ವಿಮಾನಗಳಿಗೆ ಬಾಂಬ್ ಬೆದರಿಕೆ: ಅಪ್ರಾಪ್ತ ಬಾಲಕ ವಶಕ್ಕೆ

ರಾಜನಂದಗಾAವ್, ಅ. ೧೬: ಸೋಮವಾರದಿಂದ ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗೆ ಸಂಬAಧಿಸಿದAತೆ ಮುಂಬೈ ಪೊಲೀಸರು ಛತ್ತೀಸ್‌ಗಢದ ರಾಜನಂದಗಾAವ್ ಮೂಲದ ಹದಿನೇಳು ವರ್ಷದ ಬಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹುಸಿ ಬಾಂಬ್ ಬೆದರಿಕೆಯಿಂದಾಗಿ ಶಾಲೆ ಬಿಟ್ಟ ಬಾಲಕ, ತನ್ನ ಸ್ನೇಹಿತನ ಹೆಸರಿನಲ್ಲಿದ್ದ ವಿವಾದಿತ ನಕಲಿ ಎಕ್ಸ್ ಖಾತೆ ಮೂಲಕ ಬೆದರಿಕೆ ಹಾಕಿದ್ದಾನೆ. ಮುಂಬೈ ಪೊಲೀಸರು ಬಾಲಕ ಮತ್ತು ಆತನ ತಂದೆಯನ್ನು ಬುಧವಾರ ವಿಚಾರಣೆಗೆ ಕರೆದಿದ್ದರು. ಬಾಲಕನನ್ನು ವಶಕ್ಕೆ ತೆಗೆದುಕೊಂಡು ರಿಮ್ಯಾಂಡ್ ಹೋಮ್‌ಗೆ ಕರೆದೊಯ್ಯಲಾಗಿದೆ. ಆತನ ತಂದೆಯನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು ೧೯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಇದು ಕೆಲವು ವಿಮಾನಗಳ ವಿಳಂಬಕ್ಕೆ, ಡೈವೆರ್ಟ್ಗೆ ಮತ್ತು ತುರ್ತು ಭೂಸ್ಪರ್ಶಕ್ಕೆ ಕಾರಣವಾಗಿತ್ತು. ಬುಧವಾರ ನಾಲ್ಕು ಇಂಡಿಗೋ ವಿಮಾನಗಳು, ಎರಡು ಸ್ಪೈಸ್‌ಜೆಟ್ ವಿಮಾನಗಳು ಮತ್ತು ಆಕಾಶ ಏರ್‌ನ ಒಂದು ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಹುಸಿ ಬಾಂಬ್ ಬೆದರಿಕೆಯಿಂದಾಗಿ ರಿಯಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಗಿತ್ತು.

ಶೀಘ್ರದಲ್ಲೇ ರೂ. ೭,೨೦೦ ಕೋಟಿ ವೆಚ್ಚದ ಯೋಜನೆ ಅನುಷ್ಠಾನ

ಬೆಂಗಳೂರು, ಅ. ೧೬: ಬೆಂಗಳೂರು ನಗರದ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾವೇರಿ ೬ನೇ ಹಂತದ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ. ಇಂದು ಮಳವಳ್ಳಿ ತಾಲೂಕಿನ ತೊರೆಕಡ್ನಹಳ್ಳಿ(ಟಿ.ಕೆ.ಹಳ್ಳಿ)ಯಲ್ಲಿ ಬಿಬಿಎಂಪಿ ವ್ಯಾಪ್ತಿಯ ೧೧೦ ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ ೫ನೇ ಹಂತದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಒಟ್ಟು ೭,೨೦೦ ಕೋಟಿ ರೂಪಾಯಿ ವೆಚ್ಚದ ಕಾವೇರಿ ೬ನೇ ಹಂತದ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು. ಈಗಾಗಲೇ ಬೆಂಗಳೂರು ನಗರಕ್ಕೆ ವಿವಿಧ ಹಂತಗಳಲ್ಲಿ ೨,೨೨೫ ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ೬ನೇ ಹಂತದ ಯೋಜನೆಯು ಭವಿಷ್ಯದಲ್ಲಿ ಬೆಂಗಳೂರಿನ ಎಲ್ಲಾ ನಾಗರಿಕರಿಗೆ ಸಾಕಷ್ಟು ನೀರು ಒದಗಿಸಲಿದೆ. ಈ ಯೋಜನೆಯು ೯ ಕೊಳಚೆನೀರು ಸಂಸ್ಕರಣಾ ಘಟಕಗಳನ್ನು ಹೊಂದಲಿದೆ ಎಂದು ಸಿಎಂ ತಿಳಿಸಿದರು. ಕುಡಿಯುವ ನೀರು ಪೂರೈಕೆಯ ವೆಚ್ಚ ಸುಮಾರು ೫,೨೦೦ ಕೋಟಿ ರೂಪಾಯಿ ಆಗಲಿದ್ದು, ೯ ಎಸ್‌ಟಿಪಿಗಳ ನಿರ್ಮಾಣದ ವೆಚ್ಚ ಸುಮಾರು ೨೦೦೦ ಕೋಟಿ ರೂಪಾಯಿ ಆಗಲಿದೆ. ಎಲ್ಲವನ್ನೂ ಒಟ್ಟುಗೂಡಿಸಿ ಇದು ೭೨೦೦ ಕೋಟಿ ರೂಪಾಯಿಗಳ ಯೋಜನೆಯಾಗಿದೆ ಎಂದು ಹೇಳಿದರು. ನಗರದ ಮೂಲೆ ಮೂಲೆಗೂ ಸಮರ್ಪಕ ನೀರು ಪೂರೈಸುವ ಮೂಲಕ ಬೆಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ರೂ. ೫೨ ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದರು. ೭೭೫ ಎಂಎಲ್‌ಡಿ ಸಾಮರ್ಥ್ಯದ ೫ನೇ ಹಂತದ ಯೋಜನೆಯನ್ನು ಕಾರ್ಯ ಗತಗೊಳಿಸಿದ್ದಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಶ್ಲಾಘಿಸಿದರು. ಲಕ್ಷಾಂತರ ಜನ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು. ಬೆಂಗಳೂರಿನ ಅಭಿವೃದ್ದಿಗೆ ಬಿಜೆಪಿ ಮತ್ತು ಜೆಡಿಎಸ್ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ ಸಿಎಂ, ೨೦೦೭ರಲ್ಲಿ ೧೧೦ ಗ್ರಾಮಗಳು ಮತ್ತು ೭ ನಗರ ಪಾಲಿಕೆಗಳನ್ನು ಬಿಬಿಎಂಪಿಯೊAದಿಗೆ ವಿಲೀನ ಗೊಳಿಸಿದಾಗ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದರು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. ೨೦೧೩ರಿಂದ ೨೦೧೮ರ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಐದನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈಗ ನಾನೇ ಉದ್ಘಾಟನೆ ಮಾಡಿದ್ದೇನೆ ಎಂದರು.

ನಕಲಿ ಮದ್ಯ ಸೇವಿಸಿ ಏಳು ಜನ ಸಾವು

ಪಾಟ್ನಾ, ಅ. ೧೬: ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದ ಶಂಕಿತ ನಕಲಿ ಮದ್ಯ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಇಬ್ಬರು ಅಸ್ವಸ್ಥರಾಗಿದ್ದಾರೆ. ಒಂದು ದಿನದ ಹಿಂದೆ, ನೆರೆಯ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಒಬ್ಬರು ಸಾವನ್ನಪ್ಪಿದರು ಮತ್ತು ಇನ್ನೊಬ್ಬರು ಅಸ್ವಸ್ಥರಾಗಿದ್ದರು. ಮಂಗಳವಾರ ತಡರಾತ್ರಿ ಸಿವಾನ್ ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಧಾರ್ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೃತರು ಅಂಗಡಿಯೊAದರಲ್ಲಿ ಜಮಾಯಿಸಿ ಸಂಜೆ ತಡವಾಗಿ ಮದ್ಯ ಸೇವಿಸಿದರು. ಮನೆಗೆ ತಲುಪಿದ ನಂತರ ದೃಷ್ಟಿ ದೋಷ, ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ವೇಳೆ ಆರು ಮಂದಿ ಮೃತಪಟ್ಟರೆ, ಏಳನೇ ವ್ಯಕ್ತಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು. ಅರವಿಂದ್ ಸಿಂಗ್ (೪೦), ರಾಮೇಂದ್ರ ಸಿಂಗ್ (೩೦), ಸಂತೋಷ್ ಮಹ್ತೋ (೩೫), ಮುನ್ನಾ (೩೨) ಮತ್ತು ಬ್ರಿಜ್ ಮೋಹನ್ ಸಿಂಗ್ (೩೮) ಅವರು ಸ್ಥಳೀಯ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮಾಧಾರ್ ಗ್ರಾಮದ ನಿವಾಸಿ ಮೋಹನ್ ಶಾ (೨೮) ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡುಗೆ ರಿಲೀಫ್

ಆಂಧ್ರಪ್ರದೇಶ, ಅ. ೧೬; ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ವಾಸ್ತವವಾಗಿ, ೩೭೧ ಕೋಟಿ ರೂಪಾಯಿಗಳ ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯ (ಇಡಿ) ಅವರಿಗೆ ಕ್ಲೀನ್ ಚಿಟ್ ನೀಡಿದೆ. ನಾಯ್ಡು ಅವರನ್ನು ಕಳೆದ ವರ್ಷ ಅಂದಿನ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಆರಂಭಿಸಿದ ತನಿಖೆಯ ಮೇಲೆ ಬಂಧಿಸಲಾಯಿತು. ೨೦೨೩ರ ಅಕ್ಟೋಬರ್ ೩೧ ರಂದು ಮಧ್ಯಂತರ ಜಾಮೀನು ಪಡೆಯುವ ಮೊದಲು ೫೦ ದಿನಗಳನ್ನು ಜೈಲಿನಲ್ಲಿ ಕಳೆದರು. ಆಂಧ್ರಪ್ರದೇಶ ಸಿಐಡಿ ನಡೆಸಿದ ತನಿಖೆಯ ಪ್ರಕಾರ ಕಳೆದ ವರ್ಷ ಸೆಪ್ಟೆಂಬರ್ ೯ ರಂದು ನಾಯ್ಡು ಅವರನ್ನು ಬಂಧಿಸಲಾಯಿತು. ಕೌಶಲ್ಯಾಭಿವೃದ್ಧಿ ನಿಗಮದ ಹಗರಣಕ್ಕೆ ಸಂಬAಧಿಸಿದAತೆ ಟಿಡಿಪಿ ಮುಖ್ಯಸ್ಥರ ಅರ್ಜಿಯು ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇರುವುದರಿಂದ ಅಕ್ಟೋಬರ್ ೧೮ ರವರೆಗೆ ಫೈಬರ್ ನೆಟ್ ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥರನ್ನು ಬಂಧಿಸುವುದಿಲ್ಲ ಎಂದು ಆಂಧ್ರಪ್ರದೇಶ ಪೊಲೀಸರು ಅಕ್ಟೋಬರ್ ೧೩ ರಂದು ಸುಪ್ರೀಂಕೋರ್ಟ್ಗೆ ತಿಳಿಸಿದರು. ಕೌಶಲ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ನಾಯ್ಡು ಅವರನ್ನು ರಾಜಮಹೇಂದ್ರವರA ಜೈಲಿನಲ್ಲಿ ಇರಿಸಲಾಗಿತ್ತು. ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ ಒಳಗಾಗಲು ನಾಯ್ಡುಗೆ ಜಾಮೀನು ಅಗತ್ಯವಿದೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ವೈದ್ಯಕೀಯ ಆಧಾರದ ಮೇಲೆ ಅವರು ೨೦೨೩ರ ಅಕ್ಟೋಬರ್ ೩೧ರಂದು ಮಧ್ಯಂತರ ಪರಿಹಾರವನ್ನು ಪಡೆದರು. ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕನಿಗೆ ನವೆಂಬರ್ ೨೦ ರಂದು ಆಂಧ್ರಪ್ರದೇಶ ಹೈಕೋರ್ಟ್ ನಿಯಮಿತ ಜಾಮೀನು ನೀಡಿತು. ಒಂದು ವಾರದ ನಂತರ, ಸಾರ್ವಜನಿಕ ರ‍್ಯಾಲಿಗಳು ಮತ್ತು ಸಭೆಗಳಲ್ಲಿ ಭಾಗವಹಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿತು.

ಮುನ್ಸಿಪಲ್ ಕಟ್ಟಡ ಮೇಲೆ ಇಸ್ರೇಲ್ ವಾಯು ದಾಳಿ

ಬೈರುತ್, ಅ. ೧೬: ಲೆಬನಾನ್ ದಕ್ಷಿಣ ನಗರವಾದ ನಬಾಟಿಯೆಹ್‌ನಲ್ಲಿ ಮುನ್ಸಿಪಲ್ ಕಟ್ಟಡಗಳ ಮೇಲೆ ಬುಧವಾರ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹಿಜ್ಬುಲ್ಲಾ ಮತ್ತು ಅದರ ಮಿತ್ರ ಅಮಲ್ ಅಧಿಕಾರವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದು ಮೃತಪಟ್ಟ ವರಲ್ಲಿ ಮೇಯರ್ ಕೂಡ ಇದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಬತಿಯೆಹ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ರೀತಿಯ ಬೆಂಕಿಯ ಬಲೆಯಂತಾಗಿದೆ. ಅಲ್ಲಿ ೧೧ ಬಾರಿ ವಾಯುದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಅಲ್ಲದೆ ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಇನ್ನು ಲೆಬನಾನ್‌ನ ಪ್ರಧಾನ ಮಂತ್ರಿ, ಈ ದಾಳಿಯು ನಗರದ ಮುನ್ಸಿಪಲ್ ಕೌನ್ಸಿಲ್‌ನ ಸಭೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.