ವೀರಾಜಪೇಟೆ, ಅ. ೧೭: ಪವಿತ್ರ ಕಾವೇರಿ ತೀರ್ಥೋದ್ಭವ ಹಿನ್ನೆಲೆ ವೀರಾಜಪೇಟೆಯಿಂದ ತಲಕಾವೇರಿಯವರೆಗೆ ಸುಮಾರು ೫೮ ಕಿ.ಮೀ. ವರೆಗೆ ಆರು ಜನರ ತಂಡ ಪಾದಯಾತ್ರೆ ಮಾಡಿ ಕಾವೇರಿ ಮಾತೆ ದರ್ಶನ ಪಡೆದು ತೀರ್ಥೋದ್ಭವದ ಕ್ಷಣಕ್ಕೆ ಸಾಕ್ಷಿಯಾದರು.

ಕಾವೇರಿ ತೀರ್ಥೋದ್ಭವದ ಹಿನ್ನೆಲೆ ಬುಧವಾರ ಮುಂಜಾನೆ ವೀರಾಜಪೇಟೆಯಿಂದ ಪಾದಯಾತ್ರೆ ಪ್ರಾರಂಭಿಸಿ ವೀರಾಜಪೇಟೆ, ಕದನೂರು, ಕಡಂಗ, ನಾಪೋಕ್ಲು, ಬಲ್ಲಮಾವಟಿ, ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಸಂಜೆ ೬.೩೦ ಗಂಟೆಗೆ ಈ ಉತ್ಸಾಹಿ ಯುವಕ - ಯುವತಿಯರು ತಲುಪಿದ್ದರು.

ಬಳಿಕ ಗುರುವಾರ ಭಾಗಮಂಡಲದಿAದ ಹಲವು ಸಂಘಟನೆಯೊAದಿಗೆ ಕಾವೇರಿ ಭಜನೆಯ ಮೂಲಕ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವಕ್ಕೆ ಮುನ್ನ ತಲಕಾವೇರಿಗೆ ತಲುಪಿದರು. ಕಾವೇರಿಯ ಪವಿತ್ರ ತೀರ್ಥವನ್ನು ಪಡೆದು ಹಲವೆಡೆ ತೀರ್ಥ ಪ್ರಸಾದವನ್ನು ವಿತರಣೆ ಮಾಡಿದರು.

ಪಾದಯಾತ್ರೆಯಲ್ಲಿ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಮುಕ್ಕಾಟಿರ ಉತ್ತಪ್ಪ, ಮುರುವಂಡ ಸ್ಪೂರ್ತಿ ಸೀತಮ್ಮ, ನಾಪೋಕ್ಲುವಿನ ಪೊರುಕೊಂಡ ಶಾನ್ ನಾಣಯ್ಯ ಪಾಲ್ಗೊಂಡಿದ್ದರು.