ವೀರಾಜಪೇಟೆ, ಅ. ೧೭: ಇಲ್ಲಿನ ಸರ್ವೋದಯ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ಕೊಡಗು ದಂತ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಇತ್ತೀಚೆಗೆ ಉಚಿತ ದಂತ ತಪಾಸಣಾ ಶಿಬಿರ ನೆರವೇರಿತು. ದಂತ ವೈದ್ಯಕೀಯ ಕಾಲೇಜಿನ ಡಾ. ಜಿತೇಶ್ ಅವರು ಶಿಬಿರದ ಉದ್ಘಾಟನೆ ನೆರವೇರಿಸಿ ದಂತ ಆರೋಗ್ಯದ ಅಗತ್ಯತೆ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ಸರ್ವೋದಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವಾಣಿ ಅವರು, ವಿದ್ಯಾಸಂಸ್ಥೆಯು ಸಾವಿರಾರು ಶಿಕ್ಷಕರನ್ನು ತಯಾರು ಮಾಡಿ ಉದ್ಯೋಗ ಕಲ್ಪಿಸಲು ನೆರವಾಗಿದೆ. ಶಿಕ್ಷಣದೊಂದಿಗೆ ಮಹಾತ್ಮಾ ಗಾಂಧಿ ಜಯಂತಿ ಹಾಗೂ ಲಾಲ್‌ಬಹದ್ದೂರ್ ಶಾಸ್ತಿç ಜಯಂತಿಯನ್ನೂ ಅ.೨ ರಂದು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ದಂತದ ಆರೋಗ್ಯದ ಬಗ್ಗೆ ಎಲ್ಲರೂ ಮಾಹಿತಿ ಹೊಂದಲು ಶಿಬಿರ ಏರ್ಪಡಿಸಲಾಗಿದೆ. ಇದರ ಲಾಭ ಎಲ್ಲರೂ ಹೊಂದಿಕೊಳ್ಳಲು ಸಲಹೆ ನೀಡಿದರು.

ದಂತ ತಪಾಸಣಾ ಶಿಬಿರವು ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿ ಶಿಕ್ಷಕ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಜರುಗಿತು.