ಚೆಟ್ಟಳ್ಳಿ, ಅ. ೧೬ : ಕೊಡಗಿನ ಕಿತ್ತಳೆ ಹಣ್ಣು ರಾರಾಜಿಸುವ ಕಾಲವೊಂದಿತ್ತು. ಈಗ ಆ ಜಾಗದಲ್ಲೆಲ್ಲಾ ದೇಶಿ ಹಾಗೂ ವಿದೇಶಿ ಹಣ್ಣುಗಳು ಕಂಡುಬರುತ್ತಿವೆೆ. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ರಾಂಬೂಟಾನ್ ಹಾಗೂ ಮ್ಯಾಂಗೊಸ್ಟೀನ್ ಹಣ್ಣುಗಳು ಕಂಗೊಳಿಸುತ್ತಿದ್ದು, ತಾ. ೧೯ ರಂದು ರಾಂಬೂಟಾನ್ ಹಾಗೂ ಮ್ಯಾಂಗೊಸ್ಟೀನ್ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೆಳೆಗಾರರ ವಿವಿಧ ಹಣ್ಣುಗಳ ಪ್ರದರ್ಶನ ಹಾಗೂ ಕಾರ್ಯಾಗಾರ ನಡೆಯಲಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ. ರಾಜೇಂದಿರನ್ ತಿಳಿಸಿದ್ದಾರೆ.

ವಿದೇಶಿ ಹಣ್ಣಿನ ತಳಿಗಳಾದ ಲಿಚಿ, ವೆಲ್‌ವೆಟ್ ಆಪಲ್, ಸ್ಟಾರ್ ಆಪಲ್, ಡ್ರಾö್ಯಗನ್ ಫ್ರೂಟ್, ಮಲೆನ್ ಆಪಲ್, ಮ್ಯಾಂಗೊಸ್ಟಿನ್, ಸಿಟ್ರನ್, ಬಟರ್‌ಫ್ರೂಟ್ ಹಣ್ಣಿನ ವಿದೇಶಿ ತಳಿಗಳಾದ ಆಶ್ ಜೊತೆಗೆ ದೇಶಿ ತಳಿಗಳಾದ ಕಿತ್ತಳೆ, ರಾಮ್‌ಫಲ, ಸೀತಾಫಲ, ಸಪೋಟ, ಸೀಬೆ, ಮಾವು, ಕರಮಂಜಿ ಹಣ್ಣು ಹೀಗೆ ಹಣ್ಣಿನ ಜೊತೆ ವಿವಿಧ ತರಕಾರಿ, ಸೊಪ್ಪಿನ ಬೆಳೆಗಳನ್ನು ಬೆಳೆಸಲಾಗುತ್ತಿದೆ.

ವಿವಿಧ ಹಣ್ಣುಗಳು ಫಸಲಿಗೆ ಬರುವ ಸಮಯದಲ್ಲಿ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಬೆಳೆಗಾರರನ್ನು ಉತ್ತೇಜಿಸಲಾಗುತ್ತದೆ. ಈ ಬಾರಿಯೂ ಬಟರ್‌ಫೂಟ್ ಹಣ್ಣಿನ ಕ್ಷೇತ್ರೋತ್ಸವ, ಲಿಚಿ ಹಣ್ಣಿನ ಕ್ಷೇತ್ರೋತ್ಸವ ನಡೆಸಲಾಗಿದೆ. ಕೊಡಗಿನ ವಾತಾವರಣದಲ್ಲಿ ಅಕ್ಟೋಬರ್ ತಿಂಗಳಲ್ಲಿ ರಾಂಬೂಟಾನ್ ಹಾಗೂ ಮ್ಯಾಂಗೊಸ್ಟೀನ್ ಹಣ್ಣಾಗುವುದರಿಂದ ಈ ಬಾರಿಯ ರಾಂಬೂಟಾನ್ ಹಾಗೂ ಮ್ಯಾಂಗೊಸ್ಟಿನ್ ಹಣ್ಣಿನ ಕ್ಷೇತ್ರೋತ್ಸವವನ್ನು ನಡೆಸಲು ಸಿದ್ಧತೆ ನಡೆಯುತ್ತಿದೆ. ವಿವಿಧ ನುರಿತ ಕೃಷಿ ತಜ್ಞರು ಬೆಳೆಗಾರರಿಗೆ ತಳಿ ಅಭಿವೃದ್ಧಿ, ಮಾರುಕಟ್ಟೆಯ ಬೇಡಿಕೆಯ ಬಗ್ಗೆ ಮಾಹಿತಿ ನೀಡಿವುದರ ಜೊತೆಗೆ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾಯೋಗಿಕವಾಗಿಯೂ ತಿಳಿಸಲಾಗುತ್ತದೆ.

ನಮ್ಮ ದೇಶದ ಮಾರುಕಟ್ಟೆಗೆ ಇತ್ತೀಚೆಗೆ ಕಾಲಿಟ್ಟ ವಿದೇಶಿ ಹಣ್ಣೇ ಈ ರಾಂಬೂಟಾನ್. ರಾಂಬುಟ್ ಎಂದರೆ ಮಲೇಶಿಯನ್ ಭಾಷೆಯಲ್ಲಿ ರೋಮ ಎಂದರ್ಥ, ಹಣ್ಣಿನ ಸುತ್ತಲೂ ಮೆತ್ತಗಿನ ಮುಳ್ಳುಗಳಂತೆ ಇರುವುದರಿಂದ ರಾಂಬೂಟನ್ ಎಂದು ಕರೆಯಲಾಗುತ್ತಿದೆ.

ಮಲೇಶಿಯಾ, ಥೈಲ್ಯಾಂಡ್, ಇಂಡೊನೇಶಿಯಾಗಳAತಹ ಆಗ್ನೇಯ ಏಷ್ಯಾಗಳಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣಾಗಿದ್ದು, ಜಗತ್ತಿಗೆ ಬೇಕಾಗುವ ಶೇ. ೯೫ರಷ್ಟು ರಾಂಬೂಟಾನ್ ಹಣ್ಣನ್ನು ಒದಗಿಸಲಾಗುತ್ತಿದೆ. ಅದೇ ರೀತಿ ಮಾರುಕಟ್ಟೆಯಲ್ಲಿ ಬಲು ಬೇಡಿಕೆಯ ಮ್ಯಾಂಗೊಸ್ಟೀನ್ ಹಣ್ಣು ಕೂಡ ಕಾಯಿಯಾಗಿದ್ದಾಗ ಹಸಿರು ಬಣ್ಣದಲ್ಲಿದ್ದು ಹಣ್ಣಾಗುತ್ತಲೇ ಕೆನ್ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಣ್ಣನ್ನು ಒಡೆದಾದ ಬಿಳಿಯ ಚೋಳೆಯಂತೇ ಬಾಯಲ್ಲಿ ನೀರೂರಿಸುವ ಸಿಹಿಯಾದ ಹಣ್ಣಾಗಿದೆ.

ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಕೇರಳ ಈ ಹಣ್ಣಿನ ಬೆಳೆಗೆ ಉತ್ತಮ ವಾತಾವರಣವಾದರೂ ಕೊಡಗಿನ ಬೆಳೆಗಾರರು ಪ್ರಾಯೋಗಿಕವಾಗಿ ಮೂರು ನಾಲ್ಕು ಗಿಡಗಳನ್ನು ಬೆಳೆದು ನಾಲ್ಕೆöÊದು ವರ್ಷಗಳಲ್ಲಿ ಉತ್ತಮ ಫಸಲನ್ನು ಪಡೆಯುತ್ತಿದ್ದರೂ ಆದಾಯದ ಮೂಲವಾಗಿ ಬೆಳೆಸಲು ತೊಡಗಿಸಿಕೊಂಡಿಲ್ಲ. ಕಾಫಿ, ಕರಿಮೆಣಸು, ಅಡಿಕೆಯ ಜೊತೆಗೆ ಮಾರುಕಟ್ಟೆಯಲ್ಲಿ ಬಲುಬೇಡಿಕೆ ಇರುವ ಇಂತಹ ವಿದೇಶಿ ಹಣ್ಣಿನ ತಳಿಗಳ ಅಭಿವೃದ್ಧಿಯ ಜೊತೆಗೆ ಆರ್ಥಿಕ ಅಭಿವೃದ್ಧಿಗೆ ಪ್ರಯೋಜ£ Àಕಾರಿಯಾಗಲಿದೆ ಎಂಬ ಕಾರಣ ದಿಂದ ಕ್ಷೇತ್ರೋತ್ಸವ ಹಾಗೂ ಕಾರ್ಯಾಗಾರಗಳು ಪ್ರಯೋಜನ ಕಾರಿಯಾಗಲಿವೆ ಎಂದು ಕೇಂದ್ರದ ವಿಜ್ಞಾನಿ ಡಾ. ಮುರುಳೀಧರ್ ಹೇಳುತ್ತಾರೆ.

- ಪುತ್ತರಿರ ಕರುಣ್ ಕಾಳಯ್ಯ