ಮಡಿಕೇರಿ, ಅ. ೧೫ : ಮಡಿಕೇರಿ ದಸರಾ ಜನೋತ್ಸವ ಸಂದರ್ಭ ೯ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಅವರನ್ನು ಸಾಂಸ್ಕೃತಿಕ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕÀಟ್ ರಾಜ ಸನ್ಮಾನಿಸಿ ತಾ. ೧೨ರ ರಾತ್ರಿ ಗೌರವಿಸಿದರು.

ಇದೇ ಸಂದರ್ಭ ಪೌರಾಯುಕ್ತ ರಮೇಶ್, ದಸರಾ ಸಭಾಂಗಣದ ಶುಚಿತ್ವದಲ್ಲಿ ಗಮನ ಹರಿಸಿದ ನಗರಸಭಾ ಸಿಬ್ಬಂದಿ ರಂಗಪ್ಪ, ಎಚ್.ಡಿ, ಲೋಕೇಶ್, ಪೌರಸಿಬ್ಬಂದಿಗಳಾದ ಎಚ್.ಎನ್, ಶಿವಕುಮಾರ್ ಎಚ್.ಎಂ, ಭೀಮಪ್ಪ, ಭಾಗ್ಯ, ಅಂಚನ, ನಾಗಪ್ಪ, ಪ್ರಮೋದ್, ಮಂಜುಳಾ, ಸುಶೀಲಾ, , ನಗರಸಭಾ ಸಿಬ್ಬಂದಿ ಅಕ್ರಂ, ವಾರ್ತಾಧಿಕಾರಿ ಚಿನ್ನಸ್ವಾಮಿ ಅವರಿಗೆ ಸ್ಮರಣಿಕೆ ನೀಡಿ ಜಿಲ್ಲಾಧಿಕಾರಿಗಳು ದಸರಾ ಸಮಿತಿ ವತಿಯಿಂದ ಕೃತÀಜ್ಞತೆ ಸಲ್ಲಿಸಿದರು.

ಮಡಿಕೇರಿ ದಸರಾ ಸಮಿತಿ ಸಂಚಾಲಕ ತೆನ್ನಿರ ಮೈನಾ, ಖಜಾಂಚಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸದಸ್ಯರಾದ ವೀಣಾಕ್ಷಿ ರವಿಕುಮಾರ್, ಲೀಲಾಶೇಷಮ್ಮ, ಕುಡೆಕಲ್ ಸಂತೋಷ್, ಭಾರತಿ ರಮೇಶ್, ಮಿನಾಜ್ ಪ್ರವೀಣ್, ಸತ್ಯ ಮಂಜು, ರೇವತಿ ರಮೇಶ್, ದಿವಾಕರ್, ವಿನು, ಅರ್ಜುನ್ ರಾಜೇಂದ್ರ, ರೂಪ ಸುಬ್ಬಯ್ಯ, ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತಾ, ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರಾ, ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ಹಾಜರಿದ್ದರು.