ಮಡಿಕೇರಿ, ಅ. ೧೬: ಜಿಲ್ಲಾ ಹಾಪ್‌ಕಾಮ್ಸ್ ೪ನೇ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ನೂತನವಾಗಿ ಆರಂಭಿಸಿರುವ ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಉದ್ಘಾಟಿಸಿದರು.

ನಗರದ ಅಂಚೆಕಚೇರಿ ಎದುರಿನ ಹಾಪ್‌ಕಾಮ್ಸ್ ಕಟ್ಟಡದಲ್ಲಿ ಜಿಲ್ಲೆಯ ಸಾವಯವ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಳಿಗೆ ಆರಂಭಿಸಲಾಗಿದ್ದು, ಕೈಗೆಟಕುವ ದರದಲ್ಲಿ ಉತ್ಪನ್ನ ದೊರೆಯುವದರೊಂದಿಗೆ ಸ್ಥಳೀಯ ರೈತರಿಗೆ ಮಾರುಕಟ್ಟೆಯೂ ತೆರೆದುಕೊಂಡAತಾಗಿದೆ. ಸಾವಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ರೂಪಿಸಿರುವುದರಿಂದ ಸಾವಯವ ಬೆಳೆಗಳು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ರಮೇಶ್ ಚಂಗಪ್ಪ ಹೇಳಿದರು.

ನೋಂದಣಿಗೊAಡ ರೈತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಆಸಕ್ತರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ, ಮಡಿಕೇರಿ ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೊಟ್ಟೋಳಂಡ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿ ಬೆಳೆಯುವ ತರಕಾರಿ, ಹಣ್ಣು-ಹಂಪಲು ಸೇರಿದಂತೆ ಕೆಲವೊಂದು ಸಾವಯವ ಆಹಾರ ಉತ್ಪನ್ನಗಳನ್ನು ಪ್ರಥಮ ಹಂತದಲ್ಲಿ ಮಾರಾಟಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪ್ರತಿಕ್ರಿಯೆ ದೊರೆಯುವ ವಿಶ್ವಾಸವಿದ್ದು, ಸ್ಥಳೀಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಜಾಗೃತಿ ಮೂಡಿಸಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರನ್ನು ಪ್ರೇರೆಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಾವಯವ ಕೃಷಿಕ ಪೊನ್ನಪ್ಪ ಮಾತನಾಡಿ, ಕಳೆದ ೩ ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಹಾಪ್‌ಕಾಮ್ಸ್ ಮಾರುಕಟ್ಟೆ ಒದಗಿಸಿ ಸಹಾಯ ಮಾಡಿದೆ. ಕೃಷಿಕರು ಇದರ ಲಾಭ ಪಡೆದುಕೊಂಡು ರಾಸಾಯನಿಕ ಮುಕ್ತ ಆಹಾರ ಉತ್ಪನ್ನಗಳನ್ನು ಬೆಳೆಯುವತ್ತ ಚಿಂತನೆ ಹರಿಸಬೇಕು.

(ಮೊದಲ ಪುಟದಿಂದ) ಸಾವಯವ ಉತ್ಪನ್ನಗಳಿಗೆ ಬೇಡಿಕೆ ಇರುವುದನ್ನು ಮನಗಾಣಬೇಕೆಂದರು.

ಈ ಸಂದರ್ಭ ಹಾಪ್‌ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ನಿರ್ದೇಶಕರುಗಳಾದ ಎಸ್.ಪಿ. ಪೊನ್ನಪ್ಪ, ನಾಗೇಶ್ ಕುಂದಲ್ಪಾಡಿ, ಚೊಟ್ಟೆಯಂಡಮಾಡ ಬೇಬಿ ಪೂವಯ್ಯ, ಚೆಟ್ರಂಡ ಲೀಲಾ ಮೇದಪ್ಪ, ಕೋಣೇರಿರ ಮನೋಹರ್, ಪಾಡಿಯಮ್ಮಂಡ ಮನು ಮಹೇಶ್, ಕಾಂಗೀರ ಸತೀಶ್, ಕೆ. ಪೂವಪ್ಪ ನಾಯಕ್, ಡಿ.ಹೆಚ್. ಉಮೇಶ್ ರಾಜ್ ಅರಸ್, ಬಿ.ಎ.ಹರೀಶ್, ಮಾಚಿಮಂಡ ಸುವಿನ್ ಗಣಪತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಷ್ಮ ಗಿರೀಶ್ ಹಾಜರಿದ್ದರು.