ಶನಿವಾರಸಂತೆ, ಅ. ೧೫: ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆ ತರುವ ಶಿಕ್ಷಕರು ಗೌರವಾರ್ಹರು ಎಂದು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ೧೯೮೩ ರಿಂದ ೧೯೯೫ ರ ಸಾಲಿನ ವಿದ್ಯಾರ್ಥಿಗಳ ಸ್ನೇಹಿತರ ಬಳಗದ ವತಿಯಿಂದ ನಡೆದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಸುವಿಕೆ ಬಹಳ ಸೂಕ್ಷö್ಮವಾದ ವಿಷಯ. ಗೌರವಾರ್ಹ ಶಿಕ್ಷಕರು ವಿದ್ಯೆಯ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರನ್ನಾಗಿ ರೂಪಿಸಿದ್ದಾರೆ. ಶಿಕ್ಷಕರ ಸೇವೆಗೆ, ಕಲಿಸುವಿಕೆಗೆ ಚಿರಋಣಿ ಗಳಾಗಿರಬೇಕು. ಶಿಕ್ಷಕರನ್ನು ಕರೆದು ಸನ್ಮಾನ ಮಾಡಿದರೆ ಸಾಲದು. ಅವರಿಗೆ ಗೌರವ ಕೊಡುವುದರ ಜತೆಗೆ ಅವರ ವೈಯಕ್ತಿಕ ಕೆಲಸ ಕಾರ್ಯಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸ ಬೇಕು ಎಂದರು. ಶಾಲಾಭಿವೃದ್ಧಿಗೆ ಸಂಬAಧಿಸಿದAತೆ ಮೊದಲ ಪ್ರಯತ್ನದಿಂದ ಶಾಲಾ ಮುಂಭಾಗದ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರಿಸಲಾಗಿದೆ. ಶೌಚಾಲಯ ನಿರ್ಮಾಣದ ವ್ಯವಸ್ಥೆಯಾಗಿದೆ. ಶಾಲೆಗೆ ಸಭಾಂಗಣ ನಿರ್ಮಿಸಲು ಸಹಕಾರ ನೀಡುವ ಭರವಸೆ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಮಾತನಾಡಿ, ತಂದೆ ತಾಯಿ ಯನ್ನು ಚೆನ್ನಾಗಿ ನೋಡಿಕೊಳ್ಳುವುದರ ಜತೆಗೆ ಗುರುಗಳಿಗೂ ಗೌರವ ನೀಡಬೇಕು. ಹವ್ಯಾಸ ಚೆನ್ನಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಸಹಪಾಠಿಗಳನ್ನು ಸಂಘಟಿಸಿ ಗುರು ವಂದನೆಯAತಹ ಅಧ್ಬುತ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು. ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ೧೨ ವರ್ಷಗಳ ಸಹಪಾಠಿ ಸ್ನೇಹಿತರ ಬಳಗ ರಾಜ್ಯದೆಲ್ಲೆಡೆ ಉದ್ಯೋಗದಲ್ಲಿದ್ದರೂ ಸಂಘಟಿತ ರಾಗಿ ಶನಿವಾರಸಂತೆಯಲ್ಲಿ ಪ್ರಥಮ ಬಾರಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಇತಿಹಾಸ ಸೃಷ್ಟಿಸಿದ್ದಾರೆ. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಜತೆಗೆ ಗುರುಗಳ ಸಮ್ಮಿಲನವೂ ಆಗಿದೆ. ಸರ್ಕಾರಿ ಶಾಲೆಯ ಸೇವೆ ಸ್ಮರಣೀಯವಾಗಿದ್ದು ಶಿಕ್ಷಕರು ವಸ್ತು ರೂಪದ ಸಹಕಾರವನ್ನು ಶಾಲೆಗೆ ಕೊಡಬೇಕು ಎಂದು ಕರೆ ನೀಡಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕರು, ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿಭಾಗದ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಸಾಧಕರಾದ ಡಾ.ಪುಟ್ಟರಾಜ್, ನಿವೃತ್ತ ಸೈನಿಕ ನಾಗಣ್ಣ, ಸೆಸ್ಕ್ನ ನೌಕರ ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕಿ ವಿ.ಕೆ. ರತಿ, ಶಿಕ್ಷಕಿ ಹೇಮಾವತಿ, ನಿವೃತ್ತ ಶಿಕ್ಷಕ ಎಸ್.ಪಿ. ರಾಜು, ನಿವೃತ್ತ ಉಪನ್ಯಾಸಕರಾದ ಹೆಚ್.ಕೆ. ರಾಮ ನಂಜಯ್ಯ, ಎಂ.ಆರ್. ನಿರಂಜನ್, ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿದರು. ನೃತ್ಯ ಶಿಕ್ಷಕಿಯರಾದ ಜ್ಞಾನವಿ, ಜಾನವಿ, ವಿದ್ಯಾರ್ಥಿನಿ ಮೋನಿಕಾ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್‌ಪಾಲ್, ವಿದ್ಯಾರ್ಥಿಗಳ ಸ್ನೇಹಿತರ ಬಳಗದ ಪದಾಧಿಕಾರಿಗಳು ಹಾಜರಿದ್ದರು. ಬಿ.ಎಸ್. ಪ್ರದೀಪ್ ಸ್ವಾಗತಿಸಿದರು. ವಾರ್ತಾಧಿಕಾರಿ ವಿನೋದ್ ಚಂದ್ರ ಹಾಗೂ ಶಿಕ್ಷಕಿ ರಾಣಿ ರವೀಂದ್ರ ನಿರೂಪಿಸಿದರು. ಶಿಕ್ಷಕಿ ರಜಿಯಾ ವಂದಿಸಿದರು.