ಐಗೂರು, ಅ. ೧೫: ಕನ್ನಡ ಸಾಹಿತ್ಯ ಪರಿಷತ್ತಿನ ಐಗೂರು ಕೇಂದ್ರದ ಕಚೇರಿಯನ್ನು ಐಗೂರಿನ ಗ್ರಾ.ಪಂ. ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಅಜಿತ್‌ಕುಮಾರ್ ಇತ್ತೀಚೆಗೆ ನೂತನ ಪಿಡಿಓ ಪೂರ್ಣಕುಮಾರ್ ಅವರು ಕಸಾಪ ಐಗೂರು ಘಟಕದ ಕಚೇರಿಗೆ ಪಂಚಾಯಿತಿಯ ಕೊಠಡಿಯನ್ನು ನೀಡಿರುವುದು ಕನ್ನಡಾಭಿಮಾನವನ್ನು ತೋರಿಸುತ್ತದೆ ಎಂದರು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಕನ್ನಡದ ಕೆಲಸಕ್ಕೆ ಜಾತಿಭೇದ ಇಲ್ಲ, ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ ಅವರ ಕನ್ನಡದ ಕೆಲಸ ಐಗೂರಿಗೆ ಕೀರ್ತಿಯನ್ನು ತರಲಿ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷÀ ಮುರಳೀಧರ್ ಮಾತನಾಡಿ, ಕೊಡಗಿನಲ್ಲಿ ಮೂರು ಇದ್ದ ಶಾಸಕರ ಸಂಖ್ಯೆಯನ್ನು ಎರಡಕ್ಕೆ ಇಳಿಸಲಾಗಿದೆ. ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಅವಶ್ಯಕತೆ ಇದೆ ಎಂದರು.

ಸಭೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಮತ್ತು ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅವರು ಮಾತನಾಡಿ ಮುಂದೆ ಐಗೂರಿನಲ್ಲಿ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಕೈಜೋಡಿಸಿ ಎಂದರು.

ಈ ಸಂದರ್ಭದಲ್ಲಿ ಕಚೇರಿಗೆ ಪರಿಕರಗಳನ್ನು ನೀಡಿದ ದಾನಿಗಳಾದ ವಿಶ್ವನಾಥರಾಜ ಅರಸ್, ಮಚ್ಚಂಡ ಅಶೋಕ್, ನಿ.ಡಿ.ವೈ.ಎಸ್.ಪಿ. ಸೋಮಣ್ಣ, ಕೆ.ಪಿ. ರೋಷನ್ ಮತ್ತು ಮೂಡಗದ್ದೆ ದಾಮೋದರ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ಅರುಣ್ ನಿರೂಪಿಸಿ, ತಿಮ್ಮಯ್ಯ ವಂದಿಸಿದರು. ಕೆಡಿಪಿ ಸದಸ್ಯರಾದ ಸಬಿತಾ ಚೆನ್ನಕೇಶವ, ರೋಷನ್, ಕಸಾಪ ಪದಾಧಿಕಾರಿಗಳಾದ ವಿಶ್ವನಾಥ ರಾಜ ಅರಸು, ಬೆಳ್ಳಿಯಪ್ಪ, ಅಜಿತ್ ಕುಮಾರ್, ತಿಮ್ಮಯ್ಯ, ಎಂ.ಟಿ. ಸರಳ ಕುಮಾರಿ, ಜ್ಯೋತಿ ಅರುಣ್, ವಸಂತಿ ರವೀಂದ್ರ, ಕೆ.ಪಿ. ದಿನೇಶ್, ಗುರುದರ್ಶನ್, ವಿಲ್ಫೆçಡ್ ಕ್ರಾಸ್ಥ, ವಾಸುರೈ, ಹೊನ್ನಪ್ಪ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.