ಗೋಣಿಕೊಪ್ಪಲು, ಅ. ೧೫: ಹೆಜ್ಜೇನು ದಾಳಿ ನಡೆಸಿದ ಪರಿಣಾಮ ರೈತರೋರ್ವರು ಮ್ರೃತಪಟ್ಟ ಘಟನೆ ಸಂಭವಿಸಿದೆ. ನಿಟ್ಟೂರು ಗ್ರಾಮದ ಕೊಟ್ಟಂಗಡ ಪೂಣಚ್ಚ (ಪೂಮಣಿ -೭೨) ಮೃತಪಟ್ಟ ದುರ್ದೈವಿ. ಮೂಲತಃ ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದ ನಿವಾಸಿ ಆಗಿರುವ ಕೊಟ್ಟಂಗಡ ಪೂಣಚ್ಚ ಅವರು ಎಂದಿನAತೆ ತಮ್ಮ ತೋಟದ ಕೆಲಸ ಮುಗಿಸಿ ಸಂಜೆಯ ವೇಳೆ ಮನೆಯ ಕಡೆ ತೆರಳುತ್ತಿದ್ದ ವೇಳೆ ಕಾಲ ಭೈರವ ದೇವಾಲಯದ ಬಳಿ ದಿಢೀರನೆ ಎದುರಾದ ಹೆಜ್ಜೇನುಗಳು ಇವರ ಮೇಲೆರಗಿವೆ.

ಈ ವೇಳೆ ನೋವು ತಾಳಲಾರದೆ ಜೋರಾಗಿ ಕಿರುಚಿಕೊಂಡ ಸಂದರ್ಭದಲ್ಲಿ ಸಮೀಪದ ಕಾಲ ಭೈರವ ದೇವಾಲಯದಲ್ಲಿದ್ದ ಸಮಿತಿ ಅಧ್ಯಕ್ಷ ಮೇಚಂಡ ವಾಸು ಸೋಮಯ್ಯ ಹಾಗೂ ಕಾರ್ಯದರ್ಶಿ ಕೊಟ್ಟಂಗಡ ಮಧು ಹಾಗೂ ಅರ್ಚಕರು ಸ್ಥಳಕ್ಕೆ ತೆರಳಿ, ಕಂಬಳಿಯಿAದ ಜೇನು ನೊಣಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಆ ಸಂದರ್ಭದಲ್ಲಿ ಅವರುಗಳಿಗೂ ಕೆಲವು ಜೇನು ನೊಣಗಳು ಕಚ್ಚಿವೆ.

ಕೂಡಲೇ ಪೂಮಣಿಯವರನ್ನು ಚಿಕಿತ್ಸೆಗಾಗಿ ಬಾಳೆಲೆ ಆಸ್ಪತ್ರೆಗೆ ಸಾಗಿಸಿದರು.

ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಅಸು ನೀಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ತಿಳಿದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಸದಾ ಲವಲವಿಕೆಯಿಂದ ಇದ್ದ ಪೂಮಣಿ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. - ಹೆಚ್.ಕೆ.ಜಗದೀಶ್