ಗೋಣಿಕೊಪ್ಪಲು, ಅ. ೧೩: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ವಿಜಯದಶಮಿಯಂದು ನಡೆದ ದಶಮಂಟಪ ಶೋಭಾಯಾತ್ರೆಯಲ್ಲಿ ನಮ್ಮ ದಸರಾ ಸಮಿತಿ ಪ್ರಥಮ, ಯುವ ದಸರಾ ಸಮಿತಿ ದ್ವಿತೀಯ, ಸ್ನೇಹಿತರ ಬಳಗ ಕೊಪ್ಪ ತೃತೀಯ ಸ್ಥಾನ ಪಡೆದುಕೊಂಡಿತು.

ಕಳೆದ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಚಟುವಟಿಕೆಗಳ ಮೂಲಕ ನಡೆಯುತ್ತಿದ್ದ ದಸರಾದ ಕೊನೆ ದಿನ ಸಹಸ್ರ ಸಂಖ್ಯೆಯ ಜನರ ಸಮಕ್ಷಮದಲ್ಲಿ ಉತ್ಸವಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು. ಕತ್ತಲು ಆವರಿಸುತ್ತಿದ್ದಂತೆ ಗೋಣಿಕೊಪ್ಪ ಪಟ್ಟಣಕ್ಕೆ ದಕ್ಷಿಣ ಕೊಡಗು ಸೇರಿದಂತೆ ಜಿಲ್ಲೆ, ಅಂತರ ಜಿಲ್ಲೆಯಿಂದಲೂ ಜನರು ಆಗಮಿಸಿ ವೈಭವ ಕಣ್ತುಂಬಿಕೊAಡರು.

ಚಿತ್ತಾಕರ್ಷಕ ಬೆಳಕಿನ ನಡುವೆ ಸುರಾಸುರರ ಯುದ್ಧವನ್ನು ಮಂಟಪಗಳಲ್ಲಿ ಅನಾವರಣ ಮಾಡಲಾಗಿತ್ತು. ಆದರೆ, ದಶಮಂಟಪಗಳ ಪೈಕಿ ಕೆಲವು ಮಂಟಪಗಳು ನಿಗದಿತ ಸಮಯದಲ್ಲಿ ಪ್ರದರ್ಶನ ನೀಡದೆ ಜನರಿಗೆ ನಿರಾಸೆ ಮೂಡಿಸಿದವು. ಲಕ್ಷಾಂತರ ರೂಪಾಯಿ ಹಣವನ್ನು ವ್ಯಯ ಮಾಡಿ ಮಂಟಪಗಳನ್ನು ತಯಾರಿಸಿದ್ದರೂ ಸಮಯ ಪಾಲನೆಯಲ್ಲಿ ಕೆಲವು ಸಮಿತಿಗಳು ಎಡವಿದ್ದು ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ನೀಡಬೇಕಾಗಿದ್ದ ಶೋಭಾಯಾತ್ರೆಯ ಪ್ರದರ್ಶನ ಇಲ್ಲದೆ ತೆರಳುವ ಪರಿಸ್ಥಿತಿ ನಿರ್ಮಾಣವಾಯಿತು.

ಮುಂಜಾನೆಯ ನಾಲ್ಕು ಗಂಟೆಯ ಸುಮಾರಿಗೆ ಸುತ್ತಮುತ್ತಲಿನ ಪ್ರದೇಶಗಳಿಂದ ಶೋಭಾಯಾತ್ರೆ ಪ್ರದರ್ಶನ ವೀಕ್ಷಣೆ ಮಾಡಲು ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದರು. ಬೆಳಿಗ್ಗೆ ಆರು ಗಂಟೆಯಾದರೂ ಕೆಲವು ಮಂಟಪಗಳು ಬಸ್ ನಿಲ್ದಾಣದ ಬಳಿ ಬರಲೇ ಇಲ್ಲ ಇದು ನಿರಾಸೆಗೆ ಕಾರಣವಾಯಿತು.

ಸಂಜೆ ೭-೩೦ ಕ್ಕೆ ಶ್ರೀ ಕಾವೇರಿ ದಸರಾ ಸಮಿತಿಯ ವತಿಯಿಂದ ಸ್ವಾತಂತ್ರö್ಯ ಹೋರಾಟಗಾರ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ತರುವಾಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ಶಿವ ತಾಂಡವ ಕಥಾ ಸಾರಂಶವನ್ನು ಹೊರತಂದ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿಯು ಈ ಬಾರಿ ಪ್ರಥಮ ಸ್ಥಾನ ಪಡೆಯಿತು. ಆಂಜನೇಯ ಕಥಾ ಸಾರಂಶವನ್ನು ಪ್ರಸ್ತುತ ಪಡಿಸಿದ್ದ ಮೂರನೇ ವಿಭಾಗದ ಯುವ ದಸರಾ ಸಮಿತಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಸಿಂಧು ರಾಕ್ಷಸ ವಧೆ ಕಥಾನಕ್ಕೆ ಕೊಪ್ಪದ ಸ್ನೇಹಿತರ ಬಳಗ ಪಡೆದುಕೊಂಡಿತು.

ಕಾವೇರಿ ದಸರಾ ಸಮಿತಿಯು ಹತ್ತು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಹೊತ್ತು ಸಾಗಿತು. ಕಾವೇರಿ ಮಾತೆ ಹೊತ್ತು ನಾಡ ಹಬ್ಬ ದಸರಾ ಸಮಿತಿ ಮುನ್ನಡೆಯಿತು, ಕೈಕೇರಿ ಭಗವತಿ ಯುವ ದಸರಾ ಸಮಿತಿ ಚಾಮುಂಡಿಯಿAದ ದುಷ್ಟರ ಸಂಹಾರ, ನವಚೇತನ ದಸರಾ ಸಮಿತಿ ಕಾಂಡಾ ಈಶ್ವರ ಕಥಾಸಾರಂಶ, ಸರ್ವರ ದಸರಾ ಸಮಿತಿ ಅಯ್ಯಪ್ಪ ಸ್ವಾಮಿ, ಮಹಿಷಿ ಪ್ರಸಂಗ, ಶಾರದಾಂಭ ದಸರಾ ೩ಐದನೇ ಪುಟಕ್ಕೆ (ಮೊದಲ ಪುಟದಿಂದ) ಸಮಿತಿ ರಾವಣನಿಂದ ಸೀತಾ ಮಾತೆ ಅಪರಣ, ಶ್ರೀರಾಮನಿಂದ ರಾವಣ ಸಂಹಾರ, ಕಾಡ್ಲಯ್ಯಪ್ಪ ಸಮಿತಿ ಗಜವಧನ ಹಿನ್ನೆಲೆಯನ್ನು ಪ್ರಸ್ತುತಪಡಿಸಿತು. ಪ್ರತಿ ಮಂಟಪಗಳ ಮುಂದೆ ಜನರು ಧ್ವನಿವರ್ಧಕದಲ್ಲಿ ಬರುತ್ತಿದ್ದ ಹಾಡು ಹಾಗೂ ವಾಲಗಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ೫೦೦ ಕ್ಕೂ ಅಧಿಕ ಸಿಬ್ಬಂದಿಗಳು ಬಂದೊಬಸ್ತ್ನಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಡ ರಾತ್ರಿಯ ವೇಳೆ ಆಗಮಿಸಿ ಪೊಲೀಸ್ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿ, ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ನೀಡಿದರು. ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ ಮುಂಜಾನೆ ೭-೩೦ ಕ್ಕೆ ಬಸ್ ನಿಲ್ದಾಣದಲ್ಲಿ ಬಹುಮಾನ ಘೋಷಣೆ ಮಾಡಿದರು. ಈ ವೇಳೆ ದಸರಾ ಸಮಿತಿಯ ಪದಾಧಿಕಾರಿಗಳಾದ ದ್ಯಾನ್ ಸುಬ್ಬಯ್ಯ, ಚಂದನ್ ಕಾಮತ್, ಪಾರುವಂಗಡ ದಿಲನ್ ಚಂಗಪ್ಪ, ನಾಯಂದರ ಶಿವಾಜಿ, ದಶ ಮಂಟಪ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ, ಮತ್ತಿತರರು ಉಪಸ್ಥಿತರಿದ್ದರು. ಕಾಫಿ ಬೋರ್ಡ್ನ ಕಾಡ್ಲಯ್ಯಪ್ಪ ದಸರಾ ಸಮಿತಿಯ ಪದಾಧಿಕಾರಿಗಳು ಬಹುಮಾನ ಘೋಷಣೆಯ ತೀರ್ಪುಗಾರಿಕೆ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.