ವೀರಾಜಪೇಟೆ, ಅ. ೧೫: ಕೊಡವ ಭಾಷೆ ಇದ್ದರೆ ಮಾತ್ರ ನಮ್ಮ ಆಚಾರ, ವಿಚಾರ, ಪದ್ಧತಿ ಪರಂಪರೆಗಳು ಉಳಿಯಲು ಸಾಧ್ಯ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದಲ್ಲಿ ಪಿಅಂಡ್‌ಜಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣಗೊಂಡ ‘ಕಾಲತ್‌ರ ಕಳಿ’ ಎಂಬ ಕೊಡವ ಸಿನಿಮಾದ ಪ್ರೀಮಿಯರ್ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡವ ಸಿನಿಮಾ ನಿರ್ಮಾಣದಲ್ಲಿ ಸಂಘ, ಸಂಸ್ಥೆಗಳು ದೊಡ್ಡ ಪ್ರಯತ್ನ ನಡೆಸುತ್ತಿದ್ದು ಭಾಷೆ ಯನ್ನು ಉಳಿಸುವಲ್ಲಿ ಪ್ರಯತಿಸುತ್ತಿವೆ.

ಭಾಷೆಗಳು ಉಳಿಯುವುದು ಇಂತಹ ಚಿತ್ರಗಳಿಂದ. ದೇಶದಲ್ಲಿ ಅತಿ ಕಡಿಮೆ ಜನಸಂಖ್ಯೆಯ ಪಾರ್ಸಿ ಜನಾಂಗವು ತನ್ನದೆ ಆದ ಛಾಪನ್ನು ಉಳಿಸಿಕೊಂಡಿದೆ. ಕೊಡವ ಜನಾಂಗದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ. ನಮ್ಮವರು ಸದಾ ದೇಶ ರಕ್ಷಣೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ ಸಾಧನೆ ಮೂಲಕ ಹೆಸರು ಗಳಿಸಿದ್ದಾರೆ. ಈ ಚಿತ್ರದಲ್ಲಿ ನನಗೂ ಒಂದು ಪಾತ್ರ ನೀಡಿದ್ದು ಸಂತಸ ತಂದಿದೆ. ಹಣ ಖರ್ಚು ಮಾಡಿ ಚಿತ್ರ ಮಾಡಿದರು ಹೂಡಿಕೆ ಹಣ ಮರಳಿ ಬರುವುದು ಕಷ್ಟ. ಪ್ರೇಕ್ಷಕರು ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡವರ ಜನಸಂಖ್ಯೆ ಕಡಿಮೆ ಯಾಗುತ್ತಿದ್ದು ಜನಾಂಗ ಬೆಳೆಯಲು ಒತ್ತಾಸೆ ನೀಡಬೇಕಿದೆ. ರಾಜನ್ ಎನ್ನು ವವರು ೧೯೭೨ ರಲ್ಲಿ ‘ನಾಡಮಣ್ಣ್ ನಾಡಕೊಳ್’ ಎನ್ನುವ ಕೊಡವ ಸಿನಿಮಾ ನಿರ್ಮಿಸಿದ್ದರು. ಹೀಗೆ ಅನೇಕರು ಕೊಡವ ಚಿತ್ರ ನಿರ್ಮಾಣ ಮಾಡಿದ್ದಾರೆ, ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣಕ್ಕೆ ದಾನಿಗಳು ನೆರವು ನೀಡಿದರೂ ನಮ್ಮ ಜನಾಂಗದವರು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಮಲೆ ಯಾಳಂ ಸಿನಿಮಾ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗುತ್ತದೆ ಅದು ದಾಖಲೆ ನಿರ್ಮಿಸುತ್ತದೆ. ಅದರಂತೆ ನಮ್ಮ ಕೊಡವ ಸಿನಿಮಾಗಳು ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿ ದಾಖಲೆ ಮಾಡಬೇಕು. ಸಿನಿಮಾ ನೋಡಿ ಕೊಡವ ಭಾಷಿಕರು ಪ್ರೋತ್ಸಾಹಿಸ ಬೇಕು ಎಂದು ಹೇಳಿದರು. ಈ ಸಂದರ್ಭ ಅಲ್ಲಾರಂಡ ರಂಗ ಚಾವಡಿಯ ಕಲಾವಿದ ಅಲ್ಲಾರಂಡ ವಿಠಲ್ ನಂಜಪ್ಪ, ವೀಕ್ಷಕ ವಿವರಣೆ ಗಾರ ಮಾಳೇಟಿರ ಶ್ರೀನಿವಾಸ್, ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಸಾಹಿತಿ ಹಾಗೂ ಹಿರಿಯ ಕಲಾವಿದ ಸೋಮೆಯಂಡ ಬೋಸ್ ಬೆಳ್ಯಪ್ಪ, ನಟ ಹಾಡುಗಾರ ಬಿದ್ದಂಡ ಉತ್ತಮ್ ಅವರನ್ನು ಸನ್ಮಾನಿಸಲಾಯಿತು. ಬೇತು ನಾಪೋಕ್ಲು ಕೊಡವ ಪೊಮ್ಮಕ್ಕಡ ಕೂಟ ನೃತ್ಯ ಕಾರ್ಯಕ್ರಮ ನಡೆಸಿ ಕೊಟ್ಟರು. ವೇದಿಕೆಯಲ್ಲಿ ಉದ್ಯಮಿ ಕಾಣತಂಡ ಜಗದೀಶ್, ಪಿ ಅಂಡ್ ಜಿ ಕ್ರೀಯೇಷನ್ಸ್ನ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ, ಕಲ್ಲಕೆರೆ ಮಾದೇವಿ ಚಿತ್ರ ನಿರ್ಮಾಪಕಿ ಪಟ್ಟಡ ರೀನಾ ಪ್ರಕಾಶ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ಉಪಸ್ಥಿತರಿದ್ದರು. ನಿರ್ಮಾಪಕ ಸೋಮೆಯಂಡ ಬೋಸ್ ಬೆಳ್ಳಿಯಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ಅವರ ಪಿಅಂಡ್‌ಜಿ ಕ್ರಿಯೇಷನ್ಸ್ನಲ್ಲಿ ಚಿತ್ರ ನಿರ್ಮಾಣವಾಗಿದೆ. ಸಾಹಿತಿ ಹಾಗೂ ಕಲಾವಿದ ಸೋಮೆಯಂಡ ಬೋಸ್ ಬೆಳ್ಳಿಯಪ್ಪ ನಿರ್ಮಾಪಕ ರಾಗಿದ್ದಾರೆ. ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ನಿರ್ದೇಶಿಸಿದ್ದಾರೆ. ಚಂದ್ರಶೇಖರ್ (ಪಾಪು) ಛಾಯಾ ಗ್ರಾಹಕರಾಗಿ ಕಾರ್ಯ ನಿರ್ವಹಿಸಿ ದ್ದಾರೆ. ಮುಕ್ಕಾಟಿರ ಮೌನಿ ನಾಣಯ್ಯ ಹಾಡುಗಳ ರಚನೆ ಮಾಡಿದ್ದಾರೆ.

ನಾಯಕ ನಟನಾಗಿ ಮಾಚೇಟಿರ ವಿಕಾಸ್, ನಾಯಕಿಯಾಗಿ ದೇಶ್ಮ ದೇಚಮ್ಮ ಉಳಿದಂತೆ ಚೇನಂಡ ಗಿರೀಶ್, ಮಲ್ಲಮಾಡ ಶ್ಯಾಮಲಾ, ಪಟ್ಟಡ ಧನು, ತಾತಂಡ ಪ್ರಭಾ ನಾಣಯ್ಯ, ಜಮ್ಮಡ ಪ್ರೀತ್ ಅಪ್ಪಯ್ಯ, ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ, ಮುಂಡ ಚಾಡಿರ ರನ್ನಿ ಭರತ್, ಕಾಣತಂಡ ಬೀನಾ ಜಗದೀಶ್, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಪಳೆಯಂಡ ಸುಚಿತಾ ಸುಬ್ಬಯ್ಯ, ತೀತಿರ ಕುಟ್ಟಪ್ಪ, ಜಮ್ಮಡ ಪ್ರೀತ್ ಅಪ್ಪಯ್ಯ ಬಾಲನಟನಾಗಿ ಮಾದೇಯಂಡ ಲೇರಾಯಿ ಪೂಣಚ್ಚ ಸೇರಿದಂತೆ ಇತರರು ಚಿತ್ರ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.