ಸುಂಟಿಕೊಪ್ಪ, ಅ. ೧೩: ಸುಂಟಿಕೊಪ್ಪದ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನಚಾಲಕರ ಸಂಘವು ಇಡೀ ರಾಜ್ಯದಲ್ಲಿ ಒಗ್ಗಟ್ಟು ಮತ್ತು ಅನ್ಯೋನ್ಯತೆಯಿಂದ ಸಮಾಜ ಮುಖಿಯಾದ ಅವುಗಳನ್ನು ಮಾತುಕತೆ ಸಂಧಾನದ ಮೂಲಕ ಪರಿಹರಿಸಿದ ತೃಪ್ತಿ ನನಗಿದೆ ಎಂದು ಸಂಘದೊAದಿಗಿನ ಒಡನಾಟವನ್ನು ಅವರು ಸ್ಮರಿಸಿದರು. ಸುಂಟಿಕೊಪ್ಪದಲ್ಲಿ ನೂತನ ಬಸ್ ನಿಲ್ದಾಣ ಕಾರ್ಯಾರಂಭ ಮಾಡುವವರೆಗೆ ಸಮಸ್ಯೆಗಳು ಇರಲಿವೆ. ಇವುಗಳನ್ನು ಶಾಂತಿ ಸಮಾಧಾನದಿಂದ ಪರಿಹರಿಸಿಕೊಂಡು ಮುಂದುವರಿಯಬೇಕೆAದು ಅವರು ಕಿವಿಮಾತು ಹೇಳಿದರು.

ಆಟೋ ಚಾಲಕರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಮುಖ್ಯ ಕೊಂಡಿಯಾಗಿದ್ದು, ಯಾವುದೇ ಕೀಳರಿಮೆ ಬೇಕಾಗಿಲ್ಲವೆಂದು ಭಾರತೀಶ್ ನುಡಿದರು.

ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿ, ಸಂಘವು ರಕ್ತದಾನ ಶಿಬಿರದಂತಹ ಜೀವ ಉಳಿಸುವ ಶ್ರೇಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನಾರ್ಹ ಎಂದರು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಆಟೋಚಾಲಕರು ಜಾಗರೂಕರಾಗಿ, ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಕಿವಿಮಾತು ಹೇಳಿದರು.

ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್ ಮಾತನಾಡಿ, ಆಟೋಚಾಲಕರ ಸಂಘವು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಮತ್ತು ಯಾವುದೇ ರೀತಿಯ ಜೀವಹಾನಿ ಆಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದರು.

ಸಭಾ ಕಾರ್ಯಕ್ರಮದ ಮೊದಲಿಗೆ ಧರ್ಮಗುರು ಸಿ.ಎಂ. ಹಮೀದ್ ಮೌಲ್ವಿ ಮಾತನಾಡಿ, ಆರ್ಶೀವಚನ ನೀಡಿ, ದೇವರು ಒಬ್ಬರೇ ನಾಮ ಹಲವು, ಮಾನವೀಯ ಮೌಲ್ಯ ಗುಣಗಳು ಅತೀ ಮುಖ್ಯ ಎಂದರು.

ಆಟೋ ಚಾಲಕರ ಸಂಘದ ಕಛೇರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಗಣೇಶ್ ಭಟ್ ನೆರವೇರಿಸಿದರು. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಹೆಸರು ಮಾಡಿದೆಯೆಂದು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಬಣ್ಣಿಸಿದ್ದಾರೆ.

ಶುಕ್ರವಾರದಂದು ಆಟೋಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಆಯುಧಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಹನ ಚಾಲಕರ ಸೇವೆಯನ್ನು ಹಣದಿಂದ ಅಲೆಯಲು ಸಾಧ್ಯವಿಲ್ಲ ದಿನದ ೨೪ ಗಂಟೆಯು ಮನೆ ಮಠ ಸಂಸಾರವನ್ನು ಬಿಟ್ಟು ಕರೆದವರ ಪಾಲಿನ ಆಪದ್ಭಾಂಧವರಾಗಿ ಕರ್ತವ್ಯ ನಿರ್ವಹಿಸುವ ನಿಮಗೆ ಸದಾ ಕಾಣದ ಶಕ್ತಿಯೊಂದರ ಶ್ರೀರಕ್ಷೆ ಇರಲೆಂದು ಹಾರೈಸಿದ ಅವರು ಧಾರ್ಮಿಕ ಆಚರಣೆಗಳನ್ನು ಜಾತಿ ಮತ ಭೇದವಿಲ್ಲದೆ ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಮಾಡುವುದನ್ನು ಕೂಡ ಪ್ರಶಂಸಿಸಿದರು.

ಮತ್ತೋರ್ವ ಅತಿಥಿ ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ, ಪಕ್ಷಾತೀತ ಮತ್ತು ಜಾತ್ಯತೀತ ನೆಲೆಗಟ್ಟಿನಲ್ಲಿ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬಗಳ ಆಚರಣೆ ಈ ವ್ಯಾಪ್ತಿಯಲ್ಲಿದ್ದು, ಮುಂದೆಯೂ ಮುಂದುವರೆಯಬೇಕೆAದು ಅವರು ಆಶಿಸಿದರು. ತಮ್ಮ ಬಾಲ್ಯದಲ್ಲಿ ಮೊದಲ ಆಟೋವನ್ನು ನೋಡಿದ ಮತ್ತು ೩ ಚಕ್ರಗಳಲ್ಲಿ ಸಂಚರಿಸುವ ಈ ವಾಹನದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳು ವಿಭಿನ್ನವಾಗಿದ್ದವು ಎಂಬುದನ್ನು ಸ್ಮರಿಸಿದ ಅವರು ಕಾಲ ಬದಲಾದ ಹಿನ್ನೆಲೆಯಲ್ಲಿ ೨೦೦ಕ್ಕೂ ಹೆಚ್ಚು ಆಟೋಗಳು ಸುಂಟಿಕೊಪ್ಪದಲ್ಲಿ ಕಾರ್ಯಾಚರಣೆ ಮಾಡುತ್ತಿದೆ, ಜನಸಂಖ್ಯೆಗೆ ಅನುಗುಣವಾಗಿ ಆಟೋಗಳು ಬೇಕಾಗಿವೆ, ಅವಶ್ಯಕತೆಗೆ ಅನುಗುಣವಾಗಿ ಆಟೋಗಳು ಕಾರ್ಯಾಚರಿಸಲಿ ಎಂದು ಅವರು ಹೇಳಿದರು. ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಭಿನ್ನಾಭಿಪ್ರಾಯಗಳು ತಲೆದೋರಿದಾಗ