ತಲಕಾವೇರಿ, ಅ. ೧೭: ಬ್ರಹ್ಮಗಿರಿ ತಪ್ಪಲಿನಲ್ಲಿ ಪ್ರಕೃತಿಯ ಐಸಿರಿಯ ನಡುವೆ ಶುಕ್ರವಾರ ಬೆಳಿಗ್ಗೆ ಚುಮುಚುಮು ಇಣುಕುತ್ತಿದ್ದ ಸೂರ್ಯಕಿರಣಗಳ ಸೊಬಗು..ಒಂದಷ್ಟು ಮಂಜು, ತಂಪಾಗಿ ಬೀಸುತ್ತಿದ್ದ ಗಾಳಿ..ಚಳಿ ಚಳಿ ಎನಿಸುತ್ತಿದ್ದರೂ ಇದನ್ನು ಮೀರಿಸುವ ರೀತಿಯ ದೈವಿಕ ಭಾವನೆಯ ಉನ್ಮಾದ ಅಲ್ಲಿ ಕಂಡುಬರುತಿತ್ತು.

ಪ್ರಾಕೃತಿಕ ತಪ್ಪಲಿನ ನಡುವೆ ಇರುವ ನಾಡಿನ ಜೀವನದಿ ಕಾವೇರಿ ಉದ್ಭವಿಸಿರುವ ಐತಿಹ್ಯವಿರುವ ಬ್ರಹ್ಮ ಕುಂಡಿಕೆ. ಕುಂಡಿಕೆಯ ಎದುರಿನ ಕಲ್ಯಾಣಿ ಇದರ ಸುತ್ತಮುತ್ತಲೆಲ್ಲ ಮಹಿಳೆಯರಿಂದ ತಳಿಯತಕ್ಕಿ ಬೊಳಕ್‌ನ ಸ್ವಾಗತ, ಪುರುಷರಿಂದ ದುಡಿಕೊಟ್ಟ್ಪಾಟ್‌ನ ನಿನಾದ.. ಇದರೊಂದಿಗೆ ಎಲ್ಲೆಡೆ ಭಕ್ತರಿಂದ ಮೊಳಗುತ್ತಿದ್ದ ಜೈ ಜೈ ಮಾತಾ, ಕಾವೇರಿ ಮಾತಾ, ಉಕ್ಕಿ ಬಾ.. ಒಲ್‌ಂಜಿ ಬಾ.. ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ, ಕಾವೇರಿ ಬಾಳೋ.. ಕನ್ನಿ ಬಾಳೋ.. ಎಂಬಿತ್ಯಾದಿ ಜಯಘೋಷಗಳ ನಡುವೆ ಶ್ರೀಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಆವೀರ್ಭವಿಸುವ ಮೂಲಕ ನಾಡಿನ ಜನತೆಯನ್ನು ಆಶೀರ್ವದಿಸಿದಳು.

ತುಲಾ ಸಂಕ್ರಮಣದ ಪುಣ್ಯ ವೇಳೆಯಲ್ಲಿ ನಿಗದಿತ ಮುಹೂರ್ತಕ್ಕೆ ಒಂದು ನಿಮಿಷ ತಡವಾಗಿ ಬೆಳಿಗ್ಗೆ ೭.೪೧ರ ಶುಭ ಘಳಿಗೆಯಲ್ಲಿ ಈ ಬಾರಿ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ಘಟಿಸಿತು.

ಜಿಲ್ಲೆಯ ಭಕ್ತರು, ಪರ ಜಿಲ್ಲೆ, ರಾಜ್ಯಗಳ ಭಕ್ತರು ತಮ್ಮ ಆರಾಧ್ಯದೈವ ಕಾವೇರಿಯನ್ನು ಭಕ್ತಿಭಾವದಿಂದ ಬರಮಾಡಿಕೊಂಡರೆ,

ವಿಶೇಷವಾಗಿ ಕಾವೇರಿಯನ್ನು ಕುಲದೇವಿಯಾಗಿ ಆರಾಧಿಸುವ ಕೊಡವ ಜನಾಂಗದವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಸ್ವಾಗತಿಸಿ, ತೀರ್ಥ ರೂಪದಲ್ಲಿ ದೈವಿಕ ಭಾವನೆಯೊಂದಿಗೆ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು.

