ಮಡಿಕೇರಿ, ಅ. ೧೫: ಕುಶಾಲನಗರ ತಾಲೂಕಿನ ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯ ಸಭೆ ಸ್ಥಳೀಯ ಪ್ರವಾಸಿ ಮಂದಿರದ ಹೊರ ಆವರಣದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷೆ ಫಿಲೋಮಿನಾ ಅವರು ಮಹಿಳಾ ಸಮಿತಿಯನ್ನು ಉದ್ದೇಶಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ಹಿತ ರಕ್ಷಣಾ ಸಮಿತಿ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ತಾಲೂಕಿನ ಎಲ್ಲಾ ಮಹಿಳೆಯರು ಹೆಚ್ಚು ಸಹಕಾರವನ್ನು ನೀಡಬೇಕೆಂದರು. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಯಿತು. ಸಮಿತಿಯ ಸದಸ್ಯರು, ನಿರ್ದೇಶಕರು ಸಲಹೆ - ಸೂಚನೆ, ಮಾರ್ಗದರ್ಶನಗಳನ್ನು ನೀಡಿದರು. ಸಮಾಜದ ಅಸಹಾಯಕರಿಗೆ ಸಹಾಯ ಹಸ್ತವನ್ನು ನೀಡಲು ಸಮಿತಿಯಲ್ಲಿ ತೀರ್ಮಾನ ಮಾಡಲಾಯಿತು.

ಮಹಿಳೆಯರು ಸ್ವ ಉದ್ಯೋಗ ಪಡೆಯುವ ತರಬೇತಿ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಲು ಸಹಾಯವಾಗುವಂತ ಕಾರ್ಯವನ್ನು ಹಮ್ಮಿಕೊಳ್ಳಬೇಕೆಂದು ಸಭೆಯಲ್ಲಿ ಫಿಲೋಮಿನಾ ಅವರು ತಿಳಿಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಯಲಕ್ಷಿö್ಮ, ಗೌರವಾಧ್ಯಕ್ಷೆ ಪದ್ಮಾವತಿ ಪರಮೇಶ್, ಕಾರ್ಯದರ್ಶಿ ಪದ್ಮಾವತಿ, ಸಹ ಕಾರ್ಯದರ್ಶಿ ಪಾರ್ವತಿ, ಗೌರವ ಸಲಹೆಗಾರರ ವನಿತಾ ಚಂದ್ರಮೋಹನ್, ಸಂಘದ ಎಲ್ಲಾ ನಿರ್ದೇಶಕರು, ಸದಸ್ಯರು ಹಾಜರಿದ್ದರು.