ಮಡಿಕೇರಿ, ಅ. ೧೫: ಇತ್ತೀಚೆಗೆ ಬೆಂಗಳೂರಿನಲ್ಲಿ ಈಂಒಒAI (ಫೆಡರೇಷನ್ ಆಫ್ ಮಿಕ್ಸ್÷್ಡ ಮಾರ್ಷಿಯಲ್ ಆರ್ಟ್ಸ್ ಇಂಡಿಯಾ) ನಡೆಸಿದ ರಾಷ್ಟಿçÃಯ ಮಿಕ್ಸ್÷್ಡ ಮಾರ್ಷಿಯಲ್ ಆರ್ಟ್ಸ್ (ಎಮ್.ಎಮ್.ಎ) ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಡಿಸೆಂಬರ್ ೮ ರಿಂದ ಇಂಡೋನೇಷ್ಯಾದಲ್ಲಿ ನಡೆಯಲಿರುವ ಉಂಒಒA (ಗ್ಲೋಬಲ್ ಅಸೋಸಿಯೇಶನ್ ಫಾರ್ ಮಿಕ್ಸ್÷್ಡ ಮಾರ್ಷಿಯಲ್ ಆರ್ಟ್ಸ್) ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಜಿಲ್ಲೆಯ ಆಜ್ಞ ಆಯ್ಕೆಯಾಗಿದ್ದಾಳೆ. ೯ ವರ್ಷದ ಆಜ್ಞ ಈಗಾಗಲೇ ವಿವಿಧ ಟೂರ್ನಿಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

೨೦೨೧ರಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್‌ನಲ್ಲಿ ಬೆಳ್ಳಿ, ೨೦೨೨ರಲ್ಲಿ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ, ೨೦೨೩ ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟಿçÃಯ ಕಿಕ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ, ೨೦೨೪ರಲ್ಲಿ ಮೈಸೂರಿನಲ್ಲಿ ನಡೆದ ರಾಷ್ಟçಮಟ್ಟದ ಸಬ್‌ಮಿಷನ್ ಕುಸ್ತಿಯಲ್ಲಿ ಸಹ ಚಿನ್ನದ ಪದಕವನ್ನು ಆಜ್ಞ ಗೆದ್ದಿದ್ದಾಳೆ. ಕುಶಾಲನಗರದ ಮಾರ್ಕೆಟ್ ರಸ್ತೆಯಲ್ಲಿರುವ ಅ೩ಒಒಂ (ಕೂರ್ಗ್ ಕೊಂಬ್ಯಾಟ್ ಕ್ಲಬ್)ಯಲ್ಲಿ ತರಬೇತಿ ಪಡೆಯುತ್ತಿರುವ ಆಜ್ಞ, ಕೂಡುಮಂಗಳೂರಿನ ನಿವಾಸಿಗಳಾದ, ಅ೩ಒಒಂ ನಲ್ಲಿ ತರಬೇತುದಾರರೇ ಆಗಿರುವ ಅಮಿತ್ ಹಾಗೂ ದಿವ್ಯ ದಂಪತಿಯ ಪುತ್ರಿ.