ಭಾಗಮಂಡಲ, ಅ. ೧೭: ಕಾವೇರಿ ತೀರ್ಥೋದ್ಭವದ ಮರುದಿನವಾದ ತಾ ೧೮ ರಂದು (ಇಂದು) ನಸುಕಿನಲ್ಲಿ ಸೂರ್ಯೋದಯಕ್ಕೂ ಮುನ್ನ ಭಕ್ತರ ಮನೆ ಮನೆಗಳಲ್ಲಿ ಸಂಪ್ರದಾಯದAತೆ ಕಣಿಪೂಜೆಯೊಂದಿಗೆ ಕಾವೇರಿಯ ಆರಾಧನೆ ನಡೆಯಲಿದೆ. ಹೂವು, ಹಣ್ಣು, ತರಕಾರಿ, ತೆಂಗಿನಕಾಯಿಯ ಮೂಲಕ ಕಾವೇರಿಯ ಪ್ರತಿರೂಪವನ್ನು ಸೃಷ್ಟಿಸಿ, ಆಭರಣಗಳನ್ನು ತೊಡಿಸಿ ಕಾವೇರಿಯನ್ನು ತೀರ್ಥ ಸಹಿತವಾಗಿ ಪೂಜಿಸುವುದು, ಬೊತ್ತ್ ಪುಟ್ಟ್ ಇಡುವುದು, ಬಳಿಕ ಗುರುಕಾರೋಣರ ಸ್ಥಾನಕ್ಕೆ, ಐನ್‌ಮನೆಗಳಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆಯುವುದು ಪದ್ಧತಿಯಾಗಿದೆ.

ಇದು ಒಂದೆಡೆಯಾದರೆ, ಕಾವೇರಿಯ ಮತ್ತೊಂದು ಐತಿಹ್ಯ ಸ್ಥಳವಾದ ಬಲಮುರಿಯಲ್ಲಿ ಶುಕ್ರವಾರದಂದು (ಇಂದು) ಕಾವೇರಿ ನದಿಯಲ್ಲಿ ಪುಣ್ಯಸ್ನಾನ, ಕೇಶಮುಂಡನ, ಅಗಸ್ತೆö್ಯÃಶ್ವರ ಹಾಗೂ ಕನ್ವಾ ಮುನೀಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯದೊAದಿಗೆ ಜಾತ್ರೆ - ಅನ್ನಸಂತರ್ಪಣೆ ಜರುಗಲಿದೆ. ಇಲ್ಲಿಯೂ ಸಾವಿರಾರೂ ಭಕ್ತರು ಪಾಲ್ಗೊಂಡು ಶ್ರದ್ಧಾ - ಭಕ್ತಿಯಿಂದ ಪರಂಪರೆಯನ್ನು ಪರಿಪಾಲಿಸುತ್ತಾರೆ.