ಕೊಡ್ಲಿಪೇಟೆ, ಅ. ೧೫: ಸ್ಥಳೀಯ ಹನಫಿ ಜಾಮಿಯಾ ಮಸ್ಜಿದ್‌ನ ಇತ್ತೆಹಾದುಲ್ ಮುಸ್ಲಿಮೀನ್ ಅಹ್ಲೆ ಸುನ್ನತ್ ಜಮಾಅತ್ ಅರಬಿಕ್ ಮದ್ರಸ ಸಮಿತಿ ವತಿಯಿಂದ ಜಶ್ನೆ ಈದ್-ಮಿಲಾದುನ್ನೆಬಿ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.

ಪ್ರವಾದಿಯವರ ಜನ್ಮ ಮಾಸಾಚರಣೆ ಪ್ರಯುಕ್ತ ಜಾಮೀಯಾ ಮಸ್ಜಿದ್ ಸಮೀಪದಲ್ಲಿರುವ ಲೇಔಟ್ ಮ್ಯೆದಾನದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಸುನ್ನಿ ಇಜ್ತಿಮಾ, ಅರಬಿಕ್ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿಯವರ ಪ್ರಕೀರ್ತನೆಗಳನ್ನೊಳಗೊಂಡ ಹಾಡು, ಭಾಷಣ ಮತ್ತು ನಾತ್‌ಗಳು ಸಭಿಕರ ಗಮನ ಸೆಳೆಯಿತು. ಇದರೊಂದಿಗೆ ಮುಖ್ಯ ರಸ್ತೆಯಲ್ಲಿ ಮಿಲಾದ್ ಸಂದೇಶ ರ‍್ಯಾಲಿ ನಡೆಯಿತು. ಜಶ್ನೆ ಮೀಲಾದು ನ್ನೆಭಿಯ ನೇತೃತ್ವವನ್ನ ವಹಿಸಿದ್ದ ಧಾರ್ಮಿಕ ಪಂಡಿತರಾದ ಉತ್ತರ ಪ್ರದೇಶದ ಅಲ್‌ಹಾಜ್ ಸಯ್ಯದ್ ಗುಲ್ಜಾರ್ ಇಸ್ಮಾಯಿಲ್ ಶಾ ಖಾದ್ರಿ ಅವರು ಪ್ರಾರ್ಥನೆ ನೆರೆವೇರಿಸಿ ಆಶೀರ್ವಚನ ನೀಡಿದರು. ಚಿಕ್ಕಮಗಳೂರಿನ ಹಝ್ರತ್ ಅಬ್ದುಲ್ ಘನಿ ರಝ್ವಿ ಅವರು ಪ್ರಭಾಷಣ ಮಾಡಿದರು. ಅಬ್ದುಲ್ ಮುಸ್ತಫಾ ರಝ್ವಿ ಅವರಿಂದ ನಾತ್ ಪಠಣ ನಡೆಯಿತು. ಮದ್ರಸದ ಮುಖ್ಯ ಅಧ್ಯಾಪಕ ಹಾಶೀಂ ರಝಾ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಜಾಮೀಯಾ ಮಸ್ಜಿದ್ ಧರ್ಮಗುರುಗಳಾದ ಹಝ್ರತ್ ಮಹಮ್ಮದ್ ನಾದಿರ್ ಖಾನ್ ನಹೀಮಿ, ಜಾಮೀಯಾ ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷ ಜಾಫರ್ ಸಾದಿಕ್, ಕಾರ್ಯದರ್ಶಿ ಮನ್ಸೂರ್, ಮಸ್ಜಿದುನ್ನೂರ್ ಹ್ಯಾಂಡ್‌ಪೋಸ್ಟ್ ಕಾರ್ಯದರ್ಶಿ ಮಹಮ್ಮದ್ ಹನೀಫ್, ಇತ್ತೆಹಾದುಲ್ ಮುಸ್ಲಿಮೀನ್ ಮದ್ರಸ ಸಮಿತಿ ಅಧ್ಯಕ್ಷ ಶಾಹಿದ್, ಕಾರ್ಯದರ್ಶಿ ಫೈರೋಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.