ಸೋಮವಾರಪೇಟೆ, ಅ. ೧೭: ಇಲ್ಲಿನ ಮಹಿಳಾ ಸಹಕಾರ ಸಂಘವು ೭೫ ವರ್ಷಗಳನ್ನು ಪೂರೈಸಿದ್ದು, ತಾ. ೨೭ ರಂದು ಸಮಾಜದ ಆವರಣದಲ್ಲಿ ವಜ್ರಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ಸುಮಾ ಸುದೀಪ್ ತಿಳಿಸಿದ್ದಾರೆ.

ಅಂದು ಪೂರ್ವಾಹ್ನ ೧೦.೩೦ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಸದ ಯದುವೀರ್ ಒಡೆಯರ್, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮುಖ್ಯ ಅತಿಥಿಯಾಗಿ ಸಹಕಾರ ಸಂಘಗಳ ಉಪ ನಿಬಂಧಕ ವಿಜಯ್‌ಕುಮಾರ್, ಸಹಾಯಕ ನಿಬಂಧಕರಾದ ಶೈಲಜಾ ಅವರುಗಳು ಭಾಗವಹಿಸಲಿದ್ದಾರೆ.