿಲ್ಪ ರಚಿಸಿದ ಗೀತೆಯನ್ನು ಹಾಡಲಾಯಿತು.

ರಾಜ್ಯ ಸರಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ಮತ್ತು ಎಕ್ಸಿಕ್ಯೂಟಿವ್ ಆಫೀಸರ್ ಹಾಗೂ ಎಡಿಷನಲ್ ಸೆಕ್ರೆಟರಿ ಆಗಿರುವ ತೀತಿರ ರೋಷನ್ ಅಪ್ಪಚ್ಚು ಅವರು ದೀಪ ಬೆಳಗಿಸಿ ವೇದಿಕೆ ಕಾರ್ಯಕ್ರಮ ಮತ್ತು ವಾಲಿಬಾಲ್ ಚೆಂಡನ್ನು ಸರ್ವಿಸ್ ಮಾಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕೊಡವ ಕೌಟುಂಬಿಕ ಕ್ರೀಡೆಯಲ್ಲಿ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಜನಪ್ರಿಯವಾಗಿದೆ. ಇದೀಗ ಮಲ್ಲಮಾಡ ಕುಟುಂಬ ವಾಲಿಬಾಲ್ ಪಂದ್ಯಾಟ ಆರಂಭಿಸಿದ್ದು ಇದು ಸಹ ಜನಪ್ರಿಯವಾಗಿ ಬೆಳೆಯಲಿ ಎಂದು ಹಾರೈಸಿದರು.

ಕ್ರೀಡೆಯು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುವು ದರೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಲಮಾಡ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ ಕುಟುಂಬದ ಮಹಾಸಭೆಯಲ್ಲಿ ವಾಲಿಬಾಲ್ ಪಂದ್ಯಾಟ ಆಯೋಜಿ ಸಲು ಬೇಡಿಕೆ ಬಂದ ಹಿನ್ನಲೆ ಆಯೋಜಿಸಲಾಗಿದೆ. ಕೊಡವ ಕುಟುಂಬದಲ್ಲಿ ಒಗ್ಗಟ್ಟು ಬಲಗೊಳಿಸಲು, ಕುಟುಂಬದಲ್ಲಿ, ಜನಾಂಗದಲ್ಲಿ ಬಾಂಧವ್ಯ ಬೆಸೆದು ಒಂದೆಡೆ ಸೇರಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

ವೇದಿಕೆಯಲ್ಲಿ ಮಲ್ಲಮಾಡ ಪ್ರಕಾಶ್, ವಿಷ್ಣು, ಮಾಚಿಮಾಡ ಚಿಣ್ಣಮ್ಮ, ಮಲ್ಲಮಾಡ ರಮೇಶ್ ದೇವಯ್ಯ, ಮಲ್ಲಮಾಡ ಅಮ್ಮವ್ವ, ತೀತಿರ ರಂಜು ಸುಬ್ಬಯ್ಯ, ಕುಟುಂಬದ ಕಾರ್ಯದರ್ಶಿ ಈಶ್ವರ ಹಾಜರಿದ್ದರು.

ಫಲಿತಾಂಶ : ಚೆಟ್ಟಂಗಡ ತಂಡದ ವಿರುದ್ಧ ಮಲಚೀರ ಗೆಲುವು. ಬಲ್ಯಮೀದೇರಿರ ವಿರುದ್ಧ ಅಣ್ಣೀರ ಗೆಲುವು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಲೇಮಾಡ ವಿರುದ್ಧ ಚಿಮ್ಮುಣೀರ ಗೆಲುವು. ಮಾಚಂಗಡ ವಿರುದ್ಧ ಕೋಳೇರ ಗೆಲುವು. ಮಲ್ಲಂಡ ವಿರುದ್ಧ ಮನೆಯಪಂಡ ಗೆಲುವು. ಕಟ್ಟೇಂಗಡ ವಿರುದ್ಧ ಕಾಳಿಮಾಡ ಗೆಲುವು. ತೀತಮಾಡ ವಿರುದ್ಧ ಮುಕ್ಕಾಟೀರ ಗೆಲುವು. ಕರ್ತಮಾಡ ವಿರುದ್ಧ ಪಳಂಗAಡ ಗೆಲುವು.

ಬೊಟ್ಟೋಳಂಡ ವಿರುದ್ಧ ಮಣವಟ್ಟಿರ ಗೆಲುವು. ಪೆಮ್ಮಣಮಾಡ ವಿರುದ್ಧ ಕುಪ್ಪಣಮಾಡ ಗೆಲುವು. ಸುಳ್ಳಿಮಾಡ ವಿರುದ್ಧ ಅಳಮೇಂಗಡ ಗೆಲುವು. ಚೆರುಮಂದAಡ ವಿರುದ್ಧ ಉಳುವಂಗಡ ತಂಡಕ್ಕೆ ಗೆಲುವು. ಪಾಡೇಯಂಡ ವಿರುದ್ಧ ಪಳಂಗAಡ ಗೆಲುವು.

ಮಣವಟ್ಟಿರ ವಿರುದ್ಧ ಮುಂಡಚಾಡಿರ ಗೆಲುವು. ಮಲಚೀರ ವಿರುದ್ಧ ಮಂಡುವAಡ ಗೆಲುವು. ಮಾಣಿಪಂಡ ವಿರುದ್ಧ ಪೆಮ್ಮಂಡ ಗೆಲುವು. ತಿರುನೆಲ್ಲಿಮಾಡ ವಿರುದ್ಧ ತಾಣಚ್ಚಿರ ಗೆಲುವು. ಪುದಿಯೊಕ್ಕಡ ವಿರುದ್ಧ ಚೊಟ್ಟೆಯಾಂಡಮಾಡ ಗೆಲುವು. ಮಾಚಿಮಾಡ ವಿರುದ್ಧ ಪಾಡೇಯಂಡ ಗೆಲುವು. ಬಲ್ಲಿಮಾಡ ವಿರುದ್ಧ ಕಂಬಿರAಡ ಗೆಲುವು. ಪೋರಂಗಡ ವಿರುದ್ಧ ಚೇಂದೀರ ಗೆಲುವು. ಅಲ್ಲುಮಾಡ ವಿರುದ್ಧ ಮಾಪಣಮಾಡ ಗೆಲುವು. ಪುಟ್ಟಿಚಂಡ ವಿರುದ್ಧ ಅಯ್ಯಮಾಡ ಗೆಲುವು. ಪೆಮ್ಮಂಡ ವಿರುದ್ಧ ಮಲ್ಲೇಂಗಡ ಗೆಲುವು. ಹಂಚೆಟ್ಟಿರ ವಿರುದ್ಧ ಬೊಟ್ಟಂಗಡ ಗೆಲುವು. ಆಪಟ್ಟಿರ ವಿರುದ್ಧ ಚೌರೀರ ಗೆಲುವು. ಚೆಪ್ಪುಡೀರ ವಿರುದ್ಧ ಮಲ್ಲೇಂಗಡ ಗೆಲುವು. ಗೀಜಿಗಂಡ ವಿರುದ್ಧ ಆಪಟ್ಟಿರ ಗೆಲುವು. ನಾಳಿಯಂಡ ವಿರುದ್ಧ ಮಲ್ಲಂಗಡ (ಬೆಳ್ಳೂರು) ಗೆಲುವು. ಕುಂಡಿಯೋಳAಡ ವಿರುದ್ಧ ಹಂಚೆಟ್ಟಿರ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದವು.

ವೀಕ್ಷಣಾ ವಿವರಣೆಯನ್ನು ಚೆಪ್ಪುಡೀರ ಕಾರ್ಯಪ್ಪ, ಚೋಕಿರ ಅನಿತಾ, ನೆಲ್ಲಮಾಡ ರಾಜಾ ತಿಮ್ಮಯ್ಯ ನೀಡಿದರು. ಮಲ್ಲಮಾಡ ಕುಟುಂಬದ ಸುಮಾರು ೫೦೦ ವರ್ಷದ ಇತಿಹಾಸ ಪರಿಚಯವನ್ನು ಮಲ್ಲಮಾಡ ಗಿರೀಶ್ ಮಾಡಿದರು.