ಕುಶಾಲನಗರ, ಅ. ೧೭: ನೂತನ ತಂತ್ರಜ್ಞಾನದ ನೈಪುಣ್ಯತೆ ಯೊಂದಿಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಕಾಯಕವನ್ನು ಸೌಂದರ್ಯ ತಜ್ಞರು ಅಳವಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು.

ಅವರು ಕುಶಾಲನಗರದಲ್ಲಿ ತಾಲೂಕು ಸೌಂದರ್ಯ ವರ್ಧಕರ ಸಂಘದ ಉದ್ಘಾಟನಾ ಸಮಾರಂಭ ದಲ್ಲಿ ಸಂಘದ ಫಲಕ ಅನಾವರಣ ಗೊಳಿಸಿ ಮಾತನಾಡಿದರು. ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಸದಸ್ಯರುಗಳು ಸಂಘದ ಮೂಲಕ ಸಂಘಟಿತರಾಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು. ರಾಜ್ಯಮಟ್ಟದಲ್ಲಿ ಸಂಘಟನೆಯ ಮೂಲಕ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆದು ವಿಶೇಷ ಅನುದಾನ ಗಳನ್ನು ಕಲ್ಪಿಸಿಕೊಳ್ಳುವಂತಾಗಬೇಕು. ಈ ಸಂಬAಧ ತಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮಂತರ್ ಗೌಡ ಭರವಸೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಧಿಕಾರಿಗಳಿಂದ ಬ್ಯೂಟಿ ಪಾರ್ಲರ್ ಕೇಂದ್ರಗಳ ಮಾಲೀಕರುಗಳಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವ ಸಲುವಾಗಿ ತಾನು ಸಂಬAಧಿಸಿದAತೆ ಅಧಿಕಾರಿ ಗಳಿಗೆ ಸೂಚನೆ ನೀಡುವುದಾಗಿ ಹೇಳಿದರು. ಬ್ಯೂಟಿ ಪಾರ್ಲರ್ ಕೇಂದ್ರ ಗಳಿಗೆ ಸಂಬAಧಿಸಿದAತೆ ಸರಕಾರದ ಯೋಜನೆ ಮೂಲಕ ಸಹಾಯಧನ, ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸ ಲಾಗುವುದು, ವೃತ್ತಿ ಕೌಶಲ್ಯತೆಯನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದರು.

ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಪ್ರತಿಯೊಬ್ಬರೂ ಬಾಹ್ಯ ಸೌಂದರ್ಯದೊAದಿಗೆ ಆಂತರಿಕ ಸೌಂದರ್ಯಕ್ಕೆ ಕೂಡ ಒತ್ತು ನೀಡಬೇಕು.

ಇತ್ತೀಚೆಗೆ ನಡೆಯುತ್ತಿರುವ ಶೋಷಣೆ ದೌರ್ಜನ್ಯಗಳಲ್ಲಿ ಮಹಿಳೆಯರ ಪಾತ್ರ ಕೂಡ ಕಂಡು ಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆ ಗಳನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದರು.

ತಂತ್ರಜ್ಞಾನಗಳ ನಡುವೆ ಮಾನವೀಯ ಸಂಬAಧದ ಕೊರತೆ ಉಂಟಾಗುತ್ತಿದೆ. ಗ್ರಾಹಕರ ಪ್ರೀತಿ ವಿಶ್ವಾಸಗಳಿಸುವ ಮೂಲಕ ಪ್ರತಿಯೊಬ್ಬರು ಬೆಳವಣಿಗೆ ಆಗುವದರೊಂದಿಗೆ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದರು.

ಕುಶಾಲನಗರ ತಾಲೂಕು ಸೌಂದರ್ಯ ವರ್ಧಕರ ಸಂಘದ ಅಧ್ಯಕ್ಷೆ ಎನ್. ನಾಗಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರ ಅವರು ಸಂಘಟನೆಗೆ ಶುಭ ಕೋರಿದರು.

ಇದೇ ಸಂದರ್ಭ ಕುಶಾಲನಗರ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಪ್ರತಿಭಾ, ಸ್ಥಳೀಯ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೆಚ್.ಟಿ. ಗೀತಾ, ಗ್ರಾಮ ಅಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಾದ ನಾಗಮ್ಮ ಅವರನ್ನು ಸನ್ಮಾನಿಸ ಲಾಯಿತು. ಜಿಲ್ಲಾ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷೆ ರತ್ನ ಯತೀಶ್ ಮಾತನಾಡಿದರು.

ವಿವಿಧ ಆಟೋ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವಿತ್ರ ರಾಜೇಶ್, ಉಪಾಧ್ಯಕ್ಷೆ ಡೆಸಿಲಾ, ಪ್ರಧಾನ ಕಾರ್ಯದರ್ಶಿ ನವ್ಯ, ಕಾರ್ಯದರ್ಶಿ ಮಧು, ಸಹ ಕಾರ್ಯದರ್ಶಿ ಕುಶಾಲಿ, ಸಂಘಟನಾ ಕಾರ್ಯದರ್ಶಿ ತಾಜ್, ಖಜಾಂಚಿ ಲತಾ ಮತ್ತು ನಿರ್ದೇಶಕರುಗಳು ಇದ್ದರು. ನವ್ಯ ಕಾರ್ಯಕ್ರಮ ನಿರೂಪಿಸಿದರು. ಕುಶಾಲಿ ಸ್ವಾಗತಿಸಿ, ಮಧು ವಂದಿಸಿದರು.