ಭಾಗಮಂಡಲ, ಅ. ೧೬: ಪವಿತ್ರ ಕಾವೇರಿ ತೀರ್ಥೋದ್ಭವ ತಾ. ೧೭ರಂದು (ಇಂದು) ಬೆಳಿಗ್ಗೆ ಜರುಗಲಿದ್ದು, ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳಲ್ಲಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಇಂದು ಭಾಗಮಂಡಲ- ತಲಕಾವೇರಿ ಕ್ಷೇತ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ತಲಕಾವೇರಿಯಲ್ಲಿ ಒಳಗೆ ತೆರಳಲು ಹಾಗೂ ಹೊರಬರಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕುಂಡಿಕೆ ಸುತ್ತಲೂ ಹೈ ಮಾಸ್ಟ್ ಲ್ಯಾಂಪ್ ಅಳವಡಿಸಲಾಗಿದೆ. ಕಾವೇರಿ ಕುಂಡಿಕೆ ಸುತ್ತಲೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಹೂವಿನ ಅಲಂಕಾರದೊAದಿಗೆ ಜಗಮಗಿಸುತ್ತಿದೆ. ಜೊತೆಗೆ ವಿದ್ಯುತ್ ಅಲಂಕಾರದೊAದಿಗೆ ಕಂಗೊಳಿಸುತ್ತಿದೆ. ಕೊಡಗು ಏಕೀಕರಣ ರಂಗದ ವತಿಯಿಂದ ಇಂದು ಮಧ್ಯಾಹ್ನದಿಂದಲೇ ಅನ್ನದಾನ ಆರಂಭಗೊAಡಿದ್ದು ಶಾಸಕ ಪೊನ್ನಣ್ಣ ಚಾಲನೆ ನೀಡಿದರು. ಸುರಿಯುತ್ತಿರುವ ಮಳೆಯ ನಡುವೆ ಜಾತ್ರೆಯ ಯಶಸ್ಸಿಗೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದ್ದು ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಭಾಗಮಂಡಲದಿAದ ರಸ್ತೆ ಯುದ್ಧಕ್ಕೂ ಒಂದು ಬದಿಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲದಿAದ ತಲಕಾವೇರಿವರೆಗೆ ಯಾವುದೇ ಭೇದಭಾವ ಇಲ್ಲದೆ ಪಾದಯಾತ್ರೆ ನಡೆಯಲಿದೆ. ಭಾಗಮಂಡಲದಲ್ಲಿ ಭಗಂಡೇಶ್ವರ ಕ್ಷೇತ್ರ ಹೂವಿನ ಅಲಂಕಾರದೊAದಿಗೆ ಕಂಗೊಳಿಸುತ್ತಿದೆ. ವಿವಿಧ ಅಂಗಡಿ ಮಳಿಗೆಗಳು ಭಾಗಮಂಡಲದಲ್ಲಿ ತಲೆ ಎತ್ತಿವೆ. ಪಿಂಡ ಪ್ರದಾನಕ್ಕೆ ಹಾಗೂ ಕೇಶ ಮಂಡಲಕ್ಕೆ ತ್ರಿವೇಣಿ ಸಂಗಮದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲದಲ್ಲಿ ಎಂದಿನAತೆ ಅನ್ನದಾನ ನಡೆಯಲಿದೆ. ಭಾಗಮಂಡಲದಲ್ಲಿ ಪ್ರಸಾದ ಕೌಂಟರ್ ತೆರೆಯಲಾಗಿದೆ. ಭಾಗಮಂಡಲ ಮತ್ತು ತಲಕಾವೇರಿ ಚಿತ್ರವನ್ನು ಶಾಸಕರು ಇಂದು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ಜಾತ್ರೆಯ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಶಾಂತ ರೀತಿಯಲ್ಲಿ ವ್ಯವಸ್ಥಿತವಾಗಿ ಜಾತ್ರೆ ನಡೆಯಲು ಸಹಕರಿಸಬೇಕು .ಇದಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಳಗ್ಗಿನ ಜಾವ ೩:೩೦ಕ್ಕೆ ಭಾಗಮಂಡಲದಿAದ ಪಾದಯಾತ್ರೆ ನಡೆಯಲಿದ್ದು, ತಾನು ಪಾಲ್ಗೊಳ್ಳಲಿರುವುದಾಗಿ ಹೇಳಿದರು. ಯಾವುದೇ ಮತ ಭೇದವಿಲ್ಲದೆ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಭಕ್ತಾದಿಗಳಿಗೆ ಜಾತ್ರೆಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಏಕೀಕರಣ ರಂಗದ ವತಿಯಿಂದ ಅನ್ನದಾನ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಬೆಳಿಗ್ಗೆ ೭ ಗಂಟೆ ೪೦ ನಿಮಿಷಕ್ಕೆ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ

(ಮೊದಲ ಪುಟದಿಂದ) ತೀರ್ಥೋದ್ಭವ ಜಾತ್ರೆ ನಡೆಯಲಿದ್ದು, ಈ ಸಮಯದಲ್ಲಿ ದೇವಾಲಯಕ್ಕೆ ಬರುವ ಭಕ್ತಾಧಿಗಳು, ಯಾತ್ರಾರ್ಥಿಗಳು ಶ್ರೀ ಕಾವೇರಿಯ ಪವಿತ್ರ ತೀರ್ಥವನ್ನು ಶೇಖರಿಸಿಕೊಂಡು ಹೋಗಲು ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಿ ಪರಿಸರ ಮಾಲಿನ್ಯ ತಪ್ಪಿಸಬೇಕು ಎಂದರು.

ಭಾಗಮAಡಲದಲ್ಲಿ ಭಗಂಡೇಶ್ವರ, ವಿಷ್ಣು ದೇವಾಲಯ, ಸುಬ್ರಹ್ಮಣ್ಯ ಹಾಗೂ ಗಣಪತಿ ಗುಡಿಗಳನ್ನು ಹೂವಿನ ಅಲಂಕಾರದೊAದಿಗೆ ಶೃಂಗರಿಸಲಾಗಿದೆ. ಬಿರುಸಿನ ಮಳೆಯ ನಡುವೆ ಜಿಲ್ಲಾಡಳಿತದಿಂದ ಸಿದ್ಧತೆ ಮಾಡಲಾಗಿದೆ.

- ಸುನಿಲ್ ಕುಯ್ಯಮುಡಿ