ಮಡಿಕೇರಿ, ಅ. ೧೭: ಮಾಯಮುಡಿಯ ಕೋಲು ಬಾಣೆ ಕಾವೇರಿ ಅಸೋಸಿ ಯೇಷನ್ ವತಿಯಿಂದ ವಿವಿಧ ಕ್ರೀಡಾಕೂಟ ಸಂಭ್ರಮ ದಿಂದ ನಡೆಯಿತು.

ಕೋಲುಬಾಣೆ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ ಅವರು, ಯುವಸಮೂಹ ಕ್ರೀಡೆಗೆ ಹೆಚ್ಚು ಮಹತ್ವ ನೀಡಬೇಕು. ಮೊಬೈಲ್ ಹವ್ಯಾಸದಿಂದಾಗಿ ಕ್ರೀಡೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಮಾರುಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಒಳ್ಳೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಹಿರಿಯ ಸದಸ್ಯ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಪರಸ್ಪರ ಸ್ನೇಹ, ಸೌಹಾರ್ದತೆ ಬೆಳೆಯುತ್ತದೆ ಎಂದರು.

ಕ್ರೀಡಾ ಕಾರ್ಯದರ್ಶಿ ಆಪಟ್ಟಿರ ಎಸ್. ಟಾಟು ಮೊಣಪ್ಪ, ಉಪಾಧ್ಯಕ್ಷ ನಾಮೆರ ರವಿ ದೇವಯ್ಯ, ಕಾರ್ಯದರ್ಶಿ ಎಸ್.ಎಸ್. ಸುರೇಶ್, ಕಾಳಪಂಡ ಸಿ. ನರೇಂದ್ರ, ಆಪಟ್ಟಿರ ಎ. ಬೋಪಣ್ಣ, ಎಸ್.ವಿ. ಮಂಜುನಾಥ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ವಿಜೇತರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಕಾಳಪಂಡ ಸಿ. ಸುಧೀರ್ ಬಹುಮಾನ ವಿತರಿಸಿದರು.

ಸ್ಪರ್ಧಾ ವಿಜೇತರು: ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಆಪಟ್ಟಿರ ಸಿ. ಪ್ರದೀಪ್ ಪ್ರಥಮ, ಆಪಟ್ಟಿರ ಎ. ಬೋಪಣ್ಣ ದ್ವಿತೀಯ, ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ ತೃತೀಯ ಬಹುಮಾನ ಪಡೆದುಕೊಂಡರು.

ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಸುಬನ್ ಸುಬ್ಬಯ್ಯ ಚೆಪ್ಪುಡಿರ ಪ್ರಥಮ, ದರ್ಶನ್ ಬೆಳ್ಯಪ್ಪ ಚೆಪ್ಪುಡಿರ ದ್ವಿತೀಯ, ಕೇರಂ ಸ್ಪರ್ಧೆಯಲ್ಲಿ ಚೆಪ್ಪುಡಿರ ಎನ್. ಅಪ್ಪಣ್ಣ ಪ್ರಥಮ, ಆಪಟ್ಟಿರ ಎ. ಬೋಪಣ್ಣ ದ್ವಿತೀಯ ಬಹುಮಾನ ಗೆದ್ದುಕೊಂಡರು.

ಸೀಕ್ರೆಟ್-೭ ಸ್ಪರ್ಧೆಯಲ್ಲಿ ಬಲ್ಯಂಡ ಎಸ್. ಪ್ರತಾಪ್ ಪ್ರಥಮ, ಕಾಳಪಂಡ ಟಿ. ಬಿದ್ದಪ್ಪ ದ್ವಿತೀಯ, ಎಸ್.ಜಿ. ಮರಿಸ್ವಾಮಿ ತೃತೀಯ, ಕ್ಲಬ್ ಕ್ರೀಡಾಕೂಟದಲ್ಲಿ ಪುಳ್ಳಂಗಡ ಜೆ. ಸತೀಶ್ ಪ್ರಥಮ, ಕಾಳಪಂಡ ಕೆ. ಮೊಣ್ಣಪ್ಪ ದ್ವಿತೀಯ, ಕಾಳಪಂಡ ಟಿ. ಬಿದ್ದಪ್ಪ ತೃತೀಯ ಬಹುಮಾನ ಗಳಿಸಿದರು.