ಗೋಣಿಕೊಪ್ಪಲು, ಅ. ೧೫: ಜನವಸತಿ ಪ್ರದೇಶದಲ್ಲಿ ಥಾರ್ ಮಿಕ್ಸಿಂಗ್ ಹಾಗೂ ಕಾಂಕ್ರಿಟ್ ಮಿಕ್ಸಿಂಗ್ ಘಟಕದಿಂದ ಹೊರ ಬರುವ ದಟ್ಟವಾದ ಹೊಗೆ, ರಾತ್ರಿಯ ವೇಳೆಯಲ್ಲಿಯೂ ಶಬ್ಧ ಮಾಡುತ್ತಿರುವ ಯಂತ್ರೋ ಪಕರಣಗಳು ಅಲ್ಲದೆ ಪ್ರತಿನಿತ್ಯ ನಾಗರಿಕರು ಓಡಾಡುವ ಕಿರಿದಾದ ರಸ್ತೆಯಲ್ಲಿ ಮಿಕ್ಸಿಂಗ್ ಘಟಕಕ್ಕೆ ಬೇಕಾದ ಥಾರ್, ಜೆಲ್ಲಿ, ಮರಳು, ಇತ್ಯಾದಿ ಸಾಮಗ್ರಿಗಳನ್ನು ಹೊತ್ತು ಬರುವ ಭಾರೀ ಗಾತ್ರದ ವಾಹನಗಳಿಂದಾಗಿ ಜನರ ಓಡಾಟಕ್ಕೆ ಎದುರಾಗುತ್ತಿರುವ ತೊಂದರೆ, ಗ್ರಾಮೀಣ ರಸ್ತೆಗಳು ಹಾಳಾಗುತ್ತಿರುವುದು.

ಘಟಕದ ತ್ಯಾಜ್ಯ ವಸ್ತುಗಳನ್ನು ಸಮೀಪದ ಹೊಳೆಗೆ ಬಿಡುತ್ತಿರುವುದು ಸೇರಿದಂತೆ ಘಟಕದಿಂದ ಸುತ್ತಮುತ್ತಲಿನ ಜನತೆಗೆ ಆಗುತ್ತಿರುವ ತೊಂದರೆಗಳನ್ನು ಮುಂದಿಟ್ಟುಕೊAಡು ಕೊಡಗಿನ ಕುಂದ, ಈಚೂರು ಗ್ರಾಮಸ್ಥರು ಥಾರ್ ಮಿಕ್ಸಿಂಗ್ ಘಟಕದ ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಜಿಲ್ಲಾಧಿಕಾರಿಗಳು ಈ ಘಟಕಗಳನ್ನು ಗ್ರಾಮೀಣ ಪ್ರದೇಶದಿಂದ ಸ್ಥಳಾಂತರಗೊಳಿಸುವAತೆ ಆಗ್ರಹಿಸಿದರು.

ಗ್ರಾಮದ ಹಿರಿಯರಾದ ಚೇಮಿರ ಮೇದಪ್ಪ ಹಾಗೂ ಗುಮ್ಮಟ್ಟಿರ ಮುತ್ತಣ್ಣ ಮುಂದಾಳತ್ವದಲ್ಲಿ ಬೆಳಿಗ್ಗೆ ಘಟಕದ ಮುಂದೆ ಕುಂದ, ಈಚೂರು ಗ್ರಾಮದ ಗ್ರಾಮಸ್ಥರುಗಳಾದ ತೀತಮಾಡ ವಾಸು ಗಣಪತಿ, ಅಯ್ಯಪ್ಪ, ಕಿಶಾನ್ ಆದಿತ್ಯ, ಸುಜಿತ್ ಸೋಮಯ್ಯ, ಸಂತು ಉತ್ತಪ್ಪ, ಪೂವಣ್ಣ, ರಂಜನ್, ಶಿವಮಣಿ ಕರುಂಬಯ್ಯ, ಗುಮ್ಮಟ್ಟಿರ ಮುತ್ತಣ್ಣ, ಚೇಮೀರ ಮೇದಪ್ಪ, ಕೇಳಪಂಡ ಪ್ರಕಾಶ್, ಕಾಳೇಂಗಡ ಅಜಿತ್, ತಾತೀರ ಬೋಪಯ್ಯ, ಪಳಂಗAಡ ವಿಜಯ್‌ಕುಮಾರ್, ಗಿರೀಶ್ ಹಾಗೂ ಮತ್ತಿತರರು ಸಮಾಗಮಗೊಳ್ಳುವ ಮೂಲಕ ಘಟಕವನ್ನು ಸ್ಥಳಾಂತರಿಸಲು ಆಗ್ರಹಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಗ್ರಾಮದ ತೀತಮಾಡ ಪೂವಣ್ಣ ಮಾತನಾಡಿ; ಜನವಸತಿ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳು ಆರಂಭಗೊAಡಿವೆ. ಇದೀಗ ೬ ಘಟಕಗಳು ನಿರಂತರ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಗ್ರಾಮದ ಜನತೆಗೆ ಆರೋಗ್ಯದ ಸಮಸ್ಯೆಯೊಂದಿಗೆ ಇತರ ಸಮಸ್ಯೆಗಳು ಕಂಡು ಬಂದಿವೆ. ೬ ಘಟಕಗಳಲ್ಲಿ ಒಂದು ಘಟಕವು ಸ್ಥಗಿತಗೊಂಡಿದೆ. ಘಟಕದಿಂದಾಗುವ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ ಗ್ರಾಮ ಪಂಚಾಯಿತಿ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಆದರೆ ಇಲ್ಲಿಯ ತನಕ ಪಂಚಾಯಿತಿ ವತಿಯಿಂದ ಯಾವುದೇ ಕ್ರಮ ಆಗಿರುವುದಿಲ್ಲ ಎಂದು ಹೇಳಿದರು.

ಘಟಕದಿಂದ ನಿರಂತರ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಅಗತ್ಯ ದಾಖಲಾತಿಯೊಂದಿಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡುವ ಮೂಲಕ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ಶಾಸಕರು ಸಂಬAಧಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಘಟಕಗಳು ಕಾರ್ಯ ನಿರ್ವಹಿಸದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಆದರೆ ಇಲ್ಲಿಯ ತನಕ ಯಾವುದೇ ಕ್ರಮ ಜರುಗಿರುವುದಿಲ್ಲ. ಅನಿವಾರ್ಯವಾಗಿ ರಸ್ತೆಗಿಳಿದು ಪ್ರತಿಭಟನೆ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

೨೦೧೦ನೇ ಇಸವಿಯಿಂದಲೂ ನಿರಂತರವಾಗಿ ಜನತೆಗೆ ಕಿರುಕುಳವಾಗುತ್ತಿದೆ ಎಂದು ಹೋರಾಟಗಾರ ತೀತಮಾಡ ಅಯ್ಯಪ್ಪ ತಿಳಿಸಿದರು. ಘಟಕದಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ನಿರಂತರ ವಾಹನಗಳ ಓಡಾಟ, ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ತೆರಳಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ರೀತಿಯ ಕ್ರಮ ಆಗಿರುವುದಿಲ್ಲ. ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ನೀಡಿದ್ದೇವೆ.

೨೦೨೧ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಮ್ಮುಖದಲ್ಲಿ ಘಟಕದ ಮಾಲೀಕರನ್ನು ಕರೆದು ಸಭೆ ನಡೆಸಿ ಗ್ರಾಮಸ್ಥರು ಘಟಕ ಸ್ಥಳಾಂತರಗೊಳಿಸಲು ಎರಡೂವರೆ ವರ್ಷದ ಅವಧಿ ನೀಡಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡಗಿರಿ ಪೂವಣ್ಣ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ಪಂಚಾಯಿತಿ ವತಿಯಿಂದ ಯಾವುದೇ ಘಟಕ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರಿಗೆ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಗುಮ್ಮಟ್ಟಿರ ದರ್ಶನ್ ಭರವಸೆ ನೀಡಿದ್ದರು. ಯಾವುದೇ ಕೈಗಾರಿಕೆ ಸ್ಥಾಪನೆ ಆಗುವ ಸಂದರ್ಭ ಗ್ರಾಮಸ್ಥರ ಅವಗಾಹನೆಗೆ ತರಲಾಗುವುದೆಂದರು. ಇದೀಗ ಪಂಚಾಯಿತಿ ವತಿಯಿಂದಲೇ ನೂತನ ಕಾಂಕ್ರಿಟ್ ಘಟಕಕ್ಕೆ ಅನುಮತಿ ನೀಡಿದೆ. ಇದರಿಂದ ಗ್ರಾಮಸ್ಥರಿಗೆ ನೀಡಿದ ಭರವಸೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುಮ್ಮಟ್ಟಿರ ಮುತ್ತಣ್ಣ, ತೀತಮಾಡ ವಾಸು ಗಣಪತಿ, ಕಿಶನ್ ಆದಿತ್ಯ, ಸಂತು, ಸುಜಿತ್ ಸೋಮಯ್ಯ, ಈ ವೇಳೆ ಮಾತನಾಡಿ, ಆರಂಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದೇವೆ. ಮುಂದಿನ ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.