ವೀರಾಜಪೇಟೆ, ಅ. ೧೩: ಕಾರ್ಮಿಕರು ಆರೋಗ್ಯದ ಹಂಗು ತೊರೆದು ದುಡಿಯುವ ವರ್ಗವಾಗಿದ್ದು. ಬದುಕಿಗೆ ಯಾವುದೇ ಭದ್ರತೆ ಇಲ್ಲ. ಸವಲತ್ತು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಭಾ.ಜ.ಪ ಸಾಮಾಜಿಕ ಜಾಲತಾಣದ ಪ್ರಮುಖರಾದ ತೇಲಪಂಡ ಶಿವಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ೧೭ ನೇ ಆಯೂಧ ಪೂಜಾ ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಿವಕುಮಾರ್ ಅವರು ಸನಾತನ ಹಿಂದೂ ಧರ್ಮದ ಮೇಲೆ ಹಲವು ಪರಕೀಯರ ಧಾಳಿಗಳು ನಡೆದರೂ ಇಂದಿಗೂ ಭವ್ಯ ಪರಂಪರೆ, ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಹಿಂದೂ ಧರ್ಮ ಬಾಂಧವರು ಆಚರಿಸುವ ಪ್ರತಿಯೊಂದು ಹಬ್ಬಗಳಲ್ಲಿ ಪೌರಾಣಿಕ ಹಿನ್ನಲೆಯಿದೆ. ಜೀವಂತವಾಗಿರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ ರಾಗಬೇಕು. ಖಾಸಗಿ ಬಸ್ ಕಾರ್ಮಿಕರು ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ ಸರ್ಕಾರ ಕಾರ್ಮಿಕರ ಸಮಸ್ಯೆಯನ್ನು ಅರಿತು ಪರಿಹಾರಕ್ಕೆ ಮುಂದಾಗಬೇಕು. ಜೀವನ ಭದ್ರತೆ ಕಲ್ಪಿಸಬೇಕು ಎಂದು ಹೇಳಿದರು.

ಉದ್ಯಮಿ ಮತ್ತು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರಾದ ವಿನೂಪ್ ಕುಮಾರ್ ಮಾತನಾಡಿ, ಅನೇಕ ವರ್ಷಗಳ ಹಿಂದೆ ನಗರದಲ್ಲಿ ಧರ್ಮಗಳ ಮಧ್ಯೆ ಆಂತರಿಕ ಕಲಹಗಳು ಕಂಡುಬAದಿತ್ತು. ಅದರೆ ಇದೀಗ ಕೋಮು ಸೌಹಾರ್ಧತೆಗೆ ಗೌರವ ಸೂಚಿಸಿ ಮುಸ್ಲಿಂ ಬಾಂಧವರು ನಗರದಲ್ಲಿ ನಡೆದ ಗೌರಿ ಗಣೇಶೋತ್ಸವ ವಿಸರ್ಜನೆ, ಓಣಂ ಆಚರಣೆಯ ಮೆರವಣಿಗೆ ಸಂದರ್ಭ ತಂಪು ಪಾನೀಯ ನೀಡಿ ಹೊಸ ಮುನ್ನುಡಿ ಬರೆದಿದ್ದಾರೆ. ದೇಶವು ಶಾಂತಿಯ ತೋಟವಾಗಬೇಕು. ಕೋಮು ಗಲಭೆಗಳಿಗೆ ಆಸ್ಪದ ನೀಡದೆ ಒಳಿತು ಮಾಡುವ ಧರ್ಮ ನಮ್ಮದಾಗಬೇಕು ಎಂದು ಹೇಳಿದರು.

ಕೊಡಗು ಖಾಸಗಿ ಬಸ್‌ಕಾರ್ಮಿಕರ ಸಂಘದ ಅಧ್ಯಕ್ಷರಾದ ಕುಂಬೆಯAಡ ಸುರೇಶ್ ದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾತಿ ಮತ ಭೇದವಿಲ್ಲದೆ ಹಲವಾರು Á್ದನಿಗಳ ನೆರವಿನಿಂದ ಆಯುಧ ಪೂಜಾ ಕಾರ್ಯ ನಡೆಸಿಕೊಂಡು ಬರುತಿದ್ದೇವೆ. ಖಾಸಗಿ ಬಸ್ ಕಾರ್ಮಿಕರ ಅಭಿವೃದ್ಧಿಗಾಗಿ ಈಗಾಗಲೇ ಸಂಘವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಉಮ್ಮರ್ ಚಿಟ್ಟಡೆ, ಗುತ್ತಿಗೆದಾರರಾದ ಕೋಡಿರ ವಿವೇಕ್, ಮಂಜುನಾಥ ಮೋಟರ‍್ಸ್ ಮಾಲೀಕರಾದ ಕೈಬುಲಿರ ಮನು ನಂಜಪ್ಪ, ವಿನಾಯಕ ಟ್ರಾವೆಲ್ಸ್ ಮಾಲೀಕರಾದ ಬಿ.ವಿ. ಹೇಮಂತ್ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಮಡಿಕೇರಿ ಅಧ್ಯಕ್ಷರಾದ ರಮೇಶ್ ಜೋಯಪ್ಪ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಗೋಪಮ್ಮ ತಂಡದಿAದ ಉರುಟ್ಟಿಕೊಟ್ಟ್ ಪಾಟ್, ಶಾಲಾ ವಿಧ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆ, ಮತ್ತು ಟೀಮ್ ಪವರ್ ಸ್ಟೊçÃಕ್ ಕೊಡಗು ಮೈಸೂರು ತಂಡದ ಸದಸ್ಯರಿಂದ ಬೈಕ್ ಸ್ಟಂಟ್ ಶೋ ನಡೆಯಿತು. ಸಂಜೆ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಬಸ್ಸು ನಿರ್ವಾಹಕರಾದ ಕುಂಬೆಯAಡ ಗಣೇಶ್, ಪತ್ರಕರ್ತರಾದ ಟಿ.ಜೆ.ಕಿಶೋರ್ ಕುಮಾರ್ ಶೆಟ್ಟಿ ಮತ್ತು ಪೌರಕಾರ್ಮಿಕರಾದ ಹೆಚ್.ಎನ್. ಸುಬ್ರಮಣಿ, ಶೈಕ್ಷಣಿಕ ಮತ್ತು ಕ್ರೀಡೆಗಳಲ್ಲಿ ಸಾಧನೆಗೈದ ಕಾರ್ಮಿಕ ಸಂಘದ ಸದಸ್ಯರ ಮಕ್ಕಳಾದ ಶಾನ್ವಿಕ, ಭವಿಷ್ಯ, ಗ್ರೀಷ್ಮಾ ಪೊನ್ನಮ್ಮ, ಪೂರ್ವಿ ಪೂವಮ್ಮ, ಶಾನಿಯ ಅಚ್ಚುತ್ತನ್ ಅವರಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಶಾರದಾ ಮೆಲೋಡಿಸ್ ಮಂಗಳೂರು ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಜ್ ಸ್ವಾಗತಿಸಿದರು. ವಿನೋದ್ ನಿರೂಪಣೆ ಮಾಡಿ ದಿನೇಶ್ ನಾಯರ್ ವಂದಿಸಿದರು. ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ಪದಾಧಿಕಾರಿಗಳು ನಿರ್ದೇಶಕರು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.