ತಲಕಾವೇರಿ, ಅ. ೧೭: ಕಾವೇರಿ ಚಂಗ್ರಾAದಿಯ ಅಂಗವಾಗಿ ವಿವಿಧ ಕೊಡವ ಸಂಘಟನೆಗಳ ಸದಸ್ಯರು ಒಗ್ಗೂಡಿ ಕಾಲ್ನಡಿಗೆಯ (ಕಾವೇರಿ ನಡ್‌ಪು) ಮೂಲಕ ಕುಲದೇವಿಯ ದರ್ಶನಕ್ಕೆ ತೆರಳಿದರು. ಮುಂಜಾನೆ ೩ರ ವೇಳೆಗೆ ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಿಂದ ಆಗಮಿಸಿದ್ದ ನೂರಾರು ಮಂದಿ ಭಾಗಮಂಡಲದಲ್ಲಿ ಜಮಾವಣೆಗೊಂಡರು. ಬಳಿಕ ಸಾಂಪ್ರದಾಯಿಕ ಉಡುಗೆಯೊಂದಿಗೆ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್ ಸಹಿತವಾಗಿ ತಲಕಾವೇರಿ ಯತ್ತ ಹೆಜ್ಜೆ ಹಾಕಿದರು.

ಇದಕ್ಕೆ ಮುನ್ನ ತ್ರಿವೇಣಿ ಸಂಗಮದ ನಾಗಬನದಲ್ಲಿ ಪುರಾತನ ಪದ್ಧತಿ ಯಂತೆ ಪೂಜೆ ಸಲ್ಲಿಸಿ ಬೈವಾಡ್‌ನೊಂದಿಗೆ ದುಡಿ ಕೊಟ್ಟ್ ಪ್ರಾರಂಭಿಸ ಲಾಯಿತು. ತದನಂತರ ಎಲ್ಲಾರೂ ಸಾಮೂಹಿಕ ವಾಗಿ ಭಗಂಡೇಶ್ವರ ಸನ್ನಿಧಿಯಿಂದ ತಲಕಾವೇರಿಯತ್ತ ಭಕ್ತಿಪೂರ್ವಕ ವಾಗಿ ಸಾಗಿ

(ಮೊದಲ ಪುಟದಿಂದ) ಬೆಳಿಗ್ಗೆ ೬ ಗಂಟೆ ವೇಳೆಗೆ ಕ್ಷೇತ್ರ ತಲುಪಿದರು. ಹಿರಿಯರು, ಕಿರಿಯರು, ಯುವಕ - ಯುವತಿಯರು ಉತ್ಸುಕv ೆಯೊಂದಿಗೆ ಪಾಲ್ಗೊಂಡಿದ್ದರು.

ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಪತ್ನಿ ಕಾಂಚನ್ ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

- ಚಿತ್ರ : ಹರೀಶ್ ಮಾದಪ್ಪ