ಶ್ರೀಮಂಗಲ, ಅ. ೧೫: ಜೀವನದಲ್ಲಿ ಅತಿ ಪ್ರಮುಖ ವಿಷಯ ಆರೋಗ್ಯವಾಗಿದೆ. ಆರೋಗ್ಯ ಹದಗೆಟ್ಟರೆ ಯಾವುದೇ ಆಸ್ತಿ, ವಿದ್ಯಾಬುದ್ಧಿ, ಹಣ ಇದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗೋಣಿಕೊಪ್ಪ ಲೋಪಮುದ್ರಾ ಮೆಡಿಕಲ್ ಸೆಂಟರ್ ಮುಖ್ಯ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಪ್ರಥಮ ಬಾರಿಗೆ ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕೊಡವ ಕೌಟುಂಬಿಕ ಮಲ್ಲಮಾಡ ವಾಲಿಬಾಲ್ ಕಪ್‌ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಸಣ್ಣ ಸಣ್ಣ ಪ್ರಾಯದ ಜನರಿಗೆ ರಕ್ತದೊತ್ತಡ, ಡಯಾಬಿಟೀಸ್, ಹೃದಯ ಸಂಬAಧಿ ಸಮಸ್ಯೆಗಳು ಕಂಡುಬರುತ್ತಿವೆ. ಇದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ನಮ್ಮ ತಿನ್ನುವ ಆಹಾರ ಪದ್ಧತಿ ಇವತ್ತು ಸರಿಯಾಗಿಲ್ಲ. ಪ್ರತಿದಿನ ಒಂದಲ್ಲ ಒಂದು ರೀತಿಯ ಸಮಾರಂಭಗಳಲ್ಲಿ ಭಾಗಿಯಾಗಿ ನಾವು ತಿನ್ನುತ್ತೇವೆ. ಹಿರಿಯರು ಸಹ ಹೆಚ್ಚಾಗಿ ತಿನ್ನುತ್ತಿದ್ದರು. ಆದರೆ ಅವರು ಅಷ್ಟೇ ದೈಹಿಕ ವ್ಯಾಯಾಮ, ಇತರ ಶ್ರಮದಾಯಕ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇದೀಗ ನಮ್ಮ ಹೊಸ ಪೀಳಿಗೆ ಶಾರೀರಿಕ ವ್ಯಾಯಾಮ ಕಡಿಮೆ ಮಾಡುತ್ತಿದ್ದು, ಪ್ರತಿಯೊಂದಕ್ಕೂ ವಾಹನಗಳನ್ನು ಅವಲಂಬಿಸಿದ್ದಾರೆ. ಕಾಲ್ ಸೆಂಟರ್‌ಗಳಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಾ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಹಣ ಸಂಪಾದಿಸಿ, ಇನ್ನೊಂದು ಕಡೆ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದೇವೆ. ಟಿವಿ- ಮೊಬೈಲ್ ಆಕರ್ಷಣೆಯಿಂದ ಇಂದು ದೈಹಿಕ ವ್ಯಾಯಾಮ ಕಡಿಮೆಯಾಗಿದೆ. ಆದ್ದರಿಂದ ಇಂತಹ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಇಂತಹ ಕ್ರೀಡಾ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕೆAದು ಕರೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಗೋಣಿಕೊಪ್ಪ ಕಾವೇರಿ ಕಾಲೇಜು ಉಪನ್ಯಾಸಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರು ಮಾತನಾಡಿ, ಹರದಾಸ ಅಪ್ಪಚ್ಚ ಕವಿ ಅವರ ಕಾವ್ಯವನ್ನು ಹಾಡಿ ಸಂದೇಶವನ್ನು ನೀಡಿದರು.

ವೇದಿಕೆಯಲ್ಲಿ ಮಲ್ಲಮಾಡ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಿರಿಯಪಂಡ ಕುಟುಂಬದ ಉಮೇಶ್, ರಾಕೇಶ್, ರಾಜ ನಂಜಪ್ಪ, ಪಟ್ಟು ಸೋಮಯ್ಯ, ಕುಂಡಿಯೋಳAಡ ದಿನೇಶ್, ಟ್ರೋಫಿ ದಾನಿಗಳಾದ ಮಲ್ಲಮಾಡ ಪ್ರಕಾಶ್, ಮಾಚಿಮಾಡ ಚೆಣ್ಣಮ್ಮ, ಪೋರಿಮಂಡ ದೇವಿಕ, ಮಲ್ಲಮಾಡ ಉಷಾ ಹಾಜರಿದ್ದರು.

ಮುಂದಿನ ವರ್ಷ ಚಿರಿಯಪಂಡ ಕುಟುಂಬ ಆಯೋಜನೆ:

ಮುಂದಿನ ವರ್ಷ ಪೊನ್ನಂಪೇಟೆಯಲ್ಲಿ ಚಿರಿಯಪಂಡ ಕುಟುಂಬದಿAದ ಎರಡನೇ ವರ್ಷದ ಕೊಡವ ಕೌಟುಂಬಿಕ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ಮಲ್ಲಮಾಡ ಕುಟುಂಬದಿAದ ಚಿರಿಯಪಂಡ ಕುಟುಂಬದ ಪ್ರಮುಖರು ಧ್ವಜವನ್ನು ಸ್ವೀಕರಿಸಿದರು.