ಕೊಡವ ಸಾಂಸ್ಕೃತಿಕ ನಾಡೊರ್ಮೆಗೆ ಸಿದ್ಧತೆಮಡಿಕೇರಿ, ಅ. ೧೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಕಾಡು ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಶನ್ ಅಸೋಸಿ ಯೇಷನ್ ಸಹಭಾಗಿತ್ವದಲ್ಲಿ ಅರೆಕಾಡು ರಿವರಾರ್ ರೆಸಾರ್ಟ್'ನಲ್ಲಿ ನವೆಂಬರ್ ೧೪ನೇ ಗುರುವಾರ ಕೊಡವ ಸಾಂಸ್ಕೃತಿಕ ನಾಡೊರ್ಮೆಯನ್ನು ಆಯೋಜಿಸಲಾಗುವುದು. ಈ ಹಿನ್ನೆಲೆ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಅಸೋಸಿಯೇಷನ್ ಅಧ್ಯಕ್ಷರಾದ ಕುಕ್ಕೆರ ಜಯಾ ಚಿಣ್ಣಪ್ಪ ಮುಂದಾಳತ್ವದಲ್ಲಿ ನಡೆಸಲಾಯಿತು.

ನಾಡೊರ್ಮೆಗೆ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಲಾಯಿತು. ಅರೆಕಾಡು ವಿಭಾಗದ ಹಿರಿಯ ಚೇತನರು ಹಾಗೂ ಆ ಭಾಗದ ಕೀರ್ತಿವೆತ್ತವರನ್ನು ಗುರುತಿಸಿ ಸನ್ಮಾನಿಸಲು ನಿರ್ಧರಿಸಲಾಯಿತು.

ಕೊಡವ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ನಾಡೊರ್ಮೆಯಲ್ಲಿ ವಿಚಾರ ಮಂಡನೆ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯ ಕ್ರಮಗಳನ್ನು ಆಯೋಜಿಸ ಲಾಗುವುದೆಂದು ಅಧ್ಯಕ್ಷ ಮಹೇಶ್ ನಾಚಯ್ಯ ಮಾಹಿತಿಯಿತ್ತರು.

ಸಭೆಯಲ್ಲಿ ರಿಜಿಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್, ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಪುತ್ತರಿರ ಪಪ್ಪು ತಿಮ್ಮಯ್ಯ, ನಾಯಂದಿರ ಶಿವಾಜಿ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಪೊನ್ನಿರ ಗಗನ್, ಅಸೋಸಿಯೇಷನ್ ಉಪಾಧ್ಯಕ್ಷರಾದ ಬಲ್ಲಚಂಡ ವಿಠಲ್ ಕಾವೇರಪ್ಪ, ಕಾರ್ಯದರ್ಶಿ ನೆಲ್ಲಮಕ್ಕಡ ಪವನ್, ಜಂಟಿ ಕಾರ್ಯದರ್ಶಿ ಕುಕ್ಕೆರ ಅಯ್ಯಪ್ಪ, ಜಂಟಿ ಖಜಾಂಚಿ ಬಿದ್ದಂಡ ಭೀಮಯ್ಯ, ಕಾಡುಮಂಡ ಚ್ಯಾಂಡ್ಲರ್, ಪ್ರಕಾಶ್, ಕುಕ್ಕೆರ ಗಣೇಶ್, ಕುಕ್ಕೆರ ಗಣೇಶ, ನೆಲ್ಲಮಕ್ಕಡ ಆಕಾಶ್, ಕುಕ್ಕೆರ ಕುಶ, ರೆಸಾರ್ಟ್ ಮಾಲೀಕರಾದ ಮುಕ್ಕಾಟಿರ ವಿನಯ್ ಹಾಗೂ ಶಿಲ್ಪ ದಂಪತಿಗಳು ಹಾಜರಿದ್ದರು. ಅರೆಕಾಡು ಸುತ್ತಮುತ್ತಲಿನ ಕೊಡವ ಭಾಷಿಕರೆಲ್ಲ ಸೇರಿ ನಾಡೊರ್ಮೆಯನ್ನು ಯಶಸ್ವಿಯಾಗಿ ನಡೆಸುವಂತೆ ನಿರ್ಧರಿಸಲಾಯಿತು.