ಮಡಿಕೇರಿ, ಅ. ೧೫: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವ ಅದ್ದೂರಿಯಾಗಿ ನೆರವೇರಿದೆ. ಜಿಲ್ಲೆಯ ಜನ ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಮಡಿಕೇರಿಗೆ ಆಗಮಿಸಿ ದಸರಾ ವೈಭವವನ್ನು ಸವಿದು ಹಿಂತೆರಳಿದ್ದಾರೆ.

ಈ ನಡುವೆ ದಸರಾ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ತುಂಬಿಕೊAಡಿದ್ದ ಕಸವನ್ನು ಸಂಗ್ರಹಿಸಲು ನಗರಸಭೆ ಮುಂದಾದ ಸಂದರ್ಭ ಬರೋಬ್ಬರಿ ೧೯ ಟನ್‌ನಷ್ಟು ಕಸ ಸಂಗ್ರಹವಾಗಿದೆ. ನಗರಸಭೆಯ ಸುಮಾರು ೨೫ ರಿಂದ ೩೦ ಸಿಬ್ಬಂದಿ, ೨ ಟ್ರಾö್ಯಕ್ಟರ್ ಹಾಗೂ ೪ ಆಟೋ ಟಿಪ್ಪರ್‌ಗಳೊಂದಿಗೆ ಕಸ ಸಂಗ್ರಹಕ್ಕೆ ಮುಂದಾದ ನಗರಸಭೆ ನಿನ್ನೆ ದಿನ ೧೫ ಟನ್, ಇಂದು ೪ ಟನ್ ಸೇರಿದಂತೆ ಒಟ್ಟು ೧೯ ಟನ್ ಕಸವನ್ನು ವಿಲೇವಾರಿ ಮಾಡಿದೆ. ಮನೆ ಮನೆಗಳಿಂದ ಪ್ರತಿನಿತ್ಯ ಸಂಗ್ರಹಿಸುವ ಕಸವನ್ನು ಹೊರತುಪಡಿಸಿ ದಸರಾದಂದು ನಗರವ್ಯಾಪ್ತಿಯಲ್ಲಿ ಹಾಕಲಾಗಿದ್ದ ಕಸವೇ ೧೯ ಟನ್‌ನಷ್ಟು ಸಂಗ್ರಹಗೊAಡಿದೆ.