ಪ್ರಸಕ್ತ ವರ್ಷ ತಾ. ೧೭ ರ ಬೆಳಿಗ್ಗೆ ೭.೪೦ಕ್ಕೆ ತುಲಾ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಸಮಯ ನಿಗದಿಯಾಗಿತ್ತು.

ಪುನೀತಗೊಂಡ ಭಕ್ತಸಮೂಹ

ಬ್ರಹ್ಮಗಿರಿ ಶಿಖರ ಸಾಲಿನ ನಡುವೆ ಇರುವ ಶ್ರೀ ಕ್ಷೇತ್ರ ತಲಕಾವೇರಿಯ ಸನ್ನಿಧಿಯಲ್ಲಿರುವ ಪವಿತ್ರ ಬ್ರಹ್ಮಕುಂಡಿಕೆಯಿAದ ಲೋಕ ಕಲ್ಯಾಣಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ದರುಶನ ನೀಡುವ ಮೂಲಕ ಭಕ್ತ ಸಮೂಹವನ್ನು ಪುನೀತಗೊಳಿಸಿದಳು.

ಬೆಳಿಗ್ಗಿನ ಜಾವವಾದರೂ, ಭಕ್ತ ಸಮೂಹದ ಉತ್ಸುಕತೆಗೆ ಯಾವುದೇ ಕೊರತೆಯಿರಲಿಲ್ಲ. ಸಂಪ್ರದಾಯದAತೆ ಈ ಬಾರಿಯೂ ಶ್ರೀಮಾತೆಯನ್ನು ಭಕ್ತಿಭಾವದಿಂದಲೇ ಬರಮಾಡಿಕೊಳ್ಳಲಾಯಿತು.

ಜೈ ಜೈ ಮಾತಾ... ಕಾವೇರಿ ಮಾತಾ... ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ... ಕಾವೇರಿ ಬಾಳೊ, ಉಕ್ಕಿ ಬಾ ಕಾವೇರಿ.. ಎಂಬಿತ್ಯಾದಿ ಘೋಷಣೆಗಳು, ಮಾತೆಯನ್ನು ಆರಾಧಿಸುವ ಭಕ್ತಿ ಭಾವವನ್ನು ತೋರುವ ಹಾಡು... ಭಜನೆಗಳು, ಪುರೋಹಿತ ತಂಡದಿAದ ನಿರಂತರವಾಗಿ ಕೇಳಿ ಬರುತ್ತಿದ್ದ ವೇದಘೋಷಗಳ ಪಠಣ ಕ್ಷೇತ್ರವನ್ನು, ಅಲ್ಲಿ ಜಮಾಯಿಸಿದ್ದ ಭಕ್ತವೃಂದವನ್ನು ಭಾವಪರವಶತೆಗೊಳಗಾಗುವಂತೆ ಮಾಡಿತ್ತು.

ತೀರ್ಥೋದ್ಭವದ ನಿಗದಿತ ಸಮಯ ೭-೪೦ ರ ತನಕವೂ ಭಕ್ತಗಣ ಕಾವೇರಮ್ಮನ ಸ್ತುತಿಸುತ್ತಾ, ಜಯಘೋಷ ಕೂಗುತ್ತ ತಾಯಿಯ ಆಗಮನ ಕಣ್ತುಂಬಿಕೊಳ್ಳಲು ಭಾವಪರವಶರಾಗಿದ್ದರು. ಪವಿತ್ರ ಕುಂಡಿಕೆಯಲ್ಲಿ ಧಾರ್ಮಿಕ ಕಾರ್ಯ ನೆರವೇರುತ್ತಿದಂತೆ ಜಯಘೋಷ ದುಪ್ಪಟ್ಟಾಗಿ ಮೊಳಗಲಾರಂಭಿಸಿತು. ಅರ್ಚಕರ ತಂಡ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕುಂಡಿಕೆಗೆ ಅರಿಶಿಣ, ಕುಂಕುಮ, ಹೂಗಳನ್ನು ಅರ್ಪಿಸಿ ಪೂಜಿಸಿತು. ಇದಕ್ಕೂ ಮುನ್ನ ಭಗಂಡೇಶ್ವರ ಸನ್ನಿಧಿಯಿಂದ ತಲಕಾವೇರಿಗೆ ಸಂಪ್ರದಾಯದAತೆ ಆಭರಣಗಳನ್ನು ತಂದು ಕಾವೇರಿ ಮಾತೆಗೆ ತೊಡಿಸಲಾಯಿತು.

ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುತ್ತಿದಂತೆ ಭಕ್ತರಲ್ಲಿ ಮಿಂಚಿನ ಸಂಚಾರದ ಅನುಭವವಾಯಿತು. ಪೊಲೀಸರ ಭದ್ರಕೋಟೆಯನ್ನು ಲೆಕ್ಕಿಸದೆ ತೀರ್ಥ ಪಡೆಯಲು ಕಲ್ಯಾಣಿಗಿಳಿದು ಪವಿತ್ರ ಕಾವೇರಿ ತೀರ್ಥವನ್ನು ತುಂಬಿಸಿಕೊAಡರು. ಅನಂತರ ಭಕ್ತಾದಿಗಳಿಗೆ ತೀರ್ಥ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.

ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಟಿ.ಎಸ್. ಗುರುರಾಜ್, ಟಿ.ಎ. ಗುರುರಾಜ್, ಟಿ. ಗುರುರಾಜ್, ಟಿ.ಎಸ್. ರವಿರಾಜ್, ವಿಠಲ್ ಆಚಾರ್, ಸುಧೀರ್ ಆಚಾರ್ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದ್ದರೆ, ಅತ್ತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯದ ಮೂಲಕ ಎಲ್ಲಾ ರೀತಿಯ ಧಾರ್ಮಿಕ ವಿಧಿ - ವಿಧಾನಗಳ ಪಾಲನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

ಭಗಂಡೇಶ್ವರ ಕ್ಷೇತ್ರ ಹಾಗೂ ತಲಕಾವೇರಿ ಸನ್ನಿಧಾನ ವಿದ್ಯುತ್ ಬೆಳಕು, ಹೂವಿನ ಅಲಂಕಾರದೊAದಿಗೆ ಕಂಗೊಳಿಸುತ್ತಿತ್ತು. ಭಾಗಮಂಡಲದಿAದ - ತಲಕಾವೇರಿ ಮಾರ್ಗದಲ್ಲಿಯೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕನ್ನಡ ನಾಡಿನ ಜೀವನದಿ, ರೈತರ ಜೀವನಾಡಿ ಕಾವೇರಿಯ ತವರು ತಲಕಾವೇರಿ ಯಲ್ಲಿ ತೀರ್ಥೋದ್ಭವಕ್ಕೂ ಮುನ್ನ ಸಂಪ್ರದಾಯದAತೆ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ದಿನನಿತ್ಯದಂತೆ ಪೂಜೆಗಳು ಎಂದಿನAತೆ ನಡೆದವು. ಮಂಜು ಮುಸುಕಿದ ವಾತಾವರಣದ ನಡುವೆ ಭಗಂಡೇಶ್ವರ ಹಾಗೂ ತಲಕಾವೇರಿ ಸನ್ನಿಧಿ ಶ್ವೇತ ಸುಂದರಿಯAತೆ ಕಂಗೊಳಿಸುತ್ತಿತ್ತು. ಸುಖ, ಶಾಂತಿ, ನೆಮ್ಮದಿ ಕರುಣಿಸಲಿ

ಕಾತುರದಿಂದ ಕಾಯುತ್ತಿದ್ದ ಪುಣ್ಯ ಕ್ಷಣ ಬಂದಿದೆ. ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ರಾಜ್ಯದಲ್ಲಿ ಒಳ್ಳೆ ಮಳೆ, ಬೆಳೆಯೊಂದಿಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ.

ಎ.ಎಸ್. ಪೊನ್ನಣ್ಣ, ವೀರಾಜಪೇಟೆ ಶಾಸಕದಿನವಿಡಿ ಅನ್ನದಾನ

ಕೊಡಗು ಏಕೀಕರಣ ರಂಗ ಸೇರಿದಂತೆ ವಿವಿಧ ಸಂಘಟನೆಗಳಿAದ ಭಾಗಮಂಡಲ-ತಲಕಾವೇರಿ ಕ್ಷೇತ್ರದಲ್ಲಿ ಅನ್ನದಾನ ನಡೆಯಿತು. ಚೆಟ್ಟಿಯಾರ್ ಬಳಗದಿಂದ ಇಂದು ತಲಕಾವೇರಿಯಲ್ಲಿ, ಗಜಾನನ ಯುವಕ ಸಂಘದಿAದ ಭಾಗಮಂಡಲದಲ್ಲಿ ಅನ್ನದಾನ ನಡೆಯಿತು. ಏಕೀಕರಣ ರಂಗ ಕಾವೇರಿ ಜಾತ್ರೆಯ ಒಂದು ತಿಂಗಳ ಕಾಲ ತಲಕಾವೇರಿಯಲ್ಲಿ ಅನ್ನದಾನ ಮುಂದುವರೆಸಲಿದೆ. ಇಂದು ಸಾವಿರಾರು ಮಂದಿ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಭೋಜನ ಸವಿದರು.ರಾಜ್ಯ ಸಮೃದ್ಧವಾಗಿರಲಿ

ಕಾವೇರಿ ಆಶೀರ್ವಾದಿಂದ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕಾವೇರಿ ಕೊಳ್ಳದ ಜನರು ಆನಂದಿAದ ಇದ್ದಾರೆ. ಸದಾ ಕಾಲ ರಾಜ್ಯ ಸಮೃದ್ಧವಾಗಿರಲಿ ಎಂದು ರಾಜ್ಯ ಸರಕಾರದ ಪರವಾಗಿ ಪ್ರಾರ್ಥಿಸಿದ್ದೇನೆ. ಕಾವೇರಿ ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಕ್ಕೂ ನೀರುಣಿಸುವ ಮಹಾತಾಯಿಯಾಗಿದ್ದು, ತೀರ್ಥೋದ್ಭವ ಮೂಲಕ ದರ್ಶನ ನೀಡಿ ಭಕ್ತರನ್ನು ಪುನೀತಗೊಳಿಸಿದ್ದಾಳೆ. ಇದೊಂದು ಪುಣ್ಯಕಾಲವಾಗಿದೆ. ರಾಜ್ಯದಲ್ಲಿ ಒಳ್ಳೆ ಮಳೆ-ಬೆಳೆಯೊಂದಿಗೆ ಸುಭಿಕ್ಷೆಯಾಗಿರಲಿ.

- ಎನ್.ಎಸ್. ಭೋಸರಾಜು,

ಜಿಲ್ಲಾ ಉಸ್ತುವಾರಿ ಸಚಿವಸುಖ, ಶಾಂತಿ, ನೆಮ್ಮದಿ ಕರುಣಿಸಲಿ

ಕಾತುರದಿಂದ ಕಾಯುತ್ತಿದ್ದ ಪುಣ್ಯ ಕ್ಷಣ ಬಂದಿದೆ. ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ರಾಜ್ಯದಲ್ಲಿ ಒಳ್ಳೆ ಮಳೆ, ಬೆಳೆಯೊಂದಿಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ.

ಎ.ಎಸ್. ಪೊನ್ನಣ್ಣ, ವೀರಾಜಪೇಟೆ ಶಾಸಕ

ಗಣ್ಯರ ಉಪಸ್ಥಿತಿ

ಕಾವೇರಿ ತೀರ್ಥೋದ್ಭವ ಸಂದರ್ಭ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ತಲಕಾವೇರಿ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ ತಕ್ಕಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ - ಶ್ರೀ ಭಗಂಡೇಶ್ವರ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್, ಮಡಿಕೇರಿ ತಹಶೀಲ್ದಾರ್ ಪ್ರವೀಣ್, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಸೇರಿದಂತೆ ಅನೇಕ ಗಣ್ಯರು ಈ ಶುಭ ಘಳಿಗೆಯಲ್ಲಿ ಭಾಗಿಯಾಗಿದ್ದರು.ಕಾವೇರಿ ಕಾಣುವ ತವಕ

ಕಾವೇರಿಯನ್ನು ಕಣ್ತುಂಬಿಕೊಳ್ಳಲು ಭಕ್ತಗಣ ಕಾತುರದಿಂದ ಕಾಯುತಿತ್ತು. ಜಯಘೋಷಗಳನ್ನು ಹಾಕುತ್ತ ನಮಸ್ಕರಿಸುತ್ತ ಭಾವಪರವಶರಾಗಿದ್ದರು. ಕಾವೇರಿ ಕುಂಡಿಕೆಯಿAದ ಉಕ್ಕುತ್ತಿದಂತೆ ಅರ್ಚಕರು ಭಕ್ತರತ್ತ ತೀರ್ಥ ಎರಚಿದರು. ಪವಿತ್ರ ತೀರ್ಥ ದೇಹಸ್ಪರ್ಶಿಸುತ್ತಿದಂತೆ ಭಕ್ತಸಮೂಹ ಭಾವಪರವಶತೆಗೆ ಒಳಗಾಯಿತು. ನಂತರ ಬಿಂದಿಗೆ, ಪಾತ್ರೆಗಳನ್ನು ಹಿಡಿದು ಕಲ್ಯಾಣಿಗೆ ಇಳಿದು ಕುಂಡಿಕೆ ಬಳಿ ತೆರಳಿ ತೀರ್ಥವನ್ನು ಸಂಗ್ರಹಿಸಿದರು.

(ಮೊದಲ ಪುಟದಿಂದ) ಭಾಗಮಂಡಲದಲ್ಲಿ ವಾಹನ ನಿಲುಗಡೆ ಮಾಡಿ ಅಲ್ಲಿಂದ ಉಚಿತವಾಗಿ ಬಸ್‌ನಲ್ಲಿ ಬರಲು ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಸಂಘಟನೆಗಳು ತೀರ್ಥ ಕೊಂಡೊಯ್ಯಲು ಬಂದಿದ್ದವು. ಇಲ್ಲಿಂದ ಕೊಂಡೊಯ್ದ ತೀರ್ಥವನ್ನು ಆಯಾ ಊರುಗಳಲ್ಲಿ ಸಮಿತಿಯವರು ಹಂಚಿದರು.

ಕೇಶ ಮುಂಡನ - ಪಿಂಡ ಪ್ರದಾನ

ಭಾಗಮಂಡಲದಲ್ಲಿ ನಂದಾದೀಪಕ್ಕೆ ಅಕ್ಕಿಹಾಕಿ ಜನರು ಪ್ರಾರ್ಥಿಸಿ ಪಡಿಯಕ್ಕಿಯನ್ನು ಕೊಂಡೊಯ್ದರು. ತ್ರಿವೇಣಿ ಸಂಗಮದಲ್ಲಿ ಮುಳುಗಿ ಭಕ್ತರು ಪುನೀತರಾದರು. ಭಕ್ತರು ಬೆಳಿಗ್ಗಿನಿಂದಲೇ ಆಗಮಿಸಿ ಇಹಲೋಕ ತ್ಯಜಿಸಿದವರಿಗೆ ಕೇಶಮುಂಡನ, ಪಿಂಡಪ್ರದಾನ ಮಾಡಿ ಸ್ಮರಿಸಿಕೊಂಡರು.

ಭಾಗಮಂಡಲದಲ್ಲಿ ಜಾತ್ರೆ ವಾತಾವರಣ ಸೃಷ್ಟಿಯಾಗಿತ್ತು. ಆಟಿಕೆ ಸೇರಿದಂತೆ ಇನ್ನಿತರ ಅಂಗಡಿಗಳು ನಿರ್ಮಾಣಗೊಂಡಿದ್ದವು. ಭಾಗಮಂಡಲದಿAದ ತಲಕಾವೇರಿ ತನಕ ೨ ಬದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ತಲಕಾವೇರಿಯಲ್ಲಿ ಬೆಳಿಗ್ಗಿನಿಂದಲೇ ಕನ್ನಡಿ ಸಿರಿ ಸ್ನೇಹ ಬಳಗದ ಗಾಯಕರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ವರದಿ: ಹೆಚ್.ಜೆ. ರಾಕೇಶ್, ಚಿತ್ರಗಳು: ಸುನೀಲ್ ಕುಯ್ಯಮುಡಿ