ಕರಿಕೆ, ಅ. ೧೭: ಆಯಾ ರಾಜ್ಯದ ಗಡಿ ಭಾಗಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆಯನ್ನು ಅಭಿವೃದ್ಧಿಪಡಿಸಿ ಅಂತರರಾಜ್ಯದೊAದಿಗೆ ವ್ಯಾಪಾರ ವಹಿವಾಟು ಹಾಗೂ ಸಾರಿಗೆ ಸಂಪರ್ಕ ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಸರಕಾರ ಹಾಗೂ ಆಯಾ ಜಿಲ್ಲೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳದ್ದು. ಆದರೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇರಳದ ಕಾಸರಗೋಡು, ಕಣ್ಣನೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹಾಗೂ ಜಿಲ್ಲೆಯ ಪ್ರಮುಖ ತೀರ್ಥ ಕ್ಷೇತ್ರ ತಲಕಾವೇರಿಗೆ ಸಾವಿರಾರು ಭಕ್ತರು ಆಗಮಿಸುವ ಕಾಟಕೇರಿ ಭಾಗಮಂಡಲ-ಕರಿಕೆ ಅಂತರರಾಜ್ಯ ಹೆದ್ದಾರಿ ಮಾತ್ರ ಎರಡು ವರ್ಷಗಳಿಂದ ಡಾಮರು ಕಾಣದೆ, ಚರಂಡಿ ದುರಸ್ತಿಯಾಗದೆ ಹಳ್ಳಹಿಡಿದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಕಾಟಕೇರಿ-ಭಾಗಮಂಡಲ-ಕರಿಕೆ-ಪಾಣತ್ತೂರು ಸಂಪರ್ಕ ರಸ್ತೆಯನ್ನು ಹಿಂದಿನ ಸರಕಾರ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ವಾರ್ಷಿಕವಾಗಿ ಕಾಡು ಕಡಿಯಲು ಮಾತ್ರ ಲೋಕೋಪಯೋಗಿ ಇಲಾಖೆ ಮೂಲಕ ಅನುದಾನ ಬಿಡುಗಡೆ ಮಾಡಲಾಗಿದ್ದು, ಕೇವಲ ಗುಂಡಿ ಮುಚ್ಚಿ, ಎರಡು ಮೂರು ಕಿಲೋಮೀಟರ್‌ನಷ್ಟು ಡಾಮರೀಕರಣ ಮಾಡಲಾಗಿದ್ದು, ಅಪ್ಪಂಗಳದಿAದ ಭಾಗಮಂಡಲ ಪಟ್ಟಣ ಮಾರ್ಗವಾಗಿ ಕರಿಕೆಯ ಗಡಿ ಚೆಂಬೇರಿಗೆ ೭೦ ಕಿ.ಮೀ. ದೂರವಿದ್ದು, ಅಪ್ಪಂಗಳ, ಬೆಟ್ಟಗೇರಿ, ಬಕ್ಕ, ಕಾರುಗುಂದ, ಚೇರಂಬಾಣೆ, ಕೋಪಟ್ಟಿ, ಚೆಟ್ಟಿಮಾನಿ, ಭಾಗಮಂಡಲ, ತಣ್ಣಿಮಾನಿ, ಹಕ್ಕಿಕಂಡಿ, ಬಾಚಿಮಲೆ, ಚೆತ್ತುಕಾಯ, ಎಳ್ಳುಕೊಚ್ಚಿ, ಚೆಂಬೇರಿ ಮೂಲಕ ಹಾದು ಹೋಗುವ ರಸ್ತೆಯು ಸುಮಾರು ಇಪ್ಪತ್ತು ಕಿ.ಮೀ. ನಷ್ಟು ಮಾತ್ರ ಸಂಚಾರಕ್ಕೆ ಯೋಗ್ಯವಾಗಿದ್ದು, ಉಳಿದ ಭಾಗದಲ್ಲಿ ಒಂದು ಅಡಿಯಷ್ಟು ಗುಂಡಿಯಾಗಿ ಕೆಸರು ತುಂಬಿ ವಾಹನಗಳು ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು, ಅಧಿಕಾರಿಗಳು ಭಾಗಮಂಡಲ- ಭಗಂಡೇಶ್ವರ, ತಲಕಾವೇರಿ - ದೇವಾಲಯಕ್ಕೆ ಭೇಟಿ ನೀಡುತ್ತಿದ್ದರೂ ರಸ್ತೆ ದುರಸ್ತಿಯ ಬಗ್ಗೆ ಚಕಾರ ಎತ್ತಿಲ್ಲ. ಮಾತ್ರವಲ್ಲದೆ ದಿನನಿತ್ಯ ವಿದ್ಯಾರ್ಥಿಗಳು, ಪ್ರವಾಸಿಗರು, ಸಾರ್ವಜನಿಕರು, ಕೂಲಿ ಕಾರ್ಮಿಕರು ಸೇರಿದಂತೆ ಹಲವಾರು ವಾಹನಗಳು ಪ್ರಯಾಸದಿಂದ ಸಂಚಾರ ಮಾಡುತ್ತಿದ್ದು, ಜನಪ್ರತಿನಿಧಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿಗಳಿಂದ ಕರಿಕೆ ಭಾಗದಲ್ಲಿ ಕಾಡು ಕಡಿಯಲು ಆರಂಭಿಸಿದ್ದು ಬಿಟ್ಟರೆ ಉಳಿದ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಕೂಡಲೇ ಸರಕಾರ, ಜನಪ್ರತಿನಿಧಿಗಳು, ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಅಂತರರಾಜ್ಯ ಸಂಪರ್ಕ ರಸ್ತೆಯ ಗುಂಡಿ ಮುಚ್ಚಲು ತುರ್ತು ಕ್ರಮವಹಿಸಿ ಈ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿರಿಸಿ ರಸ್ತೆ ಅಭಿವೃದ್ಧಿಯತ್ತ ಗಮನಹರಿಸಬೇಕೆಂಬುದೇ ಸಾರ್ವಜನಿಕರ ಆಗ್ರಹವಾಗಿದೆ.

- ಸುಧೀರ್ ಹೊದ್ದೆಟ್ಟಿ