ಸೋಮವಾರಪೇಟೆ, ಅ. ೧೩: ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದ್ದು, ವಿಜಯ ದಶಮಿಯಂದು ಶ್ರೀ ಶಕ್ತಿ ದೇವತೆಯನ್ನು ರಾಜಬೀದಿ ಉತ್ಸವದ ಭಾಗವಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.

ಕಳೆದ ೯ ದಿನಗಳ ಕಾಲ ದೇವಾಲಯದಲ್ಲಿ ಶ್ರೀ ಪಾರ್ವತಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿ, ನಿನ್ನೆ ಮಧ್ಯಾಹ್ನ ದೇವಿಯ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ವೀರಗಾಸೆ, ಡೊಳ್ಳುಕುಣಿತ, ಗೊಂಬೆ ಕುಣಿತದೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ, ಸಂಜೆ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು. ಮಹಿಳೆ ಯರಾದಿಯಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ನಂದ, ಪದಾಧಿಕಾರಿಗಳಾದ ಎಸ್.ಆರ್. ಸೋಮೇಶ್, ಹಾಲೇರಿ ದಿನೇಶ್, ಜಗದೀಶ್, ಆಶಾ ಸತೀಶ್, ಎಲ್.ಎಂ. ಪ್ರೇಮಾ, ಅರ್ಚನಾ, ಲಕ್ಷಿö್ಮÃ ಮತ್ತಿತರರು ಇದ್ದರು.