ಮಡಿಕೇರಿ, ಅ. ೧೫: ಉತ್ತರಕನ್ನಡ ಜಿಲ್ಲೆಯ ಸಿರಸಿ ಬಳಿಯ ಸೋಂದೆಯಲ್ಲಿ ನಡೆಯುವ ಏಳನೇ ರಾಜ್ಯಮಟ್ಟದ ಇತಿಹಾಸೋತ್ಸವಕ್ಕೆ ಕೊಡಗಿನ ಪ್ರತಿನಿಧಿಯಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಭಾಗವಹಿಸಿ, ‘ರಾಜಾಡಳಿತಕ್ಕೆ ಹಿಂದಿನ ಕೊಡಗಿನ ಇತಿಹಾಸ’ ಎಂಬ ವಿಚಾರ ಮಂಡನೆ ಮಾಡಲಿದ್ದಾರೆ.

ಜಾಗೃತ ವೇದಿಕೆ ಸೋಂದಾ, ಮಿಥಿಕ್ ಸೊಸೈಟಿ ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳ ಪರಂಪರೆ ಇಲಾಖೆ ಮೈಸೂರು, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಿತಿ, ರಂಗಚರಿತ ಸೋಂದಾ ಇವರುಗಳ ಸಂಯುಕ್ತ ಸಹಯೋಗದಲ್ಲಿ, ತಾ. ೧೯ ಮತ್ತು ೨೦ ರಂದು ಸೋಂದೆಯ ಜೈನಮಠದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾದರೇAದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಖ್ಯಾತ ಇತಿಹಾಸ ತಜ್ಞರಾದ, ಡಾ. ವಸುಂದರಾ ಫಿಲಿಯೋಜ ಮೈಸೂರು ಅವರ ಅಧ್ಯಕ್ಷತೆಯಲ್ಲಿ, ಕರ್ನಾಟಕದ ಖ್ಯಾತ ಇತಿಹಾಸಕಾರ ಮತ್ತು ಸೋಂದಾ ಇತಿಹಾಸೋತ್ಸವ ಸಮಿತಿ ಸಂಚಾಲಕರಾದ ಲಕ್ಷಿö್ಮÃಶ್ ಹೆಗಡೆ ಸೋಂದಾ ಅವರ ನೇತೃತ್ವದಲ್ಲಿ ಈ ಐತಿಹಾಸಿಕ ಉತ್ಸವ ನಡೆಯಲಿದೆ.

ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು ೪೦ಕ್ಕೂ ಅಧಿಕ ಇತಿಹಾಸ ತಜ್ಞರು, ವಿದ್ವಾಂಸರು, ಸಂಶೋಧಕರು ಭಾಗವಹಿಸುವ ಈ ಉತ್ಸವದಲ್ಲಿ ಕೊಡಗನ್ನು ಚಾಮೆರ ದಿನೇಶ್ ಬೆಳ್ಯಪ್ಪ ಅವರು ಪ್ರತಿನಿಧಿಸಲಿದ್ದಾರೆ. ಇದು ಇವರ ಎರಡನೇ ಇತಿಹಾಸ ಸಮ್ಮೇಳನವಾಗಿದ್ದು, ಈ ಹಿಂದೆ ೨೦೧೯ರಲ್ಲಿ ಇಲ್ಲಿ ನಡೆದ ರಾಷ್ಟಿçÃಯ ಇತಿಹಾಸ ಸಮ್ಮೇಳನದಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ್ದರು.