ಭಾಗಮಂಡಲ, ಅ. ೧೫ : ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕಾವೇರಿಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ದೇವಾಲಯ ದಿಂದ ಇಂದು ತಲಕಾವೇರಿಗೆ ಕೊಂಡೊಯ್ಯ ಲಾಯಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಆಡಳಿತಾಧಿ ಕಾರಿ ಚಂದ್ರಶೇಖರ್ ಅವರಿಂದ ತಕ್ಕರಾದ ಕೋಡಿ ಮೋಟಯ್ಯ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ಆಭರಣಗಳನ್ನು ಪಡೆದುಕೊಂಡರು. ಬಳಿಕ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತಲಕಾವೇರಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕೊಂಡೊಯ್ಯ ಲಾಯಿತು. ಅಲ್ಲಿ ಕಾವೇರಿಮಾತೆಗೆ ಚಿನ್ನಾಭರಣ ತೊಡಿಸಲಾಯಿತು. ಒಂದು ತಿಂಗಳ ಕಾಲ ಚಿನ್ನಾಭರಣಗಳಿಂದ ಕಾವೇರಿ ಮಾತೆ ಕಂಗೊಳಿಸುವಳು.

ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ತಲಕಾವೇರಿ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಮತ್ತಿತರರು ಇದ್ದರು. ತಾ. ೧೬ ರಂದು (ಇಂದು) ಪಿಂಡ ಪ್ರದಾನಕ್ಕೆ ಬೆಳಿಗ್ಗೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ ಐದು ಗಂಟೆ ಯಿಂದ ಪಿಂಡಪ್ರದಾನ ಆರಂಭ ಗೊಳ್ಳಲಿದೆ.-ಸುನಿಲ್ ಕುಯ್ಯಮುಡಿ