ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆಯನ್ನು ಸರಿಪಡಿಸಲು, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಸಕ್ತಿ ತೋರುತ್ತಿಲ್ಲ. ಮಡಿಕೇರಿ ವಿಜಯದಶಮಿ ದಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಇದೀಗ ವಾಹನಗಳ ಪಾರ್ಕಿಂಗ್‌ನಿAದ ಮ್ಯಾನ್ಸ್ ಕಾಂಪೌAಡ್ ಕ್ರೀಡಾಂಗಣವು ಕೆಸರನಿಂದ ಹೊಂಡಮಯವಾಗಿ ಮಾರ್ಪಟ್ಟಿದೆ.

ಕ್ರೀಡಾಂಗಣದಲ್ಲಿ ವಾಹನಗಳ ಪಾರ್ಕಿಂಗ್‌ನಿAದ ಸದ್ಯಕ್ಕೆ ಯಾವುದೇ ಕ್ರೀಡಾಚಟುವಟಿಕೆಗಳನ್ನು ಆಯೋಜಿಸಲು ಕಷ್ಟಸಾಧ್ಯ. ಜಿಲ್ಲಾ ಕ್ರೀಡಾಂಗಣದಲ್ಲಿ ಕೇವಲ ೧೨ ಗಂಟೆಯ ವಾಹನ ಪಾರ್ಕಿಂಗ್‌ನಿAದಾಗಿ ಒಂದು ತಿಂಗಳಿಗೂ ಹೆಚ್ಚ ಕಾಲ ಮೈದಾನಕ್ಕೆ ಯಾರು ಕೂಡ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈದಾನದ ಉದ್ದಗಲಕ್ಕೂ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈದಾನವೂ ಸಂಪೂರ್ಣ ಕೆಸರುಮಯವಾಗಿದೆ.

ಫುಟ್ಬಾಲ್ ಆಟದ ಮೈದಾನ ಆಟಕ್ಕಿಲ್ಲ!

ಜಿಲ್ಲಾ ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಫುಟ್ಬಾಲ್ ಮೈದಾನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಳೆದ ಹಲವು ವರ್ಷಗಳಿಂದ ನಿರ್ಲಕ್ಷಿಸುತ್ತಾ ಬಂದಿದೆ. ಆದರೆ ಮಡಿಕೇರಿ ನಗರದ ಫುಟ್ಬಾಲ್ ಕ್ರೀಡಾಪಟುಗಳು ಮತ್ತು ಎಂಸಿಸಿ ಫುಟ್ಬಾಲ್ ಕ್ಲಬ್ ಸದಸ್ಯರ ಪರಿಶ್ರಮದಿಂದ ಮೈದಾನವೂ ಕೊಂಚವಾದರೂ ಆಟಕ್ಕೆ ಯೋಗ್ಯವಾಗಿದೆ.

ಆದರೆ ಇದೀಗ ದಸರಾ ಜನೋಸ್ತವದ ಕೊನೆಯ ದಿನ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಿ ಮೈದಾನ ಮತ್ತಷ್ಟು ಹದಗೆಟ್ಟಿದ್ದು, ಫುಟ್ಬಾಲ್ ಮೈದಾನವೂ ಆಟಕ್ಕೆ ಯೋಗ್ಯವಲ್ಲದ ಸ್ಥಿತಿ ಎದುರಾಗಿದೆ. ಪ್ರತೀ ದಿನ ಮಡಿಕೇರಿ ನಗರ ನಿವಾಸಿಗಳು ಮತ್ತು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಫುಟ್ಬಾಲ್ ಮೈದಾನದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಆದರೆ ಇದೀಗ ವಾಹನಗಳ ಪಾರ್ಕಿಂಗ್‌ನಿAದಾಗಿ ಮೈದಾನವು ಸಂಪೂರ್ಣ ಕೆಸರಿನಿಂದ ಕೂಡಿದ್ದು, ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದೆ.

ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗಿನ ಜಾವ ನೂರಾರು ಹಿರಿಯರು ವಾಯು ವಿಹಾರಕ್ಕೆ ಮತ್ತು ಕ್ರೀಡಾಪಟುಗಳು ಅಭ್ಯಾಸ ನಡೆಸಲು ಪ್ರತಿನಿತ್ಯ ಆಗಮಿಸುತ್ತಾರೆ. ಮೈದಾನದ ಉದ್ದಗಲಕ್ಕೂ ಕಸಗಳ ರಾಶಿ ತುಂಬಿತ್ತು. ಅದಲ್ಲದೇ ಮೈದಾನದಲ್ಲಿ ಮದ್ಯದ ಬಾಟಲಿಗಳು ರಾರಾಜಿಸುತ್ತಿತ್ತು. ಮದ್ಯ ಪಾನ ಮಾಡಿ, ಆಟದ ಮೈದಾನದಲ್ಲೇ ಬಾಟಲಿಗಳನ್ನು ಎಸೆದು ವಿಕೃತಿ ಮೆರೆದಿದ್ದಾರೆ.

ಸೋಮವಾರ ದಿನ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ನೇತೃತ್ವದಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮತ್ತು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಅವರ ಸಮ್ಮುಖದಲ್ಲಿ ಗಾಂಧಿ ಮೈದಾನ ಮತ್ತು ಜನರಲ್ ತಿಮ್ಮಯ್ಯ ಮೈದಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಏರ್ಪಡಿಸಲಾಗಿತ್ತು.