ಕೊಡ್ಲಿಪೇಟೆ, ಅ. ೧೭: ತಲಕಾವೇರಿಯಲ್ಲಿ ಪವಿತ್ರ ತೀರ್ಥೊದ್ಭವ ಸಂದರ್ಭ ಕೊಡ್ಲಿಪೇಟೆಯ ನಂದಿಪುರ ಕೆರೆಗೆ ಪ್ರಮುಖರು ಬಾಗಿನ ಅರ್ಪಿಸಿ, ಗಂಗಾರತಿ ನೆರವೇರಿಸಿದರು.

ತಲಕಾವೇರಿಯಲ್ಲಿ ತೀರ್ಥೋದ್ಬವವಾದ ಬೆಳಿಗ್ಗೆ ೭.೪೦ ಗಂಟೆಗೆ ನಂದಿಪುರ ಕೆರೆಗೆ ಬಾಗಿನ ಅರ್ಪಿಸಲಾಯಿತು. ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ಅರ್ಚಕರಿಂದ ಮಂತ್ರಘೋಷ, ವಿವಿಧ ಮಠಾಧೀಶರ ಸಾನ್ನಿಧ್ಯದ ನಡುವೆ, ಉಚ್ಚನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರ ನೇತೃತ್ವದಲ್ಲಿ ವಿಶೇಷ ಬಾಗಿನ ಹಾಗೂ ಗಂಗಾರತಿ ನೆರವೇರಿಸಲಾಯಿತು.

ಈ ಸಂದರ್ಭ ಮಾತನಾಡಿದ ಚಂದ್ರಮೌಳಿ ಅವರು, ೪ ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಂದಿಪುರ ಕೆರೆಯನ್ನು ಅಭಿವೃದ್ಧಿ ಪಡಿಸಿ ಉದ್ಯಾನವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ತುಂಬಿರುವ ಕೆರೆಗೆ ತೀರ್ಥೋದ್ಭವ ಹಿನ್ನೆಲೆ ವಿಧ್ಯುಕ್ತವಾಗಿ ಪೂಜೆ ನೆರವೇರಿಸಲಾಗಿದೆ ಎಂದರು.

ಸ್ಥಳೀಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಪುರಾತನವಾದ ನಂದಿಪುರ ಕೆರೆಗೆ ಬಾಗಿನ ಅರ್ಪಣೆ ಕಾರ್ಯ ಮುಂದಿನ ವರ್ಷದಿಂದ ಪ್ರತಿವರ್ಷ ಆಚರಿಸಿಕೊಂಡು ಬರುವಂತಾಗಲಿ. ಚಂದ್ರಮೌಳಿ ಅವರ ಪ್ರಯತ್ನದ ಫಲವಾಗಿ ನಂದಿಪುರ ಕೆರೆ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ ಎಂದರು.

ಕೊಡಗು ವಿಶ್ವ ವಿದ್ಯಾಲಯದ ಉಪ ಕುಲಪತಿ ಅಶೋಕ್ ಆಲೂರ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಳ್ಳಲ್ಲಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ತ್ಯಾಗರಾಜ್, ಉಪಾಧ್ಯಕ್ಷೆ ಅಪ್ಸರಿ ಬೇಗಂ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದೇಶ್, ಪ್ರಮುಖರಾದ ಡಾ. ಉದಯ್‌ಕುಮಾರ್, ಕಾಂತರಾಜ್, ಶರತ್ ಶೇಖರ್, ಬಿ.ಕೆ. ಯತೀಶ್, ಕೆ.ಸಿ. ಪ್ರಸನ್ನ, ಹೆಚ್.ಸಿ. ಯತೀಶ್ ಕುಮಾರ್, ಜಿ.ಆರ್. ಸುಬ್ರಹ್ಮಣ್ಯ, ಅಬ್ದುಲ್ ರಬ್ಬ್, ವಕೀಲ ಜಗದೀಶ್, ಗಂಗಾ ವೀರಶೈವ ಮಹಿಳಾ ಸಮಿತಿ ಅಧ್ಯಕ್ಷೆ ಮಂಜುಳಾ ಸುರೇಶ್, ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘದ ಪಂಕಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಕಡೇಪೇಟೆ ಗಣಪತಿ ದೇವಸ್ಥಾನದಿಂದ ನಂದಿಪುರ ಕೆರೆಯವರೆಗೆ ಗಂಗಾ ವೀರಶೈವ ಸಮಾಜ ಹಾಗೂ ಧರ್ಮಸ್ಥಳ ಸಂಘದ ಮಹಿಳೆಯರು ಪೂರ್ಣಕುಂಭದೊAದಿಗೆ ಹಾಗೂ ವೀರಶೈವ ಸಮಾಜದ ಪ್ರಮುಖರು ನಂದಿದ್ವಜದೊAದಿಗೆ ಮೆರವಣಿಗೆ ನಡೆಸಿದರು. ಸ್ಥಳೀಯ ಮಾನವತಾ ಕಲಾ ತಂಡದ ಸದಸ್ಯರುಗಳು ಜನಪದ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.