ಪೊನ್ನಂಪೇಟೆ, ಅ. ೨೦: ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಅಂಬಟ್ಟಿ ಗ್ರಾಮದ ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೇಖ್ ವಲಿಯುಲ್ಲಾಹಿರವರ ವಾರ್ಷಿಕ ಉರೂಸ್ (ಮಖ್ಖಾನಿ ನೇರ್ಚೆ)ನ್ನು ಮುಂಬರುವ ಫೆಬ್ರವರಿ ತಿಂಗಳ ೭ರಿಂದ ೧೧ರವರೆಗೆ ನಡೆಸಲು ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿ ನಿರ್ಧರಿಸಿದೆ.

ಫೆ. ೭ರಂದು ಅಂಬಟ್ಟಿ ಮಖಾಂ ಉರೂಸ್‌ಗೆ ಚಾಲನೆ ದೊರೆಯಲಿದೆ. ನಂತರ ಪ್ರತಿ ದಿನ ಸಂಜೆ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ಫೆ. ೧೦ರಂದು ಸಾರ್ವಜನಿಕ ಸಮ್ಮೇಳನ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಅಂಬಟ್ಟಿ ಜುಮಾ ಮಸೀದಿ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.