ಅಂಚೆಮನೆ ಸುಧಿ

*ಸಿದ್ದಾಪುರ, ಅ. ೧೬: ಸಿದ್ದಾಪುರ ಕಸಪುರವಾಗಿ ಮಾರ್ಪಟ್ಟಿದ್ದು, ಎಲ್ಲೆಂದರಲ್ಲಿ ತ್ಯಾಜ್ಯಗಳು ಕೊಳೆತು ನಾರುತ್ತಿವೆ.

ಅಧಿಕ ಆದಾಯ ಬರುವ ಕೊಡಗು ಜಿಲ್ಲೆಯಲ್ಲೇ ದೊಡ್ಡ ಪಂಚಾಯ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದಾಪುರ ಗ್ರಾ.ಪಂ ಕಸದ ಸಮಸ್ಯೆಯಿಂದ ಬಳಲುತ್ತಿದೆ. ಆದಾಯ ಎಷ್ಟೇ ಇದ್ದರೂ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಶುಚಿತ್ವ ಕಾಪಾಡುವಲ್ಲಿ ಪಂಚಾಯ್ತಿ ಸಂಪೂರ್ಣ ವಿಫಲಾಗಿದೆ ಎನ್ನುವುದು ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ.

ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಗ್ರಹವಾಗುವ ಕಸದ ರಾಶಿಯನ್ನು ವಿಲೇವಾರಿ ಮಾಡಲು ಮೈಸೂರಿನ ಸಂಸ್ಥೆಯೊAದಕ್ಕೆ ಗುತ್ತಿಗೆ ನೀಡಲಾಗಿದೆ. ಸಂಗ್ರಹವಾಗುವ ತ್ಯಾಜ್ಯಕ್ಕೆ ಕೆ.ಜಿ ಗೆ ರೂ.೪.೫೦ ನ್ನು ಪಂಚಾಯ್ತಿಯೇ ಸಂಸ್ಥೆಗೆ ನೀಡಬೇಕು. ಇದು ಪಂಚಾಯ್ತಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆ ಸಿದ್ದಾಪುರದಿಂದ ಕಸ ವಿಲೇವಾರಿ ಮಾಡುವುದನ್ನೇ ನಿಲ್ಲಿಸಿದ್ದು, ಕಸದ ರಾಶಿ ಸಂಪೂರ್ಣ ಸಿದ್ದಾಪುರವನ್ನು ವ್ಯಾಪಿಸಿದೆ.

ಗ್ರಾ.ಪಂ.ಗೆ ಸೇರಿದ ಮಾರುಕಟ್ಟೆ ವ್ಯಾಪ್ತಿಯ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದವರು ಅಶುಚಿತ್ವದ ವಾತಾವರಣದಿಂದ ಬೇಸತ್ತು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಪಂಚಾಯ್ತಿಗೆ ಆದಾಯ ಬರಲಿ ಎನ್ನುವ ಉದ್ದೇಶದಿಂದ ನಿರ್ಮಿಸಲಾದ ಮಳಿಗೆಗಳು ಖಾಲಿ ಬಿದ್ದಿವೆ. ಇದರ ಅಕ್ಕಪಕ್ಕದಲ್ಲೇ ತ್ಯಾಜ್ಯ ದುರ್ವಾಸನೆ ಬೀರುತ್ತಿದೆ. ಆದರೆ ಗ್ರಾ.ಪಂ ಮಾತ್ರ ನಿಶ್ಚಿಂತೆಯಿAದ ಇದೆ.

ಕೊಳೆತು ನಾರುತ್ತಿರುವ ತ್ಯಾಜ್ಯದಿಂದ ಸೊಳ್ಳೆ, ನೊಣ, ಕ್ರಿಮಿ, ಕೀಟಗಳ ಹಾವಳಿ ಮಿತಿಮೀರಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಶುಚಿತ್ವ ಹೀಗೆ ಮುಂದುವರಿದರೆ ಪರಿಸ್ಥಿತಿ ಕೈಮೀರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಸ ವಿಲೇವಾರಿಗೆ ಸೂಕ್ತ ಸ್ಥಳವಿಲ್ಲದೆ ಈ ಹಿಂದೆ ಕರಡಿಗೋಡು ಅವರೆಗುಂದ ಅರಣ್ಯ ಭಾಗದಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿತ್ತು.

(ಮೊದಲ ಪುಟದಿಂದ) ಇದರ ಪರಿಣಾಮ ಪರಿಸರ ಮಾಲಿನ್ಯವಾಗುತ್ತಿತ್ತು ಮತ್ತು ಕಾಡುಪ್ರಾಣಿಗಳು ತ್ಯಾಜ್ಯವನ್ನು ತಿಂದು ಸಾವಿಗೀಡಾಗುತ್ತಿದ್ದವು. ಇದನ್ನು ಮನಗಂಡ ಅರಣ್ಯ ಇಲಾಖೆ ಕಸ ಹಾಕುವುದಕ್ಕೆ ನಿರ್ಬಂಧ ವಿಧಿಸಿತು. ಅಂದಿನಿAದ ಇಂದಿನವರೆಗೆ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸುವಲ್ಲಿ ಪಂಚಾಯ್ತಿ ಸಂಪೂರ್ಣ ವಿಫಲವಾಯಿತು. ಇದೀಗ ಸಿದ್ದಾಪುರ ಪಂಚಾಯ್ತಿ ಮತ್ತು ರಾಜ್ಯದಲ್ಲೂ ಕಾಂಗ್ರೆಸ್ ಆಡಳಿತವಿದ್ದರೂ ಸಿದ್ದಾಪುರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.ಶಾಸಕರ ಗಮನಕ್ಕೆ ತರಲಾಗಿದೆ

ಸಿದ್ದಾಪುರವನ್ನು ಕಾಡುತ್ತಿರುವ ಕಸದ ಸಮಸ್ಯೆ ಕುರಿತು ವೀರಾಜಪೇಟೆ ಶಾಸಕರ ಗಮನಕ್ಕೆ ತರಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ತ್ಯಾಜ್ಯ ವಿಲೇವಾರಿಗೆ ಗುರುತಿಸಲಾದ ಜಾಗವನ್ನು ಅಧಿಕೃತಗೊಳಿಸಲು ಪ್ರಯತ್ನ ನಡೆಯುತ್ತಿದೆ.

-ಪ್ರೇಮ ಗೋಪಾಲ್, ಅಧ್ಯಕ್ಷರು, ಸಿದ್ದಾಪುರ ಗ್ರಾ.ಪಂ.

ಸAಪೂರ್ಣ ವಿಫಲ

ಸಿದ್ದಾಪುರದಲ್ಲಿ ಯಾವುದೇ ಆಡಳಿತ ಅಧಿಕಾರಕ್ಕೆ ಬಂದರೂ ಕಸದ ಸಮಸ್ಯೆಗೆ ಮುಕ್ತಿ ದೊರಕಿಸಲು ಸಾಧ್ಯವಾಗಿಲ್ಲ. ಶಾಶ್ವತ ಪರಿಹಾರ ಸೂಚಿಸುವಲ್ಲಿ ಗ್ರಾ.ಪಂ ಸಂಪೂರ್ಣ ವಿಫಲವಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಕೊಳೆತು ನಾರುತ್ತಿದೆ, ರೋಗ ಹರಡುವ ಭೀತಿ ಎದುರಾಗಿದೆ. ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಸಕರು ಹೆಚ್ಚು ಕಾಳಜಿ ತೋರಬೇಕು. - ಸಮ್ಮದ್, ಸಿದ್ದಾಪುರ ನಿವಾಸಿ