ಸೋಮವಾರಪೇಟೆ, ಅ. ೧೬: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಕ್ರಮ ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳ ಓಡಾಟದಲ್ಲಿ ಸಂಘರ್ಷ ಏರ್ಪಡದಂತೆ ವ್ಯವಸ್ಥೆ ರೂಪಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಕೊಡಗು ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ನೂತನ ಬಸ್ ಸೇವೆಗಳನ್ನು ಆರಂಭಿಸಲಾಗಿದೆ. ಇನ್ನಷ್ಟು ಮಾರ್ಗಗಳಲ್ಲಿ ನೂತನ ಬಸ್‌ಗಳಿಗೆ ಬೇಡಿಕೆಯಿದ್ದು, ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಇದರೊಂದಿಗೆ ಕಳೆದ ಅನೇಕ ದಶಕಗಳಿಂದ ಖಾಸಗಿ ಬಸ್‌ಗಳೂ ಸಹ ಜಿಲ್ಲೆಯಲ್ಲಿ ಸೇವೆಯನ್ನು ಒದಗಿಸುತ್ತಾ ಬಂದಿವೆ. ಇವುಗಳ ಓಡಾಟಕ್ಕೂ ತೊಡಕಾಗದ ರೀತಿಯಲ್ಲಿ ಮಾರ್ಗಗಳನ್ನು ಅಳವಡಿಸಲಾಗುವುದು. ಈ ವಿಚಾರದಲ್ಲಿ ಖಾಸಗಿ ಬಸ್ ಮಾಲೀಕರ ಮೇಲೆ ದ್ವೇಷ ಸಾಧಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಕ್ಷೇತ್ರಕ್ಕೆ ಒಳಪಡುವ ಕುಶಾಲನಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಶನಿವಾರಸಂತೆಯಲ್ಲಿ ಸರ್ಕಾರಿ ಬಸ್ ನಿಲ್ದಾಣ ಕಾರ್ಯಕ್ಕೆ ಕ್ಷಣಗಣನೆ ಆರಂಭಗೊAಡಿದೆ. ಈ ನಡುವೆ ಸರ್ಕಾರಿ ಬಸ್‌ಗಳಿಗೆ ಕೆ.ಎ. ೧೨ ನೋಂದಣಿ ಮಾಡಿಸುವ ಪ್ರಯತ್ನದಲ್ಲೂ ಯಶ ಕಾಣಲಾಗಿದೆ. ಜಿಲ್ಲೆಗೆ ನೂತನವಾಗಿ ೫ ಅಶ್ವಮೇಧ ಬಸ್‌ಗಳನ್ನು ಕಲ್ಪಿಸಲಾಗಿದೆ. ಎಲ್ಲಾ ಕೆಲಸಕ್ಕೂ ಸಚಿವ ರಾಮಲಿಂಗಾ ರೆಡ್ಡಿಯವರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆಯ ನುಡಿಯಾಡಿದರು.

ಸೋಮವಾರಪೇಟೆ ತಾಲೂಕಿನ ಕುಗ್ರಾಮಗಳಿಗೂ ಇದೇ ಪ್ರಥಮ ಎಂಬAತೆ ಸರ್ಕಾರಿ ಬಸ್‌ಗಳನ್ನು ಕಲ್ಪಿಸಲಾಗಿದೆ. ತಾಲೂಕಿನ ಕುಡಿಗಾಣ, ಮುಟ್ಲು, ಸೀಗೆಹೊಸೂರು ಮಾರ್ಗದಲ್ಲಿ ನೂತನವಾಗಿ ಬಸ್‌ಗಳು ಸಂಚಾರ ಆರಂಭಿಸಿವೆ. ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿ ಕರಿಗೆ ಹೆಚ್ಚು ಉಪಯೋಗವಾಗಿದೆ ಎಂದು ಅಭಿಪ್ರಾಯಿಸಿದರು. ಶಕ್ತಿ ಯೋಜನೆಯಡಿ ಅಕ್ಟೋಬರ್ ೧೪ಕ್ಕೆ ೭೫,೪೪,೬೪೬ ಮಂದಿ ಮಹಿಳೆಯರು, ಬಾಲಕಿಯರು ಉಚಿತವಾಗಿ ಪ್ರಯಾಣಿ ಸಿದ್ದಾರೆ. ಇದರಿಂದಾಗಿ ಇಲಾಖೆಗೆ ೨೯.೭೨ ಲಕ್ಷ ಆದಾಯ ಬಂದಿದೆ ಎಂದು ಮಂತರ್ ಗೌಡ ತಿಳಿಸಿದರು.

ಕುಶಾಲನಗರ ಗ್ರೀನ್ ಡಿಪೋ: ಕುಶಾಲನಗರದಲ್ಲಿ ನಿರ್ಮಾಣಗೊಳ್ಳುವ ಡಿಪೋವನ್ನು ಗ್ರೀನ್ ಡಿಪೋ

ಆಗಿ ರೂಪಿಸುವ ಚಿಂತನೆಯಿದೆ. ಕೊಡಗಿನಲ್ಲಿ ಪರಿಸರ

ಪೂರಕ ಪ್ರವಾಸೋದ್ಯಮದಂತೆ ವಾತಾವರಣ ವನ್ನು ಶುಚಿಯಾಗಿಟ್ಟು ಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಎಲೆಕ್ಟಿçಕ್ ಬಸ್‌ಗಳನ್ನು ವ್ಯವಸ್ಥೆಗೊಳಿಸುವ ಚಿಂತನೆಯಿದೆ ಎಂದು ಶಾಸಕರು ತಿಳಿಸಿದರು.

(ಮೊದಲ ಪುಟದಿಂದ)

ಬಸ್‌ಗಳಲ್ಲಿ ಡಸ್ಟ್ಬಿನ್ : ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಸರಿಯಲ್ಲ. ಪರಿಸರ ಸ್ವಚ್ಛತೆ ನಮ್ಮಿಂದಲೇ ಆಗಬೇಕು. ಈ ನಿಟ್ಟಿನಲ್ಲಿ ಮಡಿಕೇರಿ ಡಿಪೋಗೆ ಒಳಪಡುವ ಬಸ್‌ಗಳಲ್ಲಿ ಡಸ್ಟ್ ಬಿನ್ ಅಳವಡಿಸುವ ಸಂಬAಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ಎಲೆಕ್ಟಿçಕ್ ಬಸ್: ಮಡಿಕೇರಿ ಹಾಗೂ ವೀರಾಜಪೇಟೆಯಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಎಲೆಕ್ಟಿçಕ್ ಬಸ್‌ಗಳು ಸಂಚರಿಸುತ್ತಿದ್ದು, ಸೋಮವಾರಪೇಟೆಯಿಂದಲೂ ಒಂದು ಎಲೆಕ್ಟಿçಕ್ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮಂತರ್ ಭರವಸೆ ನೀಡಿದರು.

ಅವ್ಯವಸ್ಥೆ ಸರಿಪಡಿಸಲು ಸೂಚನೆ: ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶೌಚಾಲಯದ ಅವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಸಿ.ಸಿ. ಕ್ಯಾಮೆರಾ ಇಲ್ಲದಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದ ಹಿನ್ನೆಲೆ, ತಕ್ಷಣ ಈ ಬಗ್ಗೆ ಗಮನ ಹರಿಸುವಂತೆ ಸಂವಾದದಲ್ಲಿ ಉಪಸ್ಥಿತರಿದ್ದ ಸಂಚಾರ ನಿಯಂತ್ರಕ ಜಾನ್ ದಾಸ್ ಅವರಿಗೆ ಸೂಚಿಸಿದರು.

ಅಮೃತ್-೨ ಯೋಜನೆಯ ಕಾಮಗಾರಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ನೀರಿನ ಸಂಪರ್ಕ ಪಡೆಯಲು ತಕ್ಷಣ ಕ್ರಮವಹಿಸಬೇಕು. ಶೌಚಾಲಯಕ್ಕೆ ಪರ್ಯಾಯ ಗುಂಡಿಯನ್ನು ತೆಗೆಸಬೇಕು. ಪಂಚಾಯಿತಿಯಲ್ಲಿರುವ ಸಕ್ಕಿಂಗ್ ಯಂತ್ರವನ್ನು ಬಳಕೆ ಮಾಡಿಕೊಳ್ಳಬೇಕೆಂದು ನಿರ್ದೇಶಿಸಿದರು.

ಸೋಮವಾರಪೇಟೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ಬೆಳಿಗ್ಗೆ ೮ ಗಂಟೆಯ ನಂತರ ಸಂಜೆಯವರೆಗೂ ಸರ್ಕಾರಿ ಬಸ್ ಸೇವೆ ಇಲ್ಲದಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಇದರೊಂದಿಗೆ ಹಂಡ್ಲಿಯಲ್ಲಿ ಬಸ್‌ಗಳನ್ನು ನಿಲುಡೆಗೊಳಿಸದೇ ಇರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಗಡಿ ಭಾಗವಾದ ಕೊಡ್ಲಿಪೇಟೆಯಿಂದ ಸೋಮವಾರಪೇಟೆ-ಮಡಿಕೇರಿ- ವೀರಾಜಪೇಟೆಗೆ ಬಸ್ ಸೌಕರ್ಯ, ಗ್ರಾಮೀಣ ಪ್ರದೇಶಗಳಿಗೆ ಗ್ರಾಮೀಣ ಸಾರಿಗೆ ವ್ಯವಸ್ಥೆ, ರಾತ್ರಿ ವೇಳೆ ಮಡಿಕೇರಿಯಿಂದ ಸೋಮವಾರಪೇಟೆಗೆ ಬಸ್ ಸೇವೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು.

ಸರ್ಕಾರಿ ಬಸ್ ಸೇವೆಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು. ಹೋಬಳಿ ಕೇಂದ್ರಗಳಲ್ಲೂ ಬಸ್ ನಿಲ್ದಾಣ ಸ್ಥಾಪಿಸಲಾಗುವುದು. ಜನರ ಬೇಡಿಕೆಗೆ ಅನುಗುಣವಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ಜಿಲ್ಲಾ ಕೇಂದ್ರಕ್ಕೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗುವುದು ಎಂದ ಶಾಸಕರು, ಜನಸಾಮಾನ್ಯರೂ ಸಹ ಸರ್ಕಾರಿ ಬಸ್ ಸೌಲಭ್ಯಗಳನ್ನು ಉಪಯೋಗಿಸಬೇಕು ಎಂದರು. ಸಂವಾದದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ವಹಿಸಿದ್ದರು.