ಸೋಮವಾರಪೇಟೆ, ಅ. ೧೫: ಮದ್ಯ ಮಾರಾಟ ಮಾಡಲು ಅಕ್ರಮವಾಗಿ ಸ್ಕೂಟಿಯಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭ ಪಟ್ಟಣದ ಪೊಲೀಸರು ಧಾಳಿ ನಡೆಸಿ, ಮದ್ಯವನ್ನು ವಶಪಡಿಸಿಕೊಂಡು ಅರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಸವೇಶ್ವರ ರಸ್ತೆಯ ಮಹಾದೇವಪ್ಪ ಎಂಬಾತ, ಸ್ಕೂಟಿಯಲ್ಲಿ ಮದ್ಯದ ಟೆಟ್ರಾ ಪ್ಯಾಕೇಟ್‌ನ್ನು ಮಾರಾಟಕ್ಕೆಂದು ಸಾಗಿಸುತ್ತಿದ್ದ ಸಂದರ್ಭ ಬಸವೇಶ್ವರ ರಸ್ತೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯಿಂದ ೩೨ ಟೆಟ್ರಾ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ.