ಕಣಿವೆ, ಅ. ೧೭: ಕುಶಾಲನಗರ ತಾಲೂಕಿನ ವಾಲ್ನೂರು ಗ್ರಾಮ ದಲ್ಲಿರುವ ವಾಲ್ನೂರು-ತ್ಯಾಗತ್ತೂರು ವಿವಿಧೋದ್ದೇಶ ದವಸ ಭಂಡಾರದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎ.ವಿ. ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

೨೧೦ ಸದಸ್ಯರು ಇರುವ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ೪೧ ಲಕ್ಷ ರೂಪಾಯಿಗಳನ್ನು ಸಂಘದ ಸದಸ್ಯರಿಗೆ ಸಾಲ ನೀಡಿದ ಬಡ್ಡಿಯ ಮೊಬಲಗು ಸೇರಿದಂತೆ ವಿವಿಧ ವಹಿವಾಟುಗಳ ಮೂಲಕ ೨.೮೪ ಲಕ್ಷ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ. ೨೦ ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಶಾಂತಕುಮಾರ್ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ೯೨ ದವಸ ಭಂಡಾರಗಳಿದ್ದು ವಾಲ್ನೂರು-ತ್ಯಾಗತ್ತೂರು ದವಸ ಭಂಡಾರದ ಸಾಲ ವಸೂಲಾತಿ ಶೇ. ೧೦೦ ರಷ್ಟಿರುವ ಕಾರಣ ಸಂಘಕ್ಕೆ ‘ಎ' ದರ್ಜೆಯ ಮಾನ್ಯತೆ ದೊರಕಿದೆ.

ದವಸ ಭಂಡಾರದ ಸದಸ್ಯರಿಗೆ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಮರಣ ನಿಧಿ ಹಾಗೂ ಮರಣ ಸಹಾಯ ನಿಧಿಯನ್ನು ಜಾರಿ ಮಾಡಲಾಗಿದೆ. ಸದಸ್ಯರು ಮೃತಪಟ್ಟ ಸಂದರ್ಭ ಮರಣ ನಿಧಿಯ ಜೊತೆಗೆ ಅಂತ್ಯಕ್ರಿಯೆಗೆ ೨ ಸಾವಿರ ರೂಪಾಯಿಗಳ ಮರಣ ಸಹಾಯ ನಿಧಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಂಘದ ಉಪಾಧ್ಯಕ್ಷ ಜಿ.ಎನ್. ರಾಮಪ್ಪ, ನಿರ್ದೇಶಕರಾದ ಮನು ಮಹೇಶ್, ಎ.ಡಿ. ದರ್ಶನ್, ಎಸ್.ಸಿ. ಸುರೇಶ್, ಹೆಚ್.ಎನ್. ಕೃಷ್ಣಪ್ಪ, ಪಿ.ಪಿ. ಕಿರಣ್, ಎ.ವಿ. ಅಯ್ಯಪ್ಪ, ಹೆಚ್.ನ್. ಕೃಷ್ಣಪ್ಪ, ಹೆಚ್.ಎನ್. ಕಮಲಮ್ಮ, ರುದ್ರಮ್ಮ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಿತ್ರಾ ಇದ್ದರು. ಸದಸ್ಯೆ ಸರಸ್ವತಿ ಪ್ರಾರ್ಥಿಸಿದರು. ನಿರ್ದೇಶಕ ದರ್ಶನ್ ಸ್ವಾಗತಿಸಿದರು, ಪಿ.ಪಿ. ಕಿರಣ್ ವಂದಿಸಿದರು